ಸತತ ಸೋಲಿಗೆ ಕುಗ್ಗುವ ಯುವ ಜನತೆಗೆ ಛಲ ಫಲಕೊಡುತ್ತದೆ ಎಂದು ತೋರಿಸಿಕೊಟ್ಟ ಉಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಧನೆಯ ಛಲವಿದ್ದರೆ ಸವಾಲುಗಳು ಕೂಡಾ ಪಕ್ಕಕ್ಕೆ ಸರಿದು ದಾರಿಮಾಡಿಕೊಡುತ್ತವೆ ಎನ್ನುವುದಕ್ಕೆ ಈ ಉಮಾ ಹರತಿ ಅವರು ಕೂಡಾ ಒಂದು ಉದಾಹರಣೆ!
ಸತತ ನಾಲ್ಕು ಬಾರಿ ಯಪಿಎಸ್ಸಿ ಪರೀಕ್ಷೆಯಲ್ಲಿ ಸೋಲುಂಡರೂ ಮತ್ತೆ ಛಲದಿoದ ಪರೀಕ್ಷೆ ಬರೆದು ಆಲ್ ಇಂಡಿಯಾ ರ್‍ಯಾಂಕ್‌ನಲ್ಲಿ ಮೂರನೇ ಸ್ಥಾನ ಪಡೆದು ಬೀಗಿದ್ದಾರೆ ತೆಲಂಗಾಣದ ಈ ಉಮಾ ಹರತಿ ಎನ್.
ಮೂಲತಃ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಇವರು ಹೈದರಾಬಾದ್‌ನಲ್ಲಿ ತಮ್ಮ ಪ್ರಾಥಮಿಕ, ಕಾಲೇಜು ಶಿಕ್ಷಣ ಪೂರೈಸಿ ಬಳಿಕ ಐಐಟಿ ಹೈದರಾಬಾದ್‌ನಲ್ಲಿ ಬಿ.ಟೆಕ್ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದವರು. ತಮ್ಮ ಅಧ್ಯಯನ ದಿನಗಳಲ್ಲೇ ಯಪಿಎಸ್ಸಿ ಪರೀಕ್ಷೆ ಬರೆಯಬೇಕೇಂಬ ಕನಸು ಇವರದ್ದು. ಅಧ್ಯಯನ ಪೂರ್ಣಗೊಂಡ ಬಳಿಕ ಆನ್ಲೈನ್ ಸಿವಿಲ್ ಸರ್ವೀಸೆಸ್ ಕೋಚಿಂಗ್ ಸಂಸ್ಥೆಯಲ್ಲಿ ಪರೀಕ್ಷಾ ತಯಾರಿ ನಡೆಸಿ ಪರೀಕ್ಷೆ ಬರೆಯಲು ಮುಂದಾದರು. ಆದರೆ ಸತತ ನ್ಕಾಲು ಬಾರಿ ಯಪಿಎಸ್ಸಿ ಪರೀಕ್ಷೆ ಅನುತ್ತೀರ್ಣತೆಯ ಕೊಡುಗೆ ನೀಡಿತು. ಆದರೆ ಇದರಿಂದ ಕುಗ್ಗದ ಅವರು ಮತ್ತೆ ಛಲತೊಟ್ಟು ಮತ್ತೆ ಪರೀಕ್ಷೆ ಬರೆದರಲ್ಲದೆ, ಈಗ ಆಲ್ ಇಂಡಿಯಾ ರ್ಯಾಂಕ್ ನಲ್ಲಿ ಮೂರನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
ಂದೆರಡು ಸೋಲಿನಿಂದ ಆತ್ಮವಿಶ್ವಾಸ ಕಳೆದುಕೊಳ್ಳುವ ಇಂದಿನ ಯುಜನತೆಗೆ ಉಮಾ ಗೆಲುವು ಪ್ರೇರಣೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!