ಕೆಎಸ್ಸಾರ್ಟಿಸಿಗೆ ಇನ್ನಷ್ಟು ಆರ್ಥಿಕ ಬಲ: ಹೆಚ್ಚುವರಿ 20 ಕೋಟಿ ರೂ. ಮಂಜೂರು ಮಾಡಿದ ಕೇರಳ ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂಲಭೂತ ಸೌಲಭ್ಯ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ರಾಜ್ಯ ಸರ್ಕಾರ ಹೆಚ್ಚುವರಿ 20 ಕೋಟಿ ರೂಪಾಯಿ ಆರ್ಥಿಕ ನೆರವು ಮಂಜೂರು ಮಾಡಿದೆ.
ಈ ವರ್ಷದ ಬಜೆಟ್‌ನಲ್ಲಿ ಕೆಎಸ್ಸಾರ್ಟಿಸಿಗಾಗಿ 900 ಕೋಟಿ ರೂ. ಮೀಸಲಿಡಲಾಗಿತ್ತು. ಈ ತಿಂಗಳ ಆರಂಭದಲ್ಲಿಯೇ ಸಂಸ್ಥೆಗೆ 30 ಕೋಟಿ ರೂ. ನೀಡಲಾಗಿತ್ತು. ಇದಲ್ಲದೆ ಕಳೆದ ವಾರವಷ್ಟೇ ಉದ್ಯೋಗಿಗಳ ಪಿಂಚಣಿ ವಿತರಣೆಗಾಗಿ 71 ಕೋಟಿ ರೂ.ವನ್ನು ಸರ್ಕಾರದಿಂದ ಒದಗಿಸಲಾಗಿತ್ತು. ಇದೀಗ ಮತ್ತೆ ಸರ್ಕಾರ ಹಣದ ನೆರವು ನೀಡಿದ್ದು, ಒಟ್ಟು 121 ಕೋಟಿ ರೂ. ಮೊತ್ತ ನೀಡಿದಂತಾಗಿದೆ ಎಂದು ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!