Friday, September 30, 2022

Latest Posts

ಇಂದು ಸಂಜೆ 5 ಗಂಟೆಗೆ ಹುಟ್ಟೂರಿನ ತೋಟದಲ್ಲಿ ಉಮೇಶ್ ಕತ್ತಿ ಅಂತ್ಯಕ್ರಿಯೆ

ಹೊಸದಿಗಂತ ವರದಿ, ಬೆಳಗಾವಿ:
ಹೃದಯಾಘಾತದಿಂದ ನಿಧನರಾಗಿರುವ ಸಚಿವ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆಯು ಸಕಲ ಸರಕಾರಿ ಗೌರವದೊಂದಿಗೆ ಬುಧವಾರ ಸಂಜೆ 5 ಗಂಟೆಯ ವೇಳೆಗೆ ಅವರ ಹುಟ್ಟೂರಾದ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ತೋಟದಲ್ಲಿ ನೆರವೇರಲಿದೆ.
ಬೆಲ್ಲದ ಬಾಗೇವಾಡಿಯ ವಿಶ್ವರಾಜ್ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮಧ್ಯಾಹ್ನದ 3 ಗಂಟೆಯ ಸಮಯಕ್ಕೆ ಮೃತದೇಹ ಬಾಗೇವಾಡಿಗೆ ಆಗಮಸಲಿದೆ.
ಕಬ್ಬೂರ ರಸ್ತೆಯಲ್ಲಿರುವ ಸಚಿವ ಉಮೇಶ ಕತ್ತಿ ಅವರ ತೋಟದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲ್ಲಿದ್ದು, ಈಗಾಗಲೇ ಎಲ್ಲ ಸಿದ್ದತೆಗಳು ಸಾಗಿವೆ‌.
ಉಮೇಶ ಕತ್ತಿ ಅವರ ಅಂತ್ಯಕ್ರಿಯೆ ಸಮಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವ ಸಂಪುಟದ ಹಲವಾರು ಸಚಿವರು ಭಾಗವಹಿಸಲ್ಲಿದ್ದಾರೆ ಜೊತೆಗೆ ಕತ್ತಿ ಅವರ ಅಭಿಮಾನಿಗಳು, ಹಿತೈಷಿಗಳು ಸಹ ಈಗಾಗಲೇ ಬೆಲ್ಲದ ಬಾಗೇವಾಡಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!