ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಖಂಡಿಸಿದಲ್ಲದೆ ಇದು “ನಮ್ಮ ಆತ್ಮಸಾಕ್ಷಿಗೆ ಮಾಡಿದ ಅಪಮಾನ” ಎಂದು ಬಣ್ಣಿಸಿದರು. ಹನ್ನೊಂದನೇ ತುರ್ತು ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಗುಟೆರೆಸ್ ಮಾತನಾಡಿ, ʻರಷ್ಯಾದ ಉಕ್ರೇನ್ ಆಕ್ರಮಣ ಉಕ್ರೇನ್ ಜನರಿಗೆ ಮತ್ತು ಅಂತರರಾಷ್ಟ್ರೀಯ ಸಮುದಾಯ ಹಾಗೂ ನಮ್ಮ ಸಮೂಹಕ್ಕೆ ಮಾಡಿದ ಅಪಮಾನ ಮತ್ತು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ.
ರಷ್ಯಾ-ಉಕ್ರೇನ್ ಯುದ್ಧವು ಶುರುವಾಗಿ ಇನ್ನೇನು ಒಂದು ವರ್ಷ ಸಮೀಪಿಸುತ್ತಿದೆ. ಫೆಬ್ರವರಿ 24 ರಂದು ಬಾಂಬ್ ದಾಳಿಯೊಂದಿಗೆ ಪ್ರಾರಂಭವಾದ ಯುದ್ಧ ವಿಶ್ವದ ಭೌಗೋಳಿಕ ರಾಜಕೀಯವನ್ನು ಬದಲಾಯಿಸಿತು. ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಯುಎನ್ ಮುಖ್ಯಸ್ಥರು, ಉಕ್ರೇನ್‌ನ ಮೇಲಿನ ರಷ್ಯಾದ ದಾಳಿಯು ನಮ್ಮ ಬಹುಪಕ್ಷೀಯ ವ್ಯವಸ್ಥೆಯ ಕಾರ್ನರ್‌ಸ್ಟೋನ್ ತತ್ವಗಳು ಮತ್ತು ಮೌಲ್ಯಗಳಿಗೆ ಸವಾಲು ಹಾಕುತ್ತದೆ ಎಂದು ನಾನು ಮೊದಲ ದಿನದಿಂದ ಹೇಳಿದ್ದೇನೆ ಎಂದರು.
ಇದಕ್ಕೂ ಮೊದಲು ಪೋಲೆಂಡ್‌ನಲ್ಲಿ ಯುಎಸ್ ಅಧ್ಯಕ್ಷ ಜೋ ಬಿಡೆನ್ ಬುಧವಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೊಸ START ಪರಮಾಣು ಶಸ್ತ್ರಾಸ್ತ್ರ ಕಡಿತ ಒಪ್ಪಂದದಲ್ಲಿ ತನ್ನ ಭಾಗವಹಿಸುವಿಕೆಯನ್ನು ಅಮಾನತುಗೊಳಿಸುತ್ತಿರುವುದಾಗಿ ಘೋಷಿಸಿದರು. ಉಕ್ರೇನ್ ಯುದ್ಧವು ಒಂದು ವರ್ಷದ ಗಡಿಯನ್ನು ಸಮೀಪಿಸುತ್ತಿರುವಾಗ ಬಿಡೆನ್ ಪೋಲೆಂಡ್‌ನಲ್ಲಿ ನ್ಯಾಟೋ ನಾಯಕರನ್ನು ಭೇಟಿಯಾಗುತ್ತಿದ್ದಾರೆ.