`ಭಾರತ ಭವಿಷ್ಯದ ಭರವಸೆ, ದೊಡ್ಡ ಸವಾಲುಗಳನ್ನು ನಿಭಾಯಿಸಬಲ್ಲದು’

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತವು ಭವಿಷ್ಯದ ಭರವಸೆಯನ್ನು ನೀಡುತ್ತದೆ ಜೊತೆಗೆ ಜಗತ್ತು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವಾಗಲೂ ದೇಶವು ದೊಡ್ಡ ಸಮಸ್ಯೆಗಳನ್ನು ಒಂದೇ ಬಾರಿಗೆ ಪರಿಹರಿಸಬಹುದು ಎಂಬುದನ್ನು ಸಾಬೀತುಪಡಿಸಿದೆ ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಮತ್ತು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಹ-ಅಧ್ಯಕ್ಷ ಬಿಲ್ ಗೇಟ್ಸ್ ತಮ್ಮ ಬ್ಲಾಗ್ “ಗೇಟ್ಸ್ ನೋಟ್ಸ್” ನಲ್ಲಿ ಹೇಳಿದ್ದಾರೆ.

ತಮ್ಮ ಬ್ಲಾಗ್‌ನಲ್ಲಿ ಬಿಲ್ ಗೇಟ್ಸ್, ಸರಿಯಾದ ಆವಿಷ್ಕಾರಗಳು ಮತ್ತು ಮಾರಣಾಂತಿಕ ಕಾಯಿಲೆಗಳ ಹೊರಾಟದೊಂದಿಗೆ ಪ್ರಪಂಚವು ಹಲವಾರು ದೊಡ್ಡ ಸಮಸ್ಯೆಗಳ ಮೇಲೆ ಏಕಕಾಲದಲ್ಲಿ ಪ್ರಗತಿ ಸಾಧಿಸಲು ಸಮರ್ಥವಾಗಿದೆ ಎಂದು ನಂಬಿದ್ದರು. ಆದರೆ, ಈ ಸಮಯದಲ್ಲಿ  “ಎರಡನ್ನೂ ಒಂದೇ ಸಮಯದಲ್ಲಿ ಪರಿಹರಿಸಲು ಸಾಕಷ್ಟು ಸಮಯ ಅಥವಾ ಹಣವಿಲ್ಲ.” ಎಂಬ ಮಾತುಗಳನ್ನು ಕೇಳಿ ದಿಗ್ಬ್ರಾಂತನಾದೆ ಎಂದರು. ಭಾರತ ಮಾತ್ರ ಎಲ್ಲಾ ಪ್ರತಿಕ್ರಿಯೆಗಳನ್ನು ತಪ್ಪಾಗಿ ಸಾಬೀತುಪಡಿಸಿತು. “ಭಾರತವು ಸಾಧಿಸಿರುವ ಗಮನಾರ್ಹ ಪ್ರಗತಿಗಿಂತ ಉತ್ತಮ ಪುರಾವೆ ಇಲ್ಲ” ಎಂದು ಗೇಟ್ಸ್ ತಮ್ಮ ಬ್ಲಾಗ್‌ನಲ್ಲಿ ಹೇಳಿದ್ದಾರೆ.

“ಒಟ್ಟಾರೆಯಾಗಿ ಭಾರತವು ನನಗೆ ಭವಿಷ್ಯದ ಭರವಸೆಯನ್ನು ನೀಡುತ್ತದೆ. ಭಾರತವು ಇನ್ನೂ ದೊಡ್ಡ ಸವಾಲುಗಳನ್ನು ನಿಭಾಯಿಸಬಲ್ಲದು ದೇಶವು ಪೋಲಿಯೊವನ್ನು ನಿರ್ಮೂಲನೆ, ಎಚ್ಐವಿ, ಬಡತನ, ಶಿಶು ಮರಣ ಕಡಿಮೆ ಮಾಡಿದೆ. ನೈರ್ಮಲ್ಯ ಮತ್ತು ಆರ್ಥಿಕ ಸೇವೆಗಳಿಗೆ ಪ್ರವೇಶವನ್ನು ಹೆಚ್ಚಿಸಿದೆ” ಎಂದರು.

ಲಸಿಕೆಗಳನ್ನು ವಿತರಿಸಲು ದೊಡ್ಡ ಪ್ರಮಾಣದ ವಿತರಣಾ ಚಾನೆಲ್‌ಗಳನ್ನು ರಚಿಸಲು ಭಾರತವು ತಜ್ಞರು ಮತ್ತು ನಿಧಿಗಳೊಂದಿಗೆ (ಗೇಟ್ಸ್ ಫೌಂಡೇಶನ್ ಸೇರಿದಂತೆ)ಹಲವೆಡೆ ಕೆಲಸ ಮಾಡಿದೆ. ಕೃಷಿ, ಕೈಗಾರಿಕೆ, ಆಹಾರ ವಿತರಣೆ, ಉದ್ಯೋಗ ಎಲ್ಲದರಲ್ಲೂ ಭಾರತ ಮುಂದಿದೆ.
ದೂರದ ಕೃಷಿ ಸಮುದಾಯಗಳಲ್ಲಿ ತ್ಯಾಜ್ಯವನ್ನು ಜೈವಿಕ ಇಂಧನ ಮತ್ತು ರಸಗೊಬ್ಬರಗಳಾಗಿ ಪರಿವರ್ತಿಸಲು ಬ್ರೇಕ್‌ಥ್ರೂ ಎನರ್ಜಿ ಫೆಲೋ ವಿದ್ಯುತ್ ಮೋಹನ್ ಮತ್ತು ಅವರ ತಂಡ ಮಾಡುತ್ತಿರುವ ಕೆಲಸದಂತೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಜಗತ್ತಿಗೆ ಸಹಾಯ ಮಾಡುವ ಪ್ರಗತಿಯ ಕುರಿತು ಕೆಲಸ ಮಾಡುತ್ತಿದ್ದಾರೆಂದು ಶ್ಲಾಘಿಸಿದರು.

ನಾವು ಒಟ್ಟಾಗಿ ಕೆಲಸ ಮಾಡಿದರೆ, ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಬಹುದು ಮತ್ತು ಅದೇ ಸಮಯದಲ್ಲಿ ಜಾಗತಿಕ ಆರೋಗ್ಯವನ್ನು ಸುಧಾರಿಸಬಹುದು ಎಂದು ನಾನು ನಂಬುತ್ತೇನೆ” ಎಂದು ಬಿಲ್‌ಗೇಟ್ಸ್‌ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!