ಹೊಸದಿಗಂತ ವರದಿ, ಮಳವಳ್ಳಿ:
ಸಾಲಬಾಧೆ ತಾಳಲಾರದೇ ಯುವ ರೈತನೊಬ್ಬ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಕೋರೇಗಾಲ ಗ್ರಾಮದಲ್ಲಿ ನಡೆದಿದೆ.
ಕೋರೇಗಾಲ ಗ್ರಾಮದ ಲೇ. ವೀರೇಗೌಡರ ಪುತ್ರ ಕೆ.ವಿ ರೋಹಿತ್ (43) ಸಾವನ್ನಪ್ಪಿದ್ದ ದುರ್ದೈವಿ. ಕೃಷಿ ಪತ್ತಿನ ಸಹಕಾರ ಸೇರಿದಂತೆ ಇತರೆ ಕಡೆಗಳಲ್ಲಿ 4 ಲಕ್ಷಕ್ಕೂ ಅಧಿಕವಾಗಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಸಾಲ ತೀರಿಸಲಾಗದ ಮನನೊಂದಿದ್ದ ರೋಹಿತ್ ವಾಸವಿದ್ದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಅದು ಮೃತರ ಪತ್ನಿ ಜೀವಿತ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ವರಸುದಾರರಿಗೆ ಒಪ್ಪಿಸಲಾಯಿತು.