165 ಬಾಲ್‌ನಲ್ಲಿ ಅಜೇಯ 407 ರನ್: ಸಾಗರದ ತನ್ಮಯ್ ಸಾಧನೆ

ಹೊಸದಿಗಂತ ವರದಿ, ಶಿವಮೊಗ್ಗ:

ಸಾಗರ ಪಟ್ಟಣದ ಕ್ರಿಕೇಟ್ ಕ್ಲಬ್ ಆಫ್ ಸಾಗರನ ಆಟಗಾರ ತನ್ಮಯ್ ಮಂಜುನಾಥ್ ಶಿವಮೊಗ್ಗದ ಪೆಸಿಟ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ 16 ವರ್ಷದೊಳಗಿನ ವಲಯ ಮಟ್ಟದ ಲೀಗ್ ಪಂದ್ಯಾವಳಿಯಲ್ಲಿ ಅಜೇಯ 407ರನ್ ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ.

ಶನಿವಾರ ಕ್ರಿಕೇಟ್ ಕ್ಲಬ್ ಆಫ್ ಸಾಗರ್ ಮತ್ತು ಭದ್ರಾವತಿ ಎನ್.ಟಿ.ಪಿ.ಸಿ. ನಡುವೆ 16 ವರ್ಷದೊಳಗಿನ ಲೆದರ್ ಬಾಲ್ ಲೀಗ್ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್ ಮಾಡಿದ ಕ್ರಿಕೇಟ್ ಕ್ಲಬ್ ಆಫ್ ಸಾಗರ್‌ನ ಆರಂಭಿಕ ದಾಂಡಿಗ ತನ್ಮಯ್ ಮಂಜುನಾಥ್ 165 ಬಾಲ್‌ನಲ್ಲಿ 48 ಬೌಂಡರಿ, 24 ಸಿಕ್ಸರ್ ಒಳಗೊಂಡಂತೆ ಅಜೇಯ 407 ರನ್ ಗಳಿಸಿದ್ದಾರೆ. ಇನ್ನೋರ್ವ ಆಟಗಾರ ಅಂಶು 127 ರನ್ ಗಳಿಸಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕ್ರಿಕೇಟ್ ಕ್ಲಬ್ ಆಫ್ ಸಾಗರ ತಂಡವು 583ರನ್ ಕಲೆ ಹಾಕಿತು. ತನ್ಮಯ್ ಮತ್ತು ಅಂಶು ಎ. 350ರನ್ ಜೊತೆಯಾಟ ಆಡಿದರು. ದ್ವಿತೀಯ ಇನಿಂಗ್ಸ್ ಬ್ಯಾಟ್ ಮಾಡಿದ ಭದ್ರಾವತಿಯ ಎನ್.ಟಿ.ಪಿ.ಸಿ.73 ರನ್‌ಗೆ ಆಲೌಟ್ ಆುತು. ಕ್ರಿಕೇಟ್ ಕ್ಲಬ್ ಆಫ್ ಸಾಗರ ಪರವಾಗಿ ಅಂಶು ಎ. 5 ಮತ್ತು  ಅಜಿತ್ 4 ವಿಕೇಟ್ ಪಡೆದು ಮಿಂಚಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!