May 19, 2026
Tuesday, May 19, 2026
spot_img

ವಿಶ್ವಸಂಸ್ಥೆ ವೇದಿಕೆಯಲ್ಲೂ ಮುಗಿಯದ ಜಗಳ: ಮಧ್ಯಸ್ಥಿಕೆಯಿಂದ ಹಿಂದೆ ಸರಿದ ಪಾಕಿಸ್ತಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಸಂಬಂಧಗಳು ಅಕ್ಷರಶಃ ಹದಗೆಟ್ಟಿದ್ದು, ಕೊನೆಯ ಹಂತದ ಸಂಧಾನ ಮಾತುಕತೆಗಳೂ ಕೂಡ ವಿಫಲವಾಗಿವೆ. ಉಭಯ ದೇಶಗಳ ನಡುವೆ ಸಮನ್ವಯ ಮೂಡಿಸಲು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ನಡೆಸಿದ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ. ಇರಾನ್ ಎರಡನೇ ಸುತ್ತಿನ ಮಾತುಕತೆಯಲ್ಲಿ ಭಾಗವಹಿಸಲು ಸ್ಪಷ್ಟವಾಗಿ ನಿರಾಕರಿಸುವ ಮೂಲಕ ಸಂಧಾನದ ಹಾದಿಯನ್ನು ಮುಚ್ಚಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬೆಳವಣಿಗೆಯ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. “ಇರಾನ್ ತನ್ನ ಹಠಮಾರಿ ಧೋರಣೆ ಮುಂದುವರಿಸಿದರೆ ಆ ದೇಶವನ್ನೇ ನಾಶ ಮಾಡಬೇಕಾಗುತ್ತದೆ” ಎಂಬ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಅಮೆರಿಕವು ಇರಾನ್‌ನ ಹಡಗೊಂದರ ಮೇಲೆ ದಾಳಿ ನಡೆಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸ್ಫೋಟಕಗೊಳಿಸಿದೆ.

ಅಮೆರಿಕದ ದಾಳಿಗೆ ಕಿಂಚಿತ್ತೂ ಎದರದ ಇರಾನ್, ಪ್ರತಿಯಾಗಿ ಸವಾಲು ಎಸೆದಿದೆ. ಜಗತ್ತಿನ ಪ್ರಮುಖ ವ್ಯಾಪಾರ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲಿದೆ ಎಂದು ಇರಾನ್ ಘೋಷಿಸಿದೆ. ಈ ಮೂಲಕ ಅಂತಾರಾಷ್ಟ್ರೀಯ ತೈಲ ಸಾಗಾಣಿಕೆಗೆ ಅಡ್ಡಿಪಡಿಸುವ ಸೂಚನೆಯನ್ನು ನೀಡಿದೆ.

ಮಾತುಕತೆಯ ಮೂಲಕ ಶಾಂತಿ ಸ್ಥಾಪಿಸಲು ಮುಂದಾಗಿದ್ದ ಪಾಕಿಸ್ತಾನಕ್ಕೆ ಈಗ ಮುಖಭಂಗವಾಗಿದೆ. ಇರಾನ್ ಮಾತುಕತೆಯಿಂದ ಹಿಂದೆ ಸರಿದಿರುವುದರಿಂದ, ದಕ್ಷಿಣ ಏಷ್ಯಾದಲ್ಲಿ ಶಾಂತಿ ಕಾಪಾಡುವ ಶಹಬಾಜ್ ಶರೀಫ್ ಅವರ ಯೋಜನೆಗಳು ಸಂಪೂರ್ಣವಾಗಿ ಹಳಿ ತಪ್ಪಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !