November 10, 2026
Tuesday, November 10, 2026
spot_img

ಹಿಂದೆಂದೂ ಹೀಗೆ ಆಗೇ ಇಲ್ಲ! ನಂದಿನಿ ಹಾಲಿನ ಪ್ಯಾಕೆಟ್‌ ಒಳಗೆ ಸತ್ತ ಜೇಡ ಪತ್ತೆ: ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಾಲಿನ ದರ ಏರಿಕೆಯಿಂದಾಗಿ ಕರ್ನಾಟಕ ಹಾಲು ಮಹಾಮಂಡಳಿ ಸುದ್ದಿಯಲ್ಲಿತ್ತು. ಇಷ್ಟೆಲ್ಲಾ ದುಡ್ಡು ಹೆಚ್ಚಳ ಮಾಡುವಾಗ ಹೈಜಿನ್‌ ಬಗ್ಗೆ ಗಮನ ಯಾಕಿಲ್ಲ? ನಂದಿನಿ ಹಾಲಿನ ಪ್ಯಾಕೆಟ್‌ ಒಳಗೆ ಸತ್ತ ಜೇಡ ಸಿಕ್ಕಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ಕೆಎಂಎಫ್‌ಗೆ ದೂರು ನೀಡಿದ್ದು, ಹಾಲಿನ ಸಂಸ್ಕರಣಾ ಘಟಕಗಳಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟದ ಬಗ್ಗೆ ಅನುಮಾನ ಮೂಡುವಂತಾಗಿದೆ. ನಾಗೂರ್‌ ರೋಜಾ ಎನ್ನುವವರು ಫ್ರಿಡ್ಜ್‌ನಲ್ಲಿಟ್ಟಿದ್ದ ಹಾಲಿನ ಪ್ಯಾಕೆಟ್‌ ಓಪನ್‌ ಮಾಡಿ ಕಾಯಿಸಲು ಪಾತ್ರೆಗೆ ಸುರಿದಿದ್ದಾರೆ. ಈ ವೇಳೆ ಸತ್ತ ಜೇಡ ಪಾತ್ರೆಗೆ ಬಿದ್ದಿದೆ.

ಇದನ್ನು ನೋಡಿ ತುಂಬಾ ಶಾಕ್‌ ಆಯಿತು. ವರ್ಷಗಳಿಂದ ಕೆಎಂಎಫ್‌ ಹಾಲಿನ ಉತ್ಪನ್ನಗಳನ್ನು ಬಳಕೆ ಮಾಡುತ್ತಿದ್ದೇವೆ. ಹಿಂದೆಂದೂ ಹೀಗೆ ಆಗಿಯೇ ಇಲ್ಲ. ಹಾಲಿನ ಪ್ಯಾಕೆಟ್‌ ತಂದ ನಂತರ ಅದನ್ನು ಹೊರಗಿನಿಂದ ವಾಶ್‌ ಮಾಡಿ ಫ್ರಿಡ್ಜ್‌ನಲ್ಲಿ ಎತ್ತಿಟ್ಟೆವು. ನಂತರ ಹಾಲನ್ನು ತೆಗೆದಾಗ ಪ್ಯಾಕ್‌ ಒಳಗಿನಿಂದ ಜೇಡ ಬಂದಿದೆ ಎಂದಿದ್ದಾರೆ.

ಈ ಸಂಬಂಧ ಸೋಮವಾರ ಕೆಎಂಎಫ್‌ನ ಇಬ್ಬರು ಅಧಿಕಾರಿಗಳು ರೋಜಾ ಅವರ ಮನೆಗೆ ಭೇಟಿ ನೀಡಿ ಹಾಲಿನ ಮಾದರಿ ಮತ್ತು ಪ್ಯಾಕೆಟ್‌ ಅನ್ನು ಪರಿಶೀಲನೆಗಾಗಿ ಸಂಗ್ರಹಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಿ, ಹಾಲು ಪ್ಯಾಕಿಂಗ್ ಮಾಡಿದ ಘಟಕವನ್ನು ಪತ್ತೆಹಚ್ಚುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Must Read