ಮರೆಯಾಗದ ಅಪ್ಪು ನಗು: ಪುನೀತ್​ ಕುರಿತು ಅಮಿತಾಭ್​ ಬಚ್ಚನ್ ಭಾವುಕ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ರತ್ನ, ನಟ ಪುನೀತ್​ ರಾಜ್​ಕುಮಾರ್​ ನಮ್ಮೊಂದಿಗೆ ಇಲ್ಲ ವಾದರೂ ಸದಾ ಒಂದಲ್ಲ ಒಂದು ವಿಚಾರಗಳ ಮೂಲಕ ಎಲ್ಲರಲ್ಲಿ ನೆನಪಾಗುತ್ತಾ ಇರುತ್ತಾರೆ.

ಅಪ್ಪು ಅಂದರೆ ಆ ನಗು ಮುಖ, ಆ ಆತ್ಮೀಯ ಮಾತು ಎಂದಿಗೂ ಅಭಿಮಾನಿಗಳಿಗೆ, ಆಪ್ತರಿಗೆ, ಕುಟುಂಬದವರಿಗೆ ಮರೆಯಲಾಗದ ಗುಣಗಳು.

https://mobile.twitter.com/Ashwini_PRK/status/1590352221388279808?cxt=HHwWgMDQ-eq6iJIsAAAA

ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರಭಾಷೆಯ ಅನೇಕ ಸೆಲೆಬ್ರಿಟಿಗಳಿಗೂ ಅಪ್ಪು ಕಂಡರೆ ಅಚ್ಚುಮೆಚ್ಚು. ಅಪ್ಪು ಅವರ ನಗುಮುಖವನ್ನು ಇಷ್ಟಪಡದವರೇ ಇಲ್ಲ.

ಇದೀಗ ದಿಗ್ಗಜ ಬಾಲಿವುಡ್ ನಟ ಅಮಿತಾಭ್​ ಬಚ್ಚನ್​ಕೂಡ ಪುನೀತ್​ ರಾಜ್​ಕುಮಾರ್​ ಸ್ಮೈಲ್​ ಬಗ್ಗೆ ಮಾತನಾಡಿದ್ದಾರೆ.

ಈ ವಿಡಿಯೋವನ್ನು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಪುನೀತ್​ ರಾಜ್​ಕುಮಾರ್​ ಅವರನ್ನು ನಾವೆಲ್ಲರೂ ಅಪ್ಪು ಅಂತ ಪ್ರೀತಿಯಿಂದ ಕರೆಯುತ್ತಿದ್ವಿ. ಅವರ ಬಗ್ಗೆ ಭೂತಕಾಲದಲ್ಲಿ ಮಾತನಾಡಲು ಕಷ್ಟ ಆಗುತ್ತದೆ’ ಎಂದು ಬಿಗ್​ ಬಿ ಮಾತು ಆರಂಭಿಸಿದ್ದಾರೆ. ‘ಅವರು ಚಿಕ್ಕ ಬಾಲಕನಾಗಿದ್ದಾಗ ನಾನು ಮೊದಲ ಬಾರಿ ಭೇಟಿ ಮಾಡಿದೆ. ಯಾವಾಗ ಭೇಟಿ ಆದರೂ ಕೂಡ ಅವರ ಮುಖದಲ್ಲಿ ಸುಂದರವಾದ ನಗು ಇರುತ್ತಿತ್ತು. ನಮ್ಮಲ್ಲರಿಗೂ ಅವರು ಹತ್ತಿರವಾಗಲು ಆ ನಗುವೇ ಕಾರಣ ಅಂತ ನಾನು ನಂಬಿದ್ದೇನೆ’ ಎಂದಿದ್ದಾರೆ​.

‘ಗಂಧದ ಗುಡಿ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಅವರು ನಟಿಸಿಲ್ಲ. ಅವರು ತಾವಾಗಿಯೇ ಕಾಣಿಸಿಕೊಂಡಿದ್ದಾರೆ. ಸಮೃದ್ಧವಾದ ಕರ್ನಾಟಕದ ಕಾಡನ್ನು ಎಲ್ಲರಿಗೂ ಪರಿಚಯಿಸಿದ್ದಾರೆ. ಅಪ್ಪು ಅವರ ಮ್ಯಾಜಿಕಲ್​ ಜರ್ನಿಯಲ್ಲಿ ಎಲ್ಲರೂ ಭಾಗವಹಿಸಿ. ಪರಿಸರದ ಜೊತೆ ಸಾಮರಸ್ಯದಿಂದ ಬದುಕುವ ಬಗ್ಗೆ ಪುನೀತ್​ ಅವರು ಈ ಸಾಕ್ಷ್ಯಚಿತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ನಮ್ಮ ಮಕ್ಕಳಿಗಾಗಿ ಇರುವ ಚಿತ್ರ ಇದು. ನಾವೆಲ್ಲರೂ ನಮ್ಮ ಅರಣ್ಯ ಸಂಪತ್ತಿನ ಬಗ್ಗೆ ಹೆಮ್ಮೆ ಪಡುವಂತಹ ಚಿತ್ರ. ಗಂಧದ ಗುಡಿಗೆ ಯಶಸ್ಸು ಸಿಗಲಿ’ ಎಂದು ಅಮಿತಾಭ್​ ಬಚ್ಚನ್​ ಹೇಳಿದ್ದಾರೆ.

ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುವ ಮೂಲಕ ಅಮಿತಾಭ್​ ಬಚ್ಚನ್​ ಅವರಿಗೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಧನ್ಯವಾದ ಸಲ್ಲಿಸಿದ್ದಾರೆ. ‘ಅಮಿತಾಭ್ ಬಚ್ಚನ್ ಅವರೇ, ನಿಮ್ಮ ಈ ಭಾವನಾತ್ಮಕ ಮಾತುಗಳಿಗೆ ಮತ್ತು ವಿಶೇಷ ಸಂದೇಶಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು’ ಎಂದು ಅಶ್ವಿನಿ ಪೋಸ್ಟ್​ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!