ಟೀಂ ಇಂಡಿಯಾಕ್ಕೆ ಓಪನರ್‌ ಗಳೇ ವಿಲನ್: ರೋಹಿತ್ ಫ್ಲಾಪ್ ಶೋ, ಬಲಿಷ್ಠ ತಂಡಗಳಿಗೆ ಬೆದರುವ ರಾಹುಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ.. ಫೈನಲ್‌ ತಲುಪುವ ನೆಚ್ಚಿನ ತಂಡ ಎನಿಸಿಕೊಂಡಿದ್ದ ಟೀಂ ಇಂಡಿಯಾ ಅತ್ಯಂತ ಹೀನಾಯ ಸೋಲನ್ನನುಭವಿಸುವ ಮೂಲಕ ಸೆಮೀಸ್‌ ನಲ್ಲಿ ಸೋತು ಹೊರಬಿದ್ದಿದೆ. ಸತತ ವೈಫಲ್ಯ ಅನುಭವಿಸುತ್ತಿದ್ದ ಭಾರತದ ಆರಂಭಿಕರು ಮತ್ತೆ ವಿಫಲರಾಗುವ ಮೂಲಕ ಭಾರತಕ್ಕೆ ವಿಲನ್‌ ಆಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಹುಲ್-‌ ರೋಹಿತ್‌ ರಿಂದ ಭಾರತ ಉತ್ತಮ ಆರಂಭ ಪಡೆದೇ ಇಲ್ಲ. ನಿಧಾನಗತಿಯಲ್ಲಿ ಇನ್ನಿಂಗ್ಸ್‌ ಆರಂಭಿಸುವ ಭಾರತ ಆರಂಭದಲ್ಲೇ ಓಪನರ್ ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಒಳಗಾಗುತ್ತಿದೆ. ಸ್ವತಃ ತಂಡದ ನಾಯಕರೂ ಆದ ರೋಹಿತ್ ಶರ್ಮಾ ಇತ್ತೀಚಿನ ದಿನಗಳಲ್ಲಿ ಸಂಫೂರ್ಣವಾಗಿ ಲಯ ತಪ್ಪಿದ್ದಾರೆ. ರೋಹಿತ್ ಒಟ್ಟು 6 ಪಂದ್ಯಗಳನ್ನು ಆಡಿ ಕೇವಲ 116 ರನ್ ಮಾತ್ರ ಕಲೆಹಾಕಿದ್ದಾರೆ. ರೋಹಿತ್ 106.42 ರ ಕಳಪೆ ಸ್ಟ್ರೈಕ್ ರೇಟ್​ನಲ್ಲಿ ಆಡಿದ್ದಾರೆ.
ನೆದರ್ಲೆಂಡ್ಸ್ ವಿರುದ್ಧ ತಕ್ಕಮಟ್ಟಿಗೆ ಆಡಿ ಅರ್ಧಶತಕ ಹೊಡೆದಿದ್ದನ್ನು ಹೊರತುಪಡಿಸಿದರೆ ರೋಹಿತ್ ಪಾಕಿಸ್ತಾನ (4), ದಕ್ಷಿಣ ಆಫ್ರಿಕಾ (15), ಬಾಂಗ್ಲಾದೇಶ (2) ಮತ್ತು ಜಿಂಬಾಬ್ವೆ (15) ವಿರುದ್ಧ ಮುಗ್ಗರಿಸಿದ್ದಾರೆ. ಇನ್ನೊಬ್ಬ ಆರಂಭಿಕ ಕೆ ಎಲ್‌ ರಾಹುಲ್‌ ಮಹತ್ವದ ಪಂದ್ಯಗಳಲ್ಲಿ ಎಂದಿಗೂ ನಿರೀಕ್ಷೆ ಉಳಿಸಿಕೊಂಡಿಲ್ಲ. ದುರ್ಬಲ ತಂಡಗಳೆದುರು ತಕ್ಕಮಟ್ಟಿಗೆ ಆಡುವ ರಾಹುಲ್‌ ಉತ್ತಮ ಬೌಲಿಂಗ್‌ ಪಡೆಯಿರುವ ತಂಡಗಳ ಎಸೆತಗಳನ್ನೆದುರಿಸಲು ತಿಣುಕಾಡುತ್ತಾರೆ. ಇಂಗ್ಲೆಂಡ್‌ ಎದುರು ತಮ್ಮ ಕಳಪೆ ಆಟ ಮುಂದುವರೆಸಿದ ಉಪನಾಯಕ ರಾಹುಲ್ ಈ ಪಂದ್ಯದಲ್ಲೂಕೇವಲ 2 ರನ್‌ ಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿಕೊಂಡರು.
27 ರನ್ ಗಳಿಸಲು 28 ಎಸೆತಗಳನ್ನು ತೆಗೆದುಕೊಂಡ ರೋಹಿತ್‌ ಶರ್ಮಾ ತಂಡದ ಸೋಲಿಗೆ ಪವರ್‌ ಪ್ಲೇ ನಲ್ಲೇ ಮುನ್ನುಡಿ ಬರೆದರು. ಪವರ್‌ ಪೇ ನಿಂದ ಭಾರತಕ್ಕೆ ಯಾವುದೇ ಲಾಭ ಸಿಗಲಿಲ್ಲ. ರೋಹಿತ್‌ ಇನ್ನಿಂಗ್ಸ್‌ ನಿಂದ ಇಡೀ ತಂಡ ಸಂಕಷ್ಟಕ್ಕೆ ಸಿಲುಕಿತು. ರೋಹಿತ್‌ ಔಟಾಗುವ ವೇಳೆ ಭಾರತ 8.5 ಓವರ್‌ಗಳಲ್ಲಿ ಕೇವಲ 56 ರನ್‌ ಗಳಿಸಿತ್ತು. ಇದರಿಂದ ಕೊಹ್ಲಿಗೆ ನಿರ್ಭೀತಿಯಿಂದ ಆಡಲು ಸಾಧ್ಯವಾಗಲಿಲ್ಲ. ಪ್ರತಿ ಎಸೆತದಲ್ಲೂ ರನ್‌ ಗಳಿಸಲೇ ಬೇಕಾದ ಒತ್ತಡಕ್ಕೆ ಸಿಲುಕಿದ ಸೂರ್ಯಕುಮಾರ್ ಯಾದವ್ ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್‌ ಒಪ್ಪಿಸಬೇಕಾಯ್ತು. ಈ ವೇಳೆ ಉತ್ತಮ ಲಯ ಕಂಡುಕೊಂಡ ಇಂಗ್ಲೆಂಡ್‌ ಸ್ಪಿನ್ನರ್‌ ಗಳು ಭಾರತದ ರನ್‌ ರೇಟ್‌ ಗೆ ಕಡಿವಾಣ ಹಾಕಿದರು. ಭಾರತದ ಆರಂಭಿಕರನ್ನು ಬದಲಾಯಿಸಲು ಇದು ಸಕಾಲ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!