ಏಕರೂಪ ನಾಗರಿಕ ಸಂಹಿತೆ ಚರ್ಚೆ: ಮುಸ್ಲಿಮರ ಬೃಹತ್ ಸಮಾವೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಸ್ಲಿಂ ಧರ್ಮಗುರುಗಳು ಹಾಗೂ ಇಸ್ಲಾಂ ಸಂಘಟನೆಯಾದ ಉಲಮಾ-ಇ-ಹಿಂದ್ (JUH) ಫೆಬ್ರವರಿ 12ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಏಕರೂಪ ನಾಗರಿಕ ಸಂಹಿತೆ (Uniform Civil Code) ಬಗ್ಗೆ ಚರ್ಚಿಸಲು ಬೃಹತ್ ಸಮಾವೇಶ ಹಮ್ಮಿಕೊಂಡಿದೆ.

ಮೂರು ದಿನಗಳ ಕಾಲ ನಡೆಯುವ ಈ ಸಮಾವೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಿದೆ. ಈ ಮೂಲಕ ಮದರಸಾಗಳಿಗೆ ಸ್ವಾಯತ್ತತೆ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಮುಸ್ಲಿಮರಿಗೆ ಮೀಸಲಾತಿ (Reservation For Muslism) ಸಮಸ್ಯೆ ಪರಿಹರಿಸಲು ಹಲವು ನಿರ್ಣಯಗಳನ್ನು ಇಲ್ಲಿ ಕೈಗೊಳ್ಳಲಾಗುತ್ತದೆ.

ಅಧಿವೇಶನದಲ್ಲಿ ದೇಶದೆಲ್ಲೆಡೆಯಿಂದ 10 ಸಾವಿರ ಮುಸ್ಲಿಂ ಧರ್ಮಗುರುಗಳು, ಎನ್‌ಜಿಒ (NGO) ಪ್ರತಿನಿಧಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಸೇರಿ ಸಾವಿರಾರು ಮುಸ್ಲಿಂ ಮುಖಂಡರು (Muslim Community) ಪಾಲ್ಗೊಳ್ಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!