ಜಾರ್ಖಂಡ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಅವಕಾಶ ನೀಡಲ್ಲ: ಸಿಎಂ ಹೇಮಂತ್ ಸೊರೆನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾರ್ಖಂಡ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಅವಕಾಶ ನೀಡಲ್ಲ ಎಂದು ಸಿಎಂ ಹೇಮಂತ್ ಸೊರೆನ್ ಹೇಳಿದ್ದಾರೆ.

ಜಾರ್ಖಂಡ್ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ ತಿರುಗೇಟು ನೀಡಿರುವ ಸಿಎಂ ಹೇಮಂತ್ ಸೊರೆನ್, ಬುಡಕಟ್ಟು ಸಂಸ್ಕೃತಿ, ಭೂಮಿ ಮತ್ತು ಹಕ್ಕುಗಳನ್ನು ರಕ್ಷಿಸಲು ಚೋಟಾ ನಾಗ್ ಪುರ ಮತ್ತು ಸಂತಾಲ್ ಪರಗಣ ಹಿಡುವಳಿ ಕಾಯ್ದೆ ಗಳ ಜಾರಿಗೆ ಮಾತ್ರ ಜಾರ್ಖಂಡ್ ಬದ್ಧವಾಗಿದ್ದು, ಏಕರೂಪ ನಾಗರಿಕ ಸಂಹಿತೆ ಅಥವಾ NRC ಜಾರಿಯಾಗುವುದಿಲ್ಲ. ವಿಷ ಉಗುಳುವ ಬಿಜೆಪಿಯವರಿಗೆ ಆದಿವಾಸಿಗಳು, ಸ್ಥಳೀಯರು, ದಲಿತರು ಅಥವಾ ಹಿಂದುಳಿದ ಸಮುದಾಯಗಳ ಬಗ್ಗೆ ಕಾಳಜಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

JMM ನೇತೃತ್ವದ ಒಕ್ಕೂಟ ಮಾವೋವಾದಿಗಳ ಬೆದರಿಕೆಯನ್ನು ಉತ್ತೇಜಿಸುತ್ತದೆ ಎಂಬ ಅಮಿತ್ ಶಾ ಹೇಳಿಕೆ ವಿರುದ್ಧ ಹೇಮಂತ್ ಸೊರೆನ್ ಕಿಡಿಕಾರಿದ್ದು, ಬಿಜೆಪಿಯನ್ನು “ಒಣಗುತ್ತಿರುವ ಮರ” ಕ್ಕೆ ಹೋಲಿಸಿ, ಅದನ್ನು ಬೇರುಸಹಿತ ಕಿತ್ತುಹಾಕುವ ಪ್ರತಿಜ್ಞೆ ಮಾಡಿದರು.

ಕಲ್ಲಿದ್ದಲು ಕಂಪನಿಗಳು ಗಣಿಗಾರಿಕೆಗಾಗಿ ರಾಜ್ಯಕ್ಕೆ ನೀಡಬೇಕಾದ ಕಲ್ಲಿದ್ದಲು ಬಾಕಿಯಲ್ಲಿ ಕೇಂದ್ರವು ಇನ್ನೂ 1.36 ಲಕ್ಷ ಕೋಟಿ ರೂ.ಗಳನ್ನು ಪಾವತಿಸಬೇಕಾಗಿದ್ದು, ಬಿಜೆಪಿಯು ತನ್ನ ಸರ್ಕಾರವನ್ನು ದುರ್ಬಲಗೊಳಿಸುತ್ತಿದೆ. ಬಾಂಗ್ಲಾದೇಶದ ಒಳನುಸುಳುವಿಕೆ ಕುರಿತು ಕೇಂದ್ರದ ನಿಲುವನ್ನು ಪ್ರಶ್ನಿಸಿದ ಸೊರೆನ್, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಭಾರತಕ್ಕೆ ಬಂದಿಳಿಯಲು ಸರ್ಕಾರ ಏಕೆ ಅನುಮತಿ ನೀಡಿತು ಎಂದು ಪ್ರಶ್ನಿಸಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!