ಶೀಘ್ರದಲ್ಲೇ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಜಡ್ಜ್ ಶೇಖರ್ ಯಾದವ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಬಹುಸಂಖ್ಯಾತರ ಇಚ್ಛೆಗೆ ಅನುಗುಣವಾಗಿ ದೇಶವು ನಡೆಯುತ್ತದೆ ಎಂದು ಹೇಳಲು ಯಾವುದೇ ಹಿಂಜರಿಕೆಯಿಲ್ಲ ಎಂದು ಅಲಹಾಬಾದ್ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶ ಶೇಖರ್ ಯಾದವ್ ಹೇಳಿದರು.

ಪ್ರಯಾಗರಾಜ್‌ನಲ್ಲಿ ವಿಶ್ವ ಹಿಂದೂ ಪರಿಷತ್ (VHP) ಕಾನೂನು ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಏಕರೂಪ ನಾಗರಿಕ ಸಂಹಿತೆಯ ಸಾಂವಿಧಾನಿಕ ಅಗತ್ಯದ ಕುರಿತು ಉಪನ್ಯಾಸ ನೀಡಿದರು.

ಇದು ಭಾರತ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಈ ದೇಶವು ಭಾರತದಲ್ಲಿ ವಾಸಿಸುವ ಬಹುಸಂಖ್ಯಾತರ ಇಚ್ಛೆಗೆ ಅನುಗುಣವಾಗಿ ನಡೆಯುತ್ತದೆ. ನ್ಯಾಯಾಧೀಶರಾಗಿ ನಾನು ಇದನ್ನು ಹೇಳಬಾರದು ಅಂತಲ್ಲ. ವಾಸ್ತವದಲ್ಲಿ ಕಾನೂನು ಬಹುಮತಕ್ಕೆ ಅನುಗುಣವಾಗಿ ಕೆಲಸ ಮಾಡುತ್ತದೆ. ಕುಟುಂಬ ಅಥವಾ ಸಮಾಜದ ಹಿನ್ನೆಲೆಯಲ್ಲಿ ನೋಡಿ. ಬಹುಸಂಖ್ಯಾತರ ಕಲ್ಯಾಣ ಮತ್ತು ಸಂತೋಷವನ್ನು ತರುವಂತಹದನ್ನು ಮಾತ್ರ ಸ್ವೀಕರಿಸಲಾಗುತ್ತದೆ ಎಂದರು.

ಹಿಂದು ಧರ್ಮದಲ್ಲಿ ಅಸ್ಪೃಶ್ಯತೆ, ಸತಿ ಮತ್ತು ಜೌಹರ್‌ನಂತಹ ಆಚರಣೆಗಳನ್ನು ರದ್ದುಗೊಳಿಸಲಾಗಿದೆ. ಆದರೂ ಮುಸ್ಲಿಂ ಸಮುದಾಯದಲ್ಲಿ ಬಹು ಹೆಂಡತಿಯರನ್ನು ಹೊಂದುವ ಅಭ್ಯಾಸವನ್ನು ಅನುಮತಿಸಲಾಗಿದೆ ಎಂದು ಪ್ರಶ್ನೆಯನ್ನು ಎತ್ತಿದರು. ಈ ಅಭ್ಯಾಸ ಸ್ವೀಕಾರಾರ್ಹವಲ್ಲ ಎಂದು ಕರೆದರು.

ಶಾಸ್ತ್ರಗಳು ಮತ್ತು ವೇದಗಳಂತಹ ಹಿಂದು ಧರ್ಮಗ್ರಂಥಗಳಲ್ಲಿ ಮಹಿಳೆಯರನ್ನು ದೇವತೆಗಳಾಗಿ ಪೂಜಿಸಲಾಗುತ್ತದೆ. ಆದರೆ ಒಂದು ಸಮುದಾಯದ ಸದಸ್ಯರು ಬಹು ಪತ್ನಿಯರನ್ನು ಹೊಂದಲು, ಹಲಾಲಾವನ್ನು ಅಭ್ಯಾಸ ಮಾಡುವ ಅಥವಾ ತ್ರಿವಳಿ ತಲಾಖ್ ಅನ್ನು ಅಭ್ಯಾಸ ಮಾಡುವ ಹಕ್ಕನ್ನು ಇನ್ನೂ ಒತ್ತಾಯಿಸುತ್ತಾರೆ ಎಂದು ಅವರು ಹೇಳಿದರು.

ಈ ದೇಶವು ಸಂವಿಧಾನ ಮತ್ತು ದಂಡನಾ ಕಾನೂನುಗಳನ್ನು ಹೊಂದಿರುವುದರಿಂದ ನಾಗರಿಕ ಕಾನೂನುಗಳನ್ನು ಏಕೀಕರಣಗೊಳಿಸುವುದು ತಾರ್ಕಿಕವಾಗಿದೆ. ಈ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದರು.

ನಮ್ಮ ಧರ್ಮಗ್ರಂಥಗಳು ಮತ್ತು ವೇದಗಳಲ್ಲಿ ದೇವತೆಯ ಸ್ಥಾನಮಾನವನ್ನು ಪಡೆದಿರುವ ಮಹಿಳೆಯನ್ನು ನೀವು ಅವಮಾನಿಸಲು ಸಾಧ್ಯವಿಲ್ಲ. ನಾಲ್ಕು ಹೆಂಡತಿಯರನ್ನು ಹೊಂದುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ, ಹಲಾಲಾ ಅಥವಾ ತ್ರಿವಳಿ ತಲಾಖ್ ಅನ್ನು ನಿಲ್ಲಿಸಲು ಸಾಧ್ಯವಿಲ್ಲ. ತ್ರಿವಳಿ ತಲಾಖ್’ ಹೇಳುವ ಹಕ್ಕು ನಮಗಿದೆ ಎಂದು ನೀವು ಹೇಳುತ್ತೀರಿ, ಆದರೆ ಮಹಿಳೆಯರಿಗೆ ಜೀವನಾಂಶ ಕೊಡುವುದಿಲ್ಲ ಅಂತೀರಿ, ಆದರೆ ಈ ದೇಶವು ಖಂಡಿತವಾಗಿಯೂ UCC ಕಾನೂನನ್ನು ತಂದೆ ತರುತ್ತದೆ ಎಂದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!