Tuesday, March 28, 2023

Latest Posts

ಹೈದರಾಬಾದ್‌ನಲ್ಲಿ ಅಮಿತ್ ಶಾ ಪರ್ಯಟನೆ: ಸಿಐಎಸ್‌ಎಫ್ ರೈಸಿಂಗ್ ಡೇ ಕಾರ್ಯಕ್ರಮದಲ್ಲಿ ಭಾಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೈದರಾಬಾದ್ ಪರ್ಯಟನೆಯಲ್ಲಿದ್ದಾರೆ. ಶನಿವಾರ ರಾತ್ರಿ 11 ಗಂಟೆಗೆ ಹೈದರಾಬಾದ್ ತಲುಪಿದ ಅಮಿತ್ ಶಾ ಅವರನ್ನು ಬಿಜೆಪಿ ರಾಜ್ಯ ಉಸ್ತುವಾರಿ ತರುಣ್ ಚುಗ್, ರಾಜ್ಯಾಧ್ಯಕ್ಷ ಬಂಡಿ ಸಂಜಯ್, ಕೇಂದ್ರ ಸಚಿವ ಕಿಶನ್ ರೆಡ್ಡಿ, ಸಂಸದ ಲಕ್ಷ್ಮಣ್ ಮುಂತಾದವರು ಸ್ವಾಗತಿಸಿದರು. ಇಂದು ಬೆಳ್ಳಂಬೆಳಗ್ಗೆ ಸಿಐಎಸ್‌ಎಫ್ ರೈಸಿಂಗ್ ಡೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಶನಿವಾರ ರಾತ್ರಿ 11 ಗಂಟೆಗೆ ಹೈದರಾಬಾದ್‌ನ ಹಕೀಂಪೇಟ್ ಏರ್‌ಫೀಲ್ಡ್ ತಲುಪಿದ ಅಮಿತ್ ಶಾ, ರಸ್ತೆ ಮಾರ್ಗವಾಗಿ ರಾಷ್ಟ್ರೀಯ ಕೈಗಾರಿಕಾ ಭದ್ರತಾ ಅಕಾಡೆಮಿ (ಎನ್‌ಐಎಸ್‌ಎ) ತಲುಪಿದರು. ಕೆಲಕಾಲ ಮೇಲಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ರಾತ್ರಿ ಅಲ್ಲೇ ತಂಗಿದ್ದರು. ಭಾನುವಾರ ಬೆಳಗ್ಗೆ 7.30ರಿಂದ 9.16ರವರೆಗೆ ಸಿಐಎಸ್‌ಎಫ್ ರೈಸಿಂಗ್ ಡೇ ಪರೇಡ್‌ನಲ್ಲಿ ಅಮಿತ್ ಶಾ ಮುಖ್ಯ ಅತಿಥಿಯಾಗಿ ಭಾಗಯಾದರು. 11.35 ರವರೆಗೆ ರಾಷ್ಟ್ರೀಯ ಕೈಗಾರಿಕಾ ಭದ್ರತೆ ಅಕಾಡೆಮಿಯಲ್ಲಿರಲಿದ್ದಾರೆ. ಅಲ್ಲಿಂದ 11.40ಕ್ಕೆ ಹೊರಟು ರಸ್ತೆ ಮಾರ್ಗವಾಗಿ ಹಕೀಂಪೇಟ್ ಏರ್ ಫೀಲ್ಡ್ ಗೆ ತೆರಳುವರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 11.50ಕ್ಕೆ ವಿಶೇಷ ವಿಮಾನದ ಮೂಲಕ ಕೇರಳದ ಕೊಚ್ಚಿಗೆ ತೆರಳಲಿದ್ದಾರೆ.

ಬಿಆರ್ ಎಸ್ ಎಂಎಲ್ ಸಿ ಕವಿತಾ ಅವರ ದೆಹಲಿ ಲಿಕ್ಕರ್ ಹಗರಣದ ತನಿಖೆ ಅಮಿತ್ ಶಾ ಹೈದರಾಬಾದ್ ಭೇಟಿ ಮಹತ್ವ ಪಡೆದುಕೊಂಡಿದೆ. ಕಾರ್ಯಕ್ರಮ ಬಳಿಕ ಇತ್ತೀಚಿನ ರಾಜಕೀಯ ಪರಿಸ್ಥಿತಿಯನ್ನು ರಾಜ್ಯ ಪಕ್ಷದ ನಾಯಕರೊಂದಿಗೆ ಚರ್ಚಿಸಲಿದ್ದಾರೆ. ಭಾನುವಾರ ಅಧಿಕೃತ ಕಾರ್ಯಕ್ರಮ ಮುಗಿಯುವ ಮುನ್ನವೇ ರಾಜ್ಯ ಪಕ್ಷದ ನಾಯಕರ ಜತೆ ಅಮಿತ್ ಶಾ ಸಭೆ ನಡೆಸುವ ಸಾಧ್ಯತೆ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!