ಹೊಸದಿಗಂತ ವರದಿ ಹುಬ್ಬಳ್ಳಿ:
ಇಲ್ಲಿಯ ಸಿದ್ಧಾರೂಢ ಮಠದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹುಬ್ಬಳ್ಳಿ ಮಹಾನಗರ ವತಿಯಿಂದ ಏರ್ಪಡಿಸಿದ್ದ ಶೌರ್ಯ ಜಾಗರಣ ರಥಯಾತ್ರೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು.
ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್‌ಉತ್ತರ ಪ್ರಾಂತ ಅಧ್ಯಕ್ಷ ಎಸ್. ಆರ್ ರಾಮನಗೌಡರ, ಸ್ವಾಗತ ಸಮಿತಿ ಅಧ್ಯಕ್ಷ ಮಹೇಶ ನಾಲವಾಡ ಭಾಗವಹಿಸಿದ್ದರು.
ಸಮಾರಂಭದ ವಕ್ತಾರಾಗಿ ಭಾಗವಹಿಸಿ ಮಾತನಾಡಿದ ವಿನಾಯಕ ತಲಗೇರಿ, ಶೌರ್ಯ ರಥಯಾತ್ರೆ ಬರುವ ಚುನಾವಣೆ ಹಾಗೂ ಸರ್ಕಾರದ ವಿರುದ್ಧ ಎತ್ತಿಕಟ್ಟಲು ಮಾಡುತ್ತಲ್ಲ. ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವ ತ್ಯಾಗ ಬಲಿದಾನ ಮಾಡಿದ ಮಹನೀಯರ ಸ್ಮರಿಸುವ ಹಾಗೂ ದೇಶದ ಯುವ ಜನತೆ ಬಡಿದೆಬ್ಬಿಸಿ ಜಾಗೃತಿ ಮೂಡಿಲು ಏರ್ಪಡಿಸಲಾಗಿದೆ ಎಂದರು.
ಎಲ್ಲ ಜನ, ಧರ್ಮ, ಜಾತಿ ಹಾಗೂ ಮತ ಗೌರವಿಸುವ ಸಂಸ್ಕೃತಿ ಭಾರತದ ಸಂಸ್ಕೃತಿಯಾಗಿದೆ. ಸಮಾಜಕ್ಕೆ ಎದುರಾಗುವ ಲವ್ ಜಿಹಾದ್, ಮತಾಂತರ ವಿರುದ್ಧ ಹೋರಾಡಬೇಕಿದೆ. ನಮ್ಮ ಕಣ್ಣು ಮುಂದೆ ಗೋಹತ್ಯೆ ನಡೆಯುತ್ತಿದೆ. ಆದರೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿ ಸುಮ್ಮನ್ನೆ ಕುಳಿತುಕೊಳ್ಳುತ್ತಿದ್ದೇವೆ. ನಾವು ಹೋರಾಟ ಮಾಡುತ್ತಿಲ್ಲ. ಶಿವಾಜಿ ಹಾಗೂ ಮಹಾರಾಣ ಪ್ರತಾಪ್ ಅವರು ಧರ್ಮಕ್ಕೊಸ್ಕರ ಪ್ರಾಣ ಬಿಟ್ಟರು ಹೊರತು ಇಸ್ಲಾಂ ಧರ್ಮ ಸೇರಲಿಲ್ಲ ಎಂದು ತಿಳಿಸಿದರು.
ಎಲ್ಲರ ಹತ್ತಿರ ಶಕ್ತಿ ಇದೆ. ಎಲ್ಲಿ ಶಕ್ತಿ ಇರುತ್ತದೆ ಅಲ್ಲಿ ಭಕ್ತಿ ಇರುತ್ತದೆ. ದೇವರು ದುರ್ಬಲರನ್ನು ಯಾವತ್ತು ಕ್ಷಮಿಸಲ್ಲ. ಶಕ್ತಿ ಸಮಾಜಕ್ಕೆ ಉಪಯೋಗಕ್ಕೆ ಹಾಗೂ ಸಜ್ಜನ ಸಮಾಜದ ನಿರ್ಮಾಣಕ್ಕೆ ಆಗಬೇಕು. ಅದಕ್ಕೆ ಯುವಕರು ಸಮಾಜ ಶಕ್ತಿಯಾಗಬೇಕು ಎಂದು ಹೇಳಿದರು.