ಹೊಸದಿಗಂತ ವರದಿ, ಬೆಳಗಾವಿ
ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ವೀರರಾಣಿ ಕಿತ್ತೂರ ಚನ್ನಮ್ಮ ಭೂಮಿಯಲ್ಲಿ ಚನಮ್ಮ ಮೂರ್ತಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಮಾಲಾರ್ಪಣೆ ಮಾಡುವ ಮೂಲಕ ರೋಡ್ ಶೋ ಗೆ ಚಾಲನೆ ನೀಡಿದರು.
ಮುಖ್ಯಮಂತ್ರಿ ಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಗೋವಿಂದ ಕಾರಜೋಳ ಸಾಥ ನೀಡಿದರು.
ನೂರಾರು ಜನ ಕಾರ್ಯಕರ್ತರು ಬಿಜೆಪಿ ಭಾಗವಹಿಸಿ ಬಿಜೆಪಿಗೆ ಜೈ, ಪ್ರಧಾನಿ ಜೈ, ರಾಜನಾಥ ಸಿಂಗ್ ಜೈ, ಬಸವರಾಜ ಬೊಮ್ಮಾಯಿಗೆ ಜೈ ಎಂಬ ಘೋಷಣೆ ಮುಗಿಲ ಮುಟ್ಟಿದವು. ತಮ್ಮ ನೆಚ್ಚಿನ ನಾಯಕರಿಗೆ ಪುಷ್ಪವೃಷ್ಠಿ ಸುರಿದರು. ಬಿಜೆಪಿ ಧ್ವಜ ನಗರದಾದ್ಯಂತ ರಾರಾಜಿಸಿದವು. ಕಾರ್ಯಕರ್ತರು ಹಾಗೂ ಸಾರ್ವಜನಿಕರು ಡೊಳ್ಳು ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ರಸ್ತೆಯ ಇಕ್ಕಲಲ್ಲಿ ನರೆದಿದ್ದ ಜನರು ವಿಜಯ ಸಂಕಲ್ಪ ರಥಯಾತ್ರೆ ವೀಕ್ಷಿಸಿದರು.