Sunday, December 10, 2023

Latest Posts

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮಡಿಲಕ್ಕಿ ಬಾಗೀನ ನೀಡಿ ಸತ್ಕಾರ

ಹೊಸದಿಗಂತ ವರದಿ,ಶ್ರೀರಂಗಪಟ್ಟಣ :

ಪಟ್ಟಣದ ಹೊರವಲಯದಲ್ಲಿರುವ ಚಂದ್ರವನ ಆಶ್ರಮಕ್ಕೆ ಭೇಟಿ ನೀಡಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಶ್ರಿಗಳು ಸೀರೆ, ಮಡಿಲಕ್ಕಿ ಭಾಗೀನವನ್ನು ನೀಡಿ ಸತಸ್ಕರಿಸಿದರು.

ಆಶ್ರಮದಲ್ಲಿ ನಡೆಯುವ ನವರಾತ್ರಿ ಉತ್ಸವದ ಕಾರ್ಯಕ್ರಮ ಮತ್ತು ದುರ್ಗಾಮಾತೆಯ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದ ಸಚಿವೆ ಶೋಭಾ ಕರಂದ್ಲಾಜೆ ಅವರು ಡಾ. ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳ ಆಶೀರ್ವಚನಪಡೆದರು.

ನಂತರ ಸಚಿವರು ಮಾತನಾಡಿ, ಚಂದ್ರವನ ಆಶ್ರಮ ಈ ಭಾಗಕ್ಕೆ ತವರು ಮನೆ ಇದ್ದಂತೆ ತ್ರಿನೇತ್ರ ಸ್ವಾಮೀಜಿಗಳು ಇಲ್ಲಿನ ಪ್ರೀತಿಗೆ ಹೆಸರಾದವರು. ಆಶ್ರಮಕ್ಕೆ ಯಾರೇ ಬರಲಿ ಅವರಿಗೆ ಪ್ರೀತಿ ಜೊತೆಗೆ ತವರಿನ ಸಿರಿಯನ್ನು ನೀಡುವುದು ವಿಶೇಷ. ಇದರಿಂದಲೇ ಎಷ್ಟು ದೂರದ ಊರುಗಳಿಂದ ಸ್ವಾಮೀಜಿ ದರ್ಶನಕ್ಕೆ ನಾವೆಲ್ಲರೂ ಆಗಮಿಸಿ ಹಬ್ಬ ಹುಣ್ಣಿಮೆಗಳಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಶೀರ್ವಾದ ಪಡೆಯುತ್ತೇವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!