ರಾಹುಲ್‌ ದುರಹಂಕಾರಿ ಹೇಳಿಕೆಗೆ ಕೇಂದ್ರ ಸಚಿವರ ಟಾಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಾಂಗ್ರೆಸ್‌ ಯುವ ನಾಯಕ ರಾಹುಲ್‌ ಗಾಂಧಿ ಕೇಂಬ್ರಿಡ್ಜ್‌ ವಿಶ್ವವಿದ್ಯಾನಿಲಯದಲ್ಲಿ ಮಾಡಿದ ಭಾಷಣಕ್ಕೆ ವ್ಯಾಪಕವಾಗಿ ಟೀಕೆಗಳು ವ್ಯಕ್ತವಾಗುತ್ತಿವೆ. ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್‌, ಕೇಂದ್ರ ಸಚಿವ ಕಿರಣ್‌ ರಿಜುಜು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೇರಿದಂತೆ ಹಲವರು ಅವರ ಮಾತುಗಳನ್ನು ಕಟುವಾಗಿ ಟೀಕಿಸಿದ್ದಾರೆ.

ಭಾರತೀಯ ವಿದೇಶಾಂಗ ಸೇವೆಯು ದುರಹಂಕಾರಿಯಾಗಿದೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆಯ ಕುರಿತಾಗಿ ವಿದೇಶಾಂಗ ಸಚಿವ ಎಸ್.ಜೈಶಂಕರ್‌ “ಅದು ದುರಹಂಕಾರವಲ್ಲ ಬದಲಾಗಿ ಭಾರತವು ಜಗತ್ತಿನ ವೇದಿಕೆಗಳಲ್ಲಿ ಮಾತನಾಡುವ ಆತ್ಮವಿಶ್ವಾಸ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಪ್ರತಿಕ್ರಿಯಿಸಿದ್ದು “ಕಾಂಗ್ರೆಸ್ ಶೈಲಿಯ ಕಾರ್ಯವೈಖರಿಯಲ್ಲಿ, ರಾಜತಾಂತ್ರಿಕರು ಪಂಡಿತ್ ನೆಹರೂ ಅವರ ಮೊಮ್ಮಕ್ಕಳಿಗೆ ಕಾಲೇಜುಗಳನ್ನು ಸರಿಪಡಿಸುವಲ್ಲಿ ನಿರತರಾಗಿದ್ದರು” ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೇ “ವಿದೇಶಿ ನೆಲದಲ್ಲಿ ತನ್ನ ದೇಶವನ್ನು ಅವಮಾನಿಸುವ ಮತ್ತು ಆಕ್ರಮಣ ಮಾಡುವ ಮೂಲಕ ಒಬ್ಬ ವ್ಯಕ್ತಿಯು ಯಾವ ರೀತಿಯ ದುಃಖಕರ ಆನಂದವನ್ನು ಪಡೆಯುತ್ತಾನೆ ಎಂದು ನನಗೆ ಅರ್ಥವಾಗುತ್ತಿಲ್ಲ” ಎಂದು ಟ್ವಿಟ್‌ ಮಾಡಿದ್ದಾರೆ.

ಇನ್ನು ಅಸ್ಸಾಂ ಕುರಿತು ಅವರ ಹೇಳಿಕೆಗೆ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಅವರು “ನೆಹರುರವರು ಅವರ ಕ್ಯಾಬಿನೆಟ್‌ ಮಿಷನ್‌ ಯೋಜನೆಯಂತೆ ಪಾಕಿಸ್ತಾನದೊಂದಿಗೆ ಇರಲು ನಮ್ಮನ್ನು(ಅಸ್ಸಾಂ) ತೊರೆದಿದ್ದರು. ಗಾಂಧೀಜಿಯವರ ಬೆಂಬಲದೊಂದಿಗೆ, ಗೋಪಿನಾಥ್ ಬೊರ್ಡೊಲೋಯ್ ಅವರು ಅಸ್ಸಾಂ ಅನ್ನು ಭಾರತ ಮಾತೆಯ ಜೊತೆ ಇರಿಸಿಕೊಳ್ಳಲು ಹೆಣಗಾಡಬೇಕಾಯಿತು. ಸತ್ಯವನ್ನು ಸರಿಯಾಗಿ ತಿಳಿದುಕೊಳ್ಳಿ” ಎಂದು ಹೇಳಿದ್ದಲ್ಲದೇ ಇದು ʼನಕಲಿ ಬೌದ್ದಿಕತೆಯ ಎತ್ತರವನ್ನು ಸೂಚಿಸುತ್ತದೆʼ ಎಂದು ಪ್ರತಿಕ್ರಿಯಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!