ಈ ಹಕ್ಕಿ ಗೂಡುಗಳಿಗೆ 200 ವರ್ಷಗಳ ಇತಿಹಾಸ: ಪ್ರವಾಸಿಗರ ತಾಣವಾದ ಊರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಕ್ಷಿಗಳು ತಮ್ಮ ಗೂಡುಗಳನ್ನು ಹುಲ್ಲು ಕಡ್ಡಿಗಳಿಂದ ನಿರ್ಮಿಸುತ್ತವೆ. ಪಕ್ಷಿಗಳು ನಿರ್ಮಿಸುವ ವಿವಿಧ ರೀತಿಯ ಗೂಡುಗಳು ಯಾವಾಗಲೂ ವಿಚಿತ್ರವಾಗಿಯೇ ಇರುತ್ತವೆ. ಮರಗಳಲ್ಲಿ ನೇತಾಡುವ ಗುಬ್ಬಚ್ಚಿ ಗೂಡುಗಳು ಎಷ್ಟೇ ಗಾಳಿ, ಮಳೆ ಬಂದರೂ ಕೆಳಗೆ ಬೀಳೋದಿಲ್ಲ. ಹುಲ್ಲು ಕಟ್ಟಯಿಂದ ಕಟ್ಟಿದರೂ ಬಲವಾಗಿರುವುದು ವಿಸ್ಮಯವೇ ಸರಿ. ಇದೀಗ ನಾವು ಹೇಳಲು ಹೊರಟಿರುವುದು ಮಣ್ಣಿನ ಹಕ್ಕಿ ಗೂಡಿನ ಬಗ್ಗೆ.

ಹೌದು, ಸಾಮಾನ್ಯವಾಗಿ, ಪಕ್ಷಿಗಳು ತಮ್ಮ ಗೂಡುಗಳನ್ನು ಹುಲ್ಲು ಮತ್ತು ಒಣಕಟ್ಟಿಗೆಗಳಿಂದ ನಿರ್ಮಿಸುತ್ತವೆ. ಆದರೆ ಈ ಹಕ್ಕಿಗಳು ಮಾತ್ರ ಮಣ್ಣಿನಿಂದ ತಮ್ಮ ಗೂಡನ್ನು ನಿರ್ಮಿಸುತ್ತವೆ. ಈ ಜಾತಿಯ ಪಕ್ಷಿಗಳು ಗುಂಪು ಗುಂಪಾಗಿ ಗೂಡು ಕಟ್ಟುವುದು ಮಾತ್ರವಲ್ಲದೆ ಪ್ರತಿ ವರ್ಷ ಒಂದೇ ಮನೆಯ ಕೆಳಗೆ ಗೂಡು ಕಟ್ಟುವುದು ವಿಶೇಷ.

ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಬಗಿದೋರಾ ಪ್ರದೇಶದ ನೌಗಾಮಾ ಒಂದು ಹಳ್ಳಿ. ಆ ಗ್ರಾಮಕ್ಕೆ ವಿದೇಶಿ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಹಳ್ಳಿಯಲ್ಲಿರುವ ಕಟ್ಟಡವೊಂದರಲ್ಲಿ ಕೋಗಿಲೆ ಜಾತಿಗೆ ಸೇರಿದ ಹಕ್ಕಿಗಳ ಗೂಡುಗಳನ್ನು ನೋಡಲು ಪ್ರವಾಸಿಗರು ಬರುತ್ತಾರೆ. ಸಾಮಾನ್ಯವಾಗಿ ಕೋಗಿಲೆ ಗೂಡುಗಳನ್ನು ಕಟ್ಟುವುದಿಲ್ಲ.ಅವು ಕೆಲವು ಪಕ್ಷಿಗಳ ಗೂಡಿನಲ್ಲಿ ತಮ್ಮ ಮೊಟ್ಟೆಗಳನ್ನು ಇಡುತ್ತವೆ.

ಆದರೆ ನೌಗಾಮಾ ಗ್ರಾಮದಲ್ಲಿ ಈ ಜಾತಿಗೆ ಸೇರಿದ ಹಕ್ಕಿಗಳು ಆ ಗ್ರಾಮದ ಒಂದೇ ಮನೆಯ ಕೆಳಗೆ ಪ್ರತಿ ವರ್ಷ ಗೂಡು ಕಟ್ಟುವುದು ಆ ಗ್ರಾಮದ ವಿಶೇಷ. ಈ ಪಕ್ಷಿಗಳು ಎಲ್ಲಿಂದಲಾದರೂ ಮಣ್ಣನ್ನು ತೆಗೆದುಕೊಂಡು ಯಾರೋ ವಿನ್ಯಾಸ ಮಾಡಿದಂತೆ ಕ್ರಮಬದ್ಧವಾಗಿ ಒಂದರ ಹಿಂದೆ ಒಂದರಂತೆ ಗೂಡು ಕಟ್ಟುತ್ತವೆ. ಮಳೆಗಾಲದಲ್ಲಿ ಈ ಹಕ್ಕಿಗಳು ಕಟ್ಟಿದ ಮಣ್ಣಿನ ಗೂರುಗಳು ಕರಗುತ್ತವೆ. ಅತ್ಯಂತ ಶೀಘ್ರದಲ್ಲೇ ಈ ಪಕ್ಷಿಗಳು ಮತ್ತೆ ಗೂಡನ್ನು ಪುನರ್ನಿರ್ಮಿಸುತ್ತವೆ. ದಿನವಿಡೀ ಎಲ್ಲೋ ಆಹಾರ ಪಡೆದು ತಿಂದು ಸಂಜೆ ವೇಳೆಗೆ ಒಂದರ ಹಿಂದೆ ಒಂದು ಹಕ್ಕಿಗಳು ಹಾರಿ ಒಟ್ಟಿಗೆ ಗೂಡುಗಳಿಗೆ ಬರುವುದು ನೋಡುವುದೇ ಚೆನ್ನ.

ಪಕ್ಷಿಗಳು ಇಲ್ಲಿ ಗೂಡು ಕಟ್ಟಿಕೊಂಡು ಖಾಯಂ ನೆಲೆ ಸ್ಥಾಪಿಸಿರುವುದರ ಹಿಂದೆ ನೂರಾರು ವರ್ಷಗಳ ಇತಿಹಾಸವಿರುವುದು ಅಚ್ಚರಿ ಮೂಡಿಸಿದೆ. 200 ವರ್ಷಗಳಿಂದ, ಈ ಪಕ್ಷಿಗಳು ಇಲ್ಲಿ ತಮ್ಮ ಗೂಡುಗಳನ್ನು ನಿರ್ಮಿಸುತ್ತಿವೆ. ಇನ್ನೂ ಆಶ್ಚರ್ಯದ ಸಂಗತಿಯೆಂದರೆ, ಪಕ್ಷಿಗಳು ಗೂಡು ಕಟ್ಟಿದ್ದ ಕಟ್ಟಡವನ್ನು ಒಮ್ಮೆ ಸಂಪೂರ್ಣವಾಗಿ ಕೆಡವಿ ಅದೇ ಜಾಗದಲ್ಲಿ ಮತ್ತೊಂದು ಹೊಸ ಮನೆ ನಿರ್ಮಾಣವಾಗಿದೆ. ಆ ಮನೆ ಕಟ್ಟಿದ ತಕ್ಷಣ ಹಕ್ಕಿಗಳೆಲ್ಲ ಮತ್ತೆ ಬಂದು ಗೂಡು ಕಟ್ಟಿವೆ. ಎಷ್ಟು ಬಾರಿ ಆ ಗೂಡುಗಳು ತೆಗೆದರೂ..ಪಕ್ಷಿಗಳು ಮತ್ತೆ ಮತ್ತೆ ಕಟ್ಟುತ್ತಲೇ ಇರುತ್ತವೆಯಂತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!