ಕೆಲವರು ಕೆಟ್ಟ ದೃಷ್ಟಿಯನ್ನು ನಂಬುತ್ತಾರೆ, ಕೆಲವರಿಗೆ ಇದರ ಮೇಲೆ ನಂಬಿಕೆ ಇರೋದಿಲ್ಲ. ಎಲ್ಲವೂ ಚೆನ್ನಾಗಿದ್ದು, ಇದ್ದಕ್ಕಿದ್ದಂತೆಯೇ ಅನಾರೋಗ್ಯಕ್ಕೀಡಾದರೆ ಕೆಲವರು ಕೆಟ್ಟ ದೃಷ್ಟಿ ತಾಕಿದೆ ಎನ್ನುತ್ತಾರೆ, ಆದರೆ ನಂಬದವರು ಸರಿಯಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಲ್ಲ ಎನ್ನುತ್ತಾರೆ. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟದ್ದು.
ಮಕ್ಕಳಿಗೆ ದೃಷ್ಟಿ ಆಗಬಾರದೆಂದು ಕಪ್ಪು ದಾರ ಕಟ್ಟುವುದು, ಕಪ್ಪು ಬೊಟ್ಟು ಇಡುವುದು ಮಾಮೂಲು. ಇನ್ನು ಕೆಲವರಿಗೆ ಅತಿಯಾಗಿ ಅಲಂಕರಿಸಿಕೊಂಡ ದಿನ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಇನ್ನು ಕೆಲವೊಮ್ಮೆ ಅಂಗಡಿ ಅಥವಾ ಬ್ಯುಸಿನೆಸ್ ಚೆನ್ನಾಗಿ ನಡೆಯುತ್ತಿದ್ದರೆ ಕೆಟ್ಟವರ ದೃಷ್ಟಿಯಿಂದ ಒಂದೇ ಬಾರಿಗೆ ಲಾಸ್ ಆಯಿತು ಎನ್ನುತ್ತಾರೆ, ಕಟ್ಟುತ್ತಿರುವ ಮನೆಗಳಲ್ಲಿಯೂ ದೃಷ್ಟಿಬೊಂಬೆ ಇಡುತ್ತಾರೆ. ಮೊದಲೇ ಹೇಳಿದ ಹಾಗೆ ಎಲ್ಲವೂ ಅವರವರ ನಂಬಿಕೆಗೆ ಬಿಟ್ಟದ್ದು.
ದೃಷ್ಟಿ ತಾಗಿದೆ ಎಂದು ಯಾವಾಗ ಹೇಳಬಹುದು?
- ಇದ್ದಕ್ಕಿದ್ದಂತೆಯೇ ಬ್ಯಾಡ್ ಲಕ್ ನಿಮ್ಮ ತಲೆ ಮೇಲೆ ಕೂತಂತೆ ಅನಿಸುವುದು, ಖುಷಿಯೇ ಇಲ್ಲದಂತಾಗುವುದು, ಪಾಸಿಟಿವ್ ಎನರ್ಜಿ ಮಾಯವಾಗುವುದು.
- ಯಾವಾಗಲೂ ಎನರ್ಜಿಯ ಚಿಲುಮೆಯಾಗಿದ್ದ ನಿಮಗೆ ದಿನವೂ ಸುಸ್ತು, ಏನೂ ಕೆಲಸ ಮಾಡಿಲ್ಲ ಅಂದ್ರೂ ಸುಸ್ತು, ಮಾಡಿದರೂ ಸುಸ್ತು. ಎಲ್ಲರ ಮೇಲೆ ರೇಗಬೇಕು ಎನ್ನುವ ಮನಸ್ಥಿತಿ.
- ಏಕಾಏಕಿ ಮೂಡ್ ಬದಲಾವಣೆ, ಎಲ್ಲದಕ್ಕೂ ಎಮೋಷನಲ್ ಆಗೋದು, ಖಿನ್ನತೆಗೆ ಒಳಗಾಗುವುದು.
- ಎಷ್ಟೋ ದಿನಗಳಿಂದ ನಡೆಯಬೇಕಿದ್ದ ಕಾರ್ಯ ವಿಳಂಬವಾಗುತ್ತಲೇ ಹೋಗುವುದು, ಮನೆ ಕಟ್ಟುವುದು, ಸೈಟ್ ತೆಗೆದುಕೊಳ್ಳುವುದು, ಮದುವೆ ಹೀಗೆ ಯಾವ ಕೆಲಸವೂ ಅಂದುಕೊಂಡಂತೆ ಆಗದೆ ನಿಂತಲ್ಲೇ ನಿಲ್ಲುವುದು.
- ದೇಹಕ್ಕೆ ಅನಾರೋಗ್ಯ ಕಾಡುವುದು, ಆದರೆ ಯಾವ ರೀತಿ ಎಂದು ಹೇಳೋದಕ್ಕೆ ಆಗೋದಿಲ್ಲ, ವೈದ್ಯರಿಗೂ ಇದರ ಬಗ್ಗೆ ತಿಳಿಯದಂತಹ ಸಮಸ್ಯೆ ಎದುರಿಸುವುದು.
- ಸಂಬಂಧಗಳು ಇದ್ದಕ್ಕಿದ್ದಂತೆಯೇ ಹಾಳಾಗುವುದು, ಜಗಳ ಆಡುವಂಥ ಸನ್ನಿವೇಶಗಳು ಪದೇ ಪದೆ ಬರುವುದು, ಟೈಮ್ ಸರಿಯಿಲ್ಲ ಎನಿಸುವುದು.
- ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸ ಇರುವುದಿಲ್ಲ, ಯಾವ ಕೆಲಸ ಮಾಡಲೂ ಧೈರ್ಯ ನಂಬಿಕೆ ಇಲ್ಲದಿರುವುದು.