Friday, March 24, 2023

Latest Posts

ಅವಿವಾಹಿತ ಹೆಣ್ಣುಮಕ್ಕಳು ಮೊಬೈಲ್ ಬಳಸೋದು ಬೇಡ, ಠಾಕೂರ್ ಸಮಾಜದಿಂದ ಹೊಸ ರೂಲ್ಸ್..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್‌ನಲ್ಲಿ ಬಲಿಷ್ಠವಾಗಿರುವ ಮತ್ತು ಅತಿ ಹೆಚ್ಚು ಜನಸಂಖ್ಯೆ ಇರೋ ಠಾಕೂರ್ ಸಮಾಜ ತನ್ನ ಸಮುದಾಯದ ಜನರಿಗೆ ಹೊಸ ರೂಲ್ಸ್ ಒಂದನ್ನು ಹಾಕಿದ್ದಾರೆ.

ಅವಿವಾಹಿತ ಹೆಣ್ಣು ಮಕ್ಕಳಿಗೆ ಮೊಬೈಲ್ ನಿಷೇಧ ಸೇರಿದಂತೆ ಇನ್ನೂ ಕೆಲವು ಕಟ್ಟುಪಾಡುಗಳನ್ನು ಹಾಕಿದ್ದಾರೆ. ಇದನ್ನು ಜನರು ಪಾಲಿಸಲೇಬೇಕು ಎಂದು ಕರೆ ನೀಡಲಾಗಿದೆ.

ತಮ್ಮ ಸಂಪ್ರದಾಯಗಳನ್ನು ಸುಧಾರಣೆಗೆ ತರಲು 11 ಹೊಸ ನಿಯಮಗಳನ್ನು ಹಾಕಲಾಗಿದೆ. ಏನೆಲ್ಲಾ ರೂಲ್ಸ್? ಮದುವೆಗಳಲ್ಲಿ ಡಿಜೆಗಳ ಮೇಲೆ ಸಂಪೂರ್ಣ ನಿಷೇಧ, ವಿವಾಹಗಳಲ್ಲಿ ಗಿಫ್ಟ್ ನೀಡುವಂತಿಲ್ಲ, ಬರೀ ಹಣ ಮಾತ್ರ, ನಿಶ್ಚಿತಾರ್ಥಕ್ಕೆ 11 ಜನರು ಮಾತ್ರ ಹಾಜರಿದ್ದರೆ ಸಾಕು.

ದೊಡ್ಡ ಮದುವೆ ಸಮಾರಂಭದಲ್ಲಿ 51 ಜನರಿಗೆ ಮಾತ್ರ ಅವಕಾಶ. ವಿವಾಹಪೂರ್ವ ಹೆಣ್ಣು ಮಕ್ಕಳು ಮೊಬೈಲ್ ಬಳಕೆ ಮಾಡುವಂತಿಲ್ಲ ಎಂದು ಹೇಳಲಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!