ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನದಲ್ಲಿ ನಾಗರೀಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಘೋರ ಭಯೋತ್ಪಾದಕ ದಾಳಿಗಳನ್ನು ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್ (ಯುಎನ್‌ಎಸ್‌ಸಿ) ಖಂಡಿಸಿದೆ.
ಎಪ್ರಿಲ್ 29 ರಂದು ಕಾಬೂಲ್‌ನಲ್ಲಿನ ಖಲೀಫಾ ಸಾಹಿಬ್ ಮಸೀದಿಯ ವಿರುದ್ಧದ ದಾಳಿಯನ್ನು ಪ್ರಬಲವಾಗಿ ಖಂಡಿಸಿದೆ, ಅಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ ಮತ್ತು ಹೆಚ್ಚಿನವರು ಗಾಯಗೊಂಡಿದ್ದಾರೆ. ಜೊತೆಗೆ ಮಿನಿಬಸ್‌ಗಳಲ್ಲಿ ಸ್ಫೋಟಿಸಿದ್ದು, 9ಜನ ಸಾವನ್ನಪ್ಪಿದ್ದಾರೆ. ಇದು ಸ್ವಾಸ್ಥ್ಯ ಸಮಾಜಕ್ಕೆ ಪೂರಕವಲ್ಲ ಎಂದು UNSC ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
UNSC ಸದಸ್ಯ ರಾಷ್ಟ್ರಗಳು ಭಯೋತ್ಪಾದನೆ ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಅತ್ಯಂತ ಗಂಭೀರವಾದ ಬೆದರಿಕೆಗಳಲ್ಲಿ ಒಂದಾಗಿದೆ ಎಂದು ಉಚ್ಚರಿಸಿದೆ. ಯಾವುದೇ ಭಯೋತ್ಪಾದನಾ ಕೃತ್ಯಗಳು ಅಪರಾಧ ಮತ್ತು ಸಮರ್ಥನೀಯವಲ್ಲ, ಕಳೆದ ಕೆಲವು ವಾರಗಳಲ್ಲಿ ಅಫ್ಘಾನಿಸ್ತಾನದಲ್ಲಿ ಸರಣಿ ಮಾರಣಾಂತಿಕ ಸ್ಫೋಟಗಳು ಸಂಭವಿಸಿರುವುದು ಆತಂಕಕಾರಿ ಬೆಳವಣಿಗೆ ಎಂದು ಬಿಂಬಿಸಿದೆ.
ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಕೂಡ ಶುಕ್ರವಾರ ಕಾಬೂಲ್‌ನಲ್ಲಿ ನಡೆದ ಸ್ಫೋಟವನ್ನು ಖಂಡಿಸಿದ್ದಾರೆ, ಸಂತ್ರಸ್ತರ ಕುಟುಂಬಗಳಿಗೆ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಕಾರ್ಯದರ್ಶಿ-ಜನರಲ್ ಫರ್ಹಾನ್ ಹಕ್ ಅವರ ಉಪ ವಕ್ತಾರರ ಪ್ರಕಾರ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಭಯೋತ್ಪಾದಕ ಚಟುವಟಿಕೆಗಳ ಮೇಲೆ ಯುಎನ್ ನಿರ್ಬಂಧಗಳಿಗೆ ಒಳಪಟ್ಟಿರುವ ತಾಲಿಬಾನ್ ಕಳೆದ ವರ್ಷ ಆಗಸ್ಟ್‌ನಲ್ಲಿ ಕಾಬೂಲ್ ಅನ್ನು ವಶಪಡಿಸಿಕೊಂಡಿದೆ ಮತ್ತು ಮೊದಲ ತಾಲಿಬಾನ್ ಕ್ಯಾಬಿನೆಟ್‌ನ ಪ್ರಮುಖ ಸದಸ್ಯ ಮೊಹಮ್ಮದ್ ಹಸನ್ ಅಖುಂಡ್ ನೇತೃತ್ವದ ಮಧ್ಯಂತರ ಸರ್ಕಾರವನ್ನು ಸ್ಥಾಪಿಸಿದೆ. ಅಂದಿನಿಂದ ದೇಶವು ಆರ್ಥಿಕ ಸಂಕಷ್ಟ ಮತ್ತು ಆಹಾರದ ಕೊರತೆಯೊಂದಿಗೆ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ.