Wednesday, June 29, 2022

Latest Posts

ಕರಾವಳಿ ಪ್ರದೇಶಗಳಲ್ಲಿ ಅಸಾನಿ ಭೀಭತ್ಸ: ಡೇಂಜರ್‌ ಸಿಗ್ನರ್‌ ಜಾರಿ ಮಾಡಿದ ಹವಾಮಾನ ಇಲಾಖೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಸಾನಿ ಚಂಡಮಾರುತ ಎಪಿ-ಒಡಿಶಾ ಕರಾವಳಿ ಪ್ರದೇಶದ ಜಿಲ್ಲೆಗಳು ಪ್ರಕ್ಷುಬ್ಧವಾಗಿವೆ. ಇಂದೂ ಕೂಡ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಜಿಲ್ಲೆಗಳಾದ ಪ್ರಕಾಶಂ ಮತ್ತು ನೆಲ್ಲೂರಿನಲ್ಲಿ ಮಂಗಳವಾರ ಭಾರೀ ಮಳೆಯಾಗಿದೆ.ಕೃಷ್ಣಾ, ಉಭಯ ಗೋದಾವರಿ ಮತ್ತು ಗುಂಟೂರು ಜಿಲ್ಲೆಗಳಲ್ಲಿಯೂ ಇದೇ ಪರಿಸ್ಥಿತಿ ಇತ್ತು. ವಿಶಾಖಪಟ್ಟಣಂ, ವಿಜಯನಗರಂ ಮತ್ತು ಶ್ರೀಕಾಕುಳಂ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ. ಒಡಿಶಾದ ಗಜಪತಿ, ಕಟಕ್, ಭುವನೇಶ್ವರ ಮತ್ತು ಪುರಿ ಜಿಲ್ಲೆಗಳಲ್ಲಿ ಅಸಾನಿ ಪ್ರಭಾವವು ಹೆಚ್ಚು ತೀವ್ರವಾಗಿದೆ. ಬುಧವಾರ ಬೆಳಗ್ಗೆ ಮಚಲಿಪಟ್ಟಣಂ-ಬಾಪಟ್ಲಾ ಕರಾವಳಿಗೆ ಅಸಾನಿ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಸಾನಿ ಉತ್ತರ-ಈಶಾನ್ಯಕ್ಕೆ ತಿರುಗಿ ಮತ್ತೆ ಸಮುದ್ರ ಸೇರಲಿದ್ದು, ಅಲ್ಲಿಂದ ಮತ್ತಷ್ಟು ದುರ್ಬಲಗೊಂಡು ಕಾಕಿನಾಡ ಮೂಲಕ ವಿಶಾಖಪಟ್ಟಣ ಕರಾವಳಿಯತ್ತ ಸಾಗಲಿದೆ. ಕಾಕಿನಾಡ ಮತ್ತು ವಿಶಾಖಪಟ್ಟಣಂ ಬಂದರುಗಳಲ್ಲಿ ಈಗಾಗಲೇ ಡೇಂಜರ್ ಸಿಗ್ನಲ್ 10 ಜಾರಿ ಮಾಡಲಾಗಿದೆ. ಕೃಷ್ಣಾ ಮತ್ತು ಗುಂಟೂರು ಜಿಲ್ಲೆಗಳಿಗೆ ರೆಡ್ ಸಿಗ್ನಲ್ ನೀಡಲಾಗಿದೆ. ಕಾಕಿನಾಡ-ಉಪ್ಪಡ ಬೀಚ್ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಚಂಡಮಾರುತದಿಂದ ಬೀಚ್‌ ರಸ್ತೆ ಸಂಪೂರ್ಣ ಹಾಳಾಗಿದೆ. ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್‌ ಹಾಕಿ ಪೊಲೀಸರು ರಸ್ತೆ ತಡೆ ಮಾಡಿದ್ದಾರೆ.

ಚಂಡಮಾರುತದಿಂದಾಗಿ ಎಪಿಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಬುಧವಾರ ನಡೆಯಬೇಕಿದ್ದ ಇಂಟರ್ ಮೀಡಿಯೇಟ್ ಪರೀಕ್ಷೆಯನ್ನು ಮುಂದೂಡಲಾಗಿದೆ.ಸುಮಾರು 80-90 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಜನರು ಪರದಾಡುವಂತಾಗಿದೆ. ಮತ್ತೊಂದೆಡೆ ತಮಿಳುನಾಡು ಕರಾವಳಿಯಲ್ಲಿ ಸಮುದ್ರ ಅಲೆಗಳು ಸುಮಾರು 5 ಅಡಿಯಷ್ಟು ಏರುತ್ತಿದ್ದರೆ, ಸಮುದ್ರ ಮಟ್ಟ ಸುಮಾರು 150 ಅಡಿಗಳಷ್ಟು ಹೆಚ್ಚುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss