ದಿವಾನರ ಆಪ್ತ ಸಹಾಯಕನ ಮಗಳು ಸ್ವಾತಂತ್ರ್ಯ ಚಳುವಳಿಯ ದೃವತಾರೆಯಾದಳು…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಅನ್ನಿ ಮಾಸ್ಕ್ರೀನ್ ತಿರುವಾಂಕೂರಿನ ಮಹಾನ್ ಸ್ವಾತಂತ್ರ್ಯ ಹೋರಾಟಗಾರ್ತಿ.
1902 ರಲ್ಲಿ ತಿರುವಾಂಕೂರ್ ದಿವಾನರ ಆಪ್ತ ಸಹಾಯಕರಾಗಿದ್ದ ಗೇಬ್ರಿಯಲ್ ಮಾಸ್ಕ್ರೀನ್ ಅವರ ಮಗಳಾಗಿ ಜನಿಸಿದ ಅನ್ನಿ, ಸ್ನಾತಕೋತ್ತರ ಪದವಿಯ ನಂತರ ಶ್ರೀಲಂಕಾಕ್ಕೆ ತೆರಳಿ ಅಲ್ಲಿನ ಸಂಗಮಿತ್ರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದರು. ನಂತರ ಕಾನೂನು ಪದವಿಯನ್ನು ಪೂರ್ಣಗೊಳಿಸಲು ತಿರುವನಂತಪುರದಲ್ಲಿ ಅಭ್ಯಾಸವನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಲು, ರಾಷ್ಟ್ರೀಯ ಚಳವಳಿಯಲ್ಲಿ ಸೇರಲು ಆಕೆ ತುಂಬಾ ಉತ್ಸುಕಳಾಗಿದ್ದಳು.
ತಿರುವಾಂಕೂರು ರಾಜ್ಯ ಕಾಂಗ್ರೆಸ್ ಜವಾಬ್ದಾರಿಯುತ ಸರ್ಕಾರಕ್ಕಾಗಿ ಆಂದೋಲನವನ್ನು ಪ್ರಾರಂಭಿಸಿದಾಗ, ಆಕೆಯು ಈ ಹೋರಾಟದಲ್ಲಿ ಕಾಂಗ್ರೆಸ್‌ ನೊಂದಿಗೆ ಭಾಗಿಯಾದಳು. ಆ ಬಳಿಕ ಅನ್ನಿ ಮಾಸ್ಕ್ರೀನ್ ನಾಗರಿಕ ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಈ ವೇಳೆ ಅವರನ್ನು ಚೆಂಗನ್ನೂರಿನಲ್ಲಿ ಬಂಧಿಸಲಾಯಿತು. ಬಿಡುಗಡೆ ಬಳಿಕ ತಿರುವಾಂಕೂರು ರಾಜ್ಯ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ ಆಯ್ಕೆಯಾದರು. ಆದರೆ ಕಾಂಗ್ರೆಸ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಆಕೆಯನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಲಾಯಿತು. ಆಕೆಗೆ ಒಂದೂವರೆ ವರ್ಷ ಜೈಲು ಶಿಕ್ಷೆ ಜೊತೆಗೆ 1000 ರೂ.ಗಳ ದಂಡ ವಿಧಿಸಲಾಯಿತು. ಆನಿ ಮಾಸ್ಕ್ರೀನ್ ತನ್ನ ಹೋರಾಟವನ್ನು ಬ್ರಿಟಿಷ್ ಆಳ್ವಿಕೆಯ ಕೊನೆಯವರೆಗೂ ಮುಂದುವರೆಸಿದಳು. ನಂತರ ಅವರು 1948 ರಲ್ಲಿ ಸಂವಿಧಾನ ಸಭೆಯ ಸದಸ್ಯರಾದರು. ಅದೇ ವರ್ಷದಲ್ಲಿ ಅವರು ತಿರುವಾಂಕೂರ್ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು. ಅವರು ಜುಲೈ 1963 ರಲ್ಲಿ ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!