ಬಾಂಬ್- ಬಂದೂಕುಗಳ ಶಕ್ತಿಯಿಂದ ಬ್ರಿಟಿಷ್ ಆಳ್ವಿಕೆ ಕೊನೆಗಾಣಿಸುವ ಗುರಿ ಹೊತ್ತಿದ್ದ ಕ್ರಾಂತಿಕಾರಿ ದಶರಥಲಾಲ್ ಚೌಬೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್(‌ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ವಿಶೇಷ)
ದಶರಥಲಾಲ್ ಚೌಬೆ ಅವರು 1920 ರಲ್ಲಿ ರಾಯ್‌ಪುರದ ಕಂಕಾಲಿ ಪಾರಾ ಗ್ರಾಮದಲ್ಲಿ ಜನಿಸಿದರು. ಅವರು ಪದವಿಯವರೆಗೂ ಶಿಕ್ಷಣ ಪಡೆದಿದ್ದರು. ಅವರು ಬಾಲ್ಯದಿಂದಲೂ ಸ್ವಾತಂತ್ರ್ಯ ಚಳವಳಿಯ ಘಟನೆಗಳನ್ನು ನೋಡುತ್ತಲೇ ಬೆಳೆದಿದ್ದರು. ರಾಯಪುರದ ಅವರಿದ್ದ ಪ್ರದೇಶವು ಹಳೆಯ ವಸಾಹತು ಪ್ರದೇಶವಾಗಿತ್ತು. ಅಲ್ಲಿ ಅನೇಕ ಕ್ರಾಂತಿಕಾರಿಗಳು ಚಟುವಟಿಕೆ ನಡೆಸುತ್ತಿದ್ದರು. ಅವರ ಮನೆಯ ಸಮೀಪವೇ ಪರಶ್ರಾಮ್ ಸೋನಿ ಮತ್ತು ಇತರ ಕ್ರಾಂತಿಕಾರಿಗಳ ನಿವಾಸವಿತ್ತು. ನಿರ್ಭೀತ ವ್ಯಕ್ತಿತ್ವದ ದಶರಥ ಲಾಲ್ ಕ್ರಾಂತಿಕಾರಿ ಸಂಘಟನೆಯನ್ನು ಸೇರಿಕೊಂಡರು. ಬಾಂಬ್ ಮತ್ತು ಬಂದೂಕುಗಳ ಶಕ್ತಿಯಿಂದ ಬ್ರಿಟಿಷ್ ಆಳ್ವಿಕೆಯನ್ನು ಕೊನೆಗಾಣಿಸುವುದು ಅವರ ಗುರಿಯಾಗಿತ್ತು. 1939 ರಿಂದ ಪರಶ್ರಾಮ್ ಸೋನಿಯ ಸಹವರ್ತಿಯಾಗಿ ಅವರು ಬಾಂಬ್ ಮತ್ತು ಗನ್ ತಯಾರಿಕೆಯಲ್ಲಿ ತೊಡಗಿಕೊಂಡರು. ಮಾಳವೀಯ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ರಹಸ್ಯವಾಗಿ ಸಭೆ ನಡೆಸಿ ಬ್ರಿಟೀಷರ ವಿರುದ್ಧ ದಾಳಿಗೆ ರಹಸ್ಯ ಯೋಜನೆ ರೂಪಿಸಿದ್ದರು. ಆದರೆ ಆ ಸಂದರ್ಭದಲ್ಲಿ ಕ್ರಾಂತಿಕಾರಿಗಳು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಚೌಬೆ ಅವರು ಸ್ಫೋಟಕಗಳನ್ನು ಖರೀದಿಸಲು ಸಾಧ್ಯವಾದಷ್ಟು ಹಣವನ್ನು ಒಟ್ಟುಗೂಡಿಸಿದರು. ಚಾಬೆ ಜಿ ಬಳಿ ಅಮೆರಿಕನ್ ನಿರ್ಮಿತ ರಿವಾಲ್ವರ್ ಇತ್ತು. 1941 ರಿಂದಲೂ ಬ್ರಿಟೀಷರ ವಿರುದ್ಧ ದಾಳಿಗೆ ಹೊಂಚು ಹಾಕುತ್ತಿದ್ದ ಸಂಘಟನೆಯ ಸದಸ್ಯರು ತಮ್ಮ ಮನೆಗಳಲ್ಲಿ ಸ್ಫೋಟಕಗಳನ್ನು ತಯಾರಿಸಲು ವಸ್ತುಗಳನ್ನು ಬಚ್ಚಿಟ್ಟಿದ್ದರು. ಆದರೆ ದುರಾದೃಷ್ಟ ವಶಾತ್‌ ಈ ದಾಳಿಯ ವಿಚಾರ ಹೇಗೋ ಬ್ರಿಟೀಷರಿಗೆ ತಿಳಿದುಹೋಯಿತು. ಅಂದಿನಿಂದ ಚೌಬೆ ಅವರು ಪೊಲೀಸ್ ಗುಪ್ತಚರ ಇಲಾಖೆಯ ಗಮನಕ್ಕೆ ಬಂದಿದ್ದರು. 16 ಜುಲೈ 1943 ರಂದು ಅವರನ್ನು ಶಸ್ತ್ರಾಸ್ತ್ರ ಕಾಯಿದೆಯಡಿ ಬಂಧಿಸಲಾಯಿತು. ರಾಯ್‌ಪುರ ನ್ಯಾಯಾಲಯವು ಅವರಿಗೆ ಒಂದು ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಿತು.
ಅನೇಕ ದೊಡ್ಡ ವಕೀಲರು ಚೌಬೆ ಅವರ ಪರ ವಾದ ಮಾಡಲು ಮುಂದೆ ಬಂದರು. ಅವರು ನಾಗಪುರದ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ಹಾಗಿದ್ದರೂ ಚೌಬೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಈ ಪ್ರಕರಣದಲ್ಲಿ 7 ತಿಂಗಳ ಕಾಲ ಜೈಲು ಪಾಲಾಗಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!