ಸದಾ ನಿಮ್ಮೊಂದಿಗೆ ಇರುತ್ತೇನೆ: ಉಕ್ರೇನ್ ಜನತೆಗೆ ರಿಷಿ ಸುನಕ್ ತೆರೆದ ಪತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬ್ರಿಟಿಷ್ ಪ್ರಧಾನಿ ಸ್ಥಾನದ ಆಕಾಂಕ್ಷಿ ರಿಷಿ ಸುನಕ್ ಉಕ್ರೇನ್ ಸ್ವಾತಂತ್ಯ ದಿನಾಚರಣೆ ಸಂದರ್ಭದಲ್ಲಿ ತೆರೆದ ಪತ್ರವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ.

ಉಕ್ರೇನ್ ಸ್ವಾತಂತ್ರ್ಯ ದಿನಾಚರಣೆ ಹೊತ್ತಲ್ಲಿ ಬ್ರಿಟಿಷ್ ಕಿಂಗ್‌ಡಮ್‌ನಲ್ಲಿ ಜನರು ನಿಮ್ಮೊಂದಿಗೆ ಸದಾ ಇರುತ್ತಾರೆ ಎಂದು ರಿಷಿ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಜತೆ ಕೈವ್ ಪೋಸ್ಟ್​​ನಲ್ಲಿ ಪ್ರಕಟವಾದ ತೆರೆದ ಪತ್ರ, ಸುನಕ್ ಮತ್ತು ಉಕ್ರೇನಿಯ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜತೆಗಿನ ಫೋಟೊವನ್ನು ಪೋಸ್ಟ್ ಮಾಡಿ ನಮ್ಮ ಸ್ವಾತಂತ್ರ್ಯ ಉಕ್ರೇನಿನ ಗೆಲುವನ್ನು ಆಧರಿಸಿರುತ್ತದೆ ಎಂದಿದ್ದಾರೆ.

 

ಉಕ್ರೇನಿನ ಜನರನ್ನುದ್ದೇಶಿ ಬರೆದಿರುವ ಈ ತೆರೆದ ಪತ್ರ ದೃಢ ಧೈರ್ಯಕ್ಕಾಗಿ ನಾಗರಿಕರನ್ನು ಶ್ಲಾಘಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಅವರ ಶೌರ್ಯ ಪ್ರದರ್ಶನವು ‘ನಿರಂಕುಶಾಧಿಕಾರಿಗಳು’ ಎಂದಿಗೂ ಮೇಲುಗೈ ಸಾಧಿಸುವುದಿಲ್ಲ ಎಂಬ ಸಂದೇಶವನ್ನು ಕಳುಹಿಸಿದೆ ಎಂದಿದ್ದಾರೆ. ‘ನಮ್ಮ ದೇಶದಲ್ಲಿ ಇಲ್ಲಿ ಏನೇ ಬದಲಾವಣೆಗಳಿದ್ದರೂ, ನಾವು (ಬ್ರಿಟನ್ ಜನರು) ಯಾವಾಗಲೂ ನಿಮ್ಮ ಪ್ರಬಲ ಮಿತ್ರರಾಗಿ ಉಳಿಯುತ್ತೇವೆ ಎಂದಿದ್ದಾರೆ.

42 ವರ್ಷ ವಯಸ್ಸಿನ ಭಾರತ ಸಂಜಾತ ರಿಷಿ, ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಉಕ್ರೇನ್‌ಗೆ ಜೀವಿತಾವಧಿಯ ಸ್ನೇಹಿತನಿದ್ದಾರೆ ಮತ್ತು ಉಕ್ರೇನ್ ತನ್ನನ್ನು ತಾನೇ ಪುನರ್ನಿರ್ಮಿಸಲು ಸಹಾಯವನ್ನು ಪಡೆಯುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!