Thursday, June 30, 2022

Latest Posts

ಭಾರತ ಮಾತೆಗೆ ಸ್ವಾತಂತ್ರ್ಯ ದೊರಕಿಸಲು ಬ್ರಿಟೀಷರ ಗುಂಡಿಗೆ ಎದೆಯೊಡ್ಡಿದವರು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ (ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ವಿಶೇಷ)

ಸೋಂಬ್ರಾಯ್ ಮುಂಡಾ (ಜಾರ್ಖಂಡ್‌)
ಸೋಂಬ್ರಾಯ್ ಮುಂಡಾ ಜಿಲ್ಲೆಯ ರಾಂಚಿ ನಿವಾಸಿ.(ಈಗ ಜಾರ್ಖಂಡ್‌ನಲ್ಲಿದೆ). ಅವರು 1895-1900ರಲ್ಲಿ ಬಿರ್ಸಾ ಮುಂಡಾ ನೇತೃತ್ವದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಆದಿವಾಸಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಡೊಂಬರಿ ಗ್ರಾಮದ ಸಮೀಪವಿರುವ ಸೈಲ್ ರಕಬ್ ಬೆಟ್ಟಗಳ ಮೇಲೆ 1900 ರ ಜನವರಿ 9ರಂದು ವಸಾಹತುಶಾಹಿ ಪೋಲೀಸ್ ಪಡೆಗಳೊಂದಿಗೆ ನಡೆದ ರಕ್ತಸಿಕ್ತ ಘರ್ಷಣೆಯಲ್ಲಿ ತೀವ್ರವಾಗಿ ಗಾಯಗೊಂಡು ಬಲಿಯಾದರು.

ಬಂಟ ಸಿಂಗ್ ( ಅಂಡಮಾನ್)
ಬಂಟ ಸಿಂಗ್ ಅವರು ಪಂಜಾಬ್‌ನಿಂದ ಬಂದ ಭಾರತೀಯ ಸೇನಾ ಪಡೆಯಲ್ಲಿ ಅಂಡಮಾನ್ ದ್ವೀಪಗಳಿಗೆ ವರ್ಗಾಯಿಸಲ್ಪಟ್ಟ ಸೇನಾ ಸಿಪಾಯಿ ಆಗಿದ್ದರು. ನಂತರ ಅವರು ಪೋರ್ಟ್ ಬ್ಲೇರ್‌ನ ಹಡ್ಡೋದಲ್ಲಿ ನೆಲೆಸಿದರು.
ಮೇ 1942 ರಂದು ಅವರು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ (IIL) ಗೆ ಸೇರಿದರು. ಗ್ರಾಮ ಮಟ್ಟದಲ್ಲಿ ಅದರ ಚಟುವಟಿಕೆಗಳನ್ನು ಮುಂದುವರೆಸುತ್ತಾ ಲೀಗ್‌ನ ಸಕ್ರಿಯ ಸದಸ್ಯರಾದರು. ಅವರನ್ನು ಅಕ್ಟೋಬರ್ 1943 ರಲ್ಲಿ ಅವರನ್ನು ಸೆರೆಹಿಡಿದು ಸೆಲ್ಯುಲಾರ್ ಜೈಲಿನಲ್ಲಿ ಬಂಧಿಸಲಾಯಿತು. ಜೈಲಿನಲ್ಲಿ ಸೆರೆವಾಸದಲ್ಲಿದ್ದಾಗ ಆತನಿಗೆ ಕ್ರೂರವಾಗಿ ಚಿತ್ರಹಿಂಸೆ ನೀಡಲಾಯಿತು. 30 ಜನವರಿ 1944 ರಂದು, ಅವರನ್ನು ದಕ್ಷಿಣ ಅಂಡಮಾನ್‌ನ ಹೋಮ್‌ಫ್ರೇಗಂಜ್‌ನಲ್ಲಿ 43 ಇತರರೊಂದಿಗೆ ಗುಂಡಿಕ್ಕಿ ಕೊಂದು ಸಾಮೂಹಿಕ ಸಮಾಧಿಯಲ್ಲಿ ಹೂಳಲಾಯಿತು. ಅವರು ಹುತಾತ್ಮರಾದ ಸ್ಥಳದಲ್ಲಿ ಅವರ ಸ್ಮರಣಾರ್ಥ ‘ಬಲಿದಾನ ವೇದಿಕೆ’ ಎಂಬ ಸ್ಮಾರಕವನ್ನು ನಿರ್ಮಿಸಲಾಗಿದೆ.

ರಾಘೋಜಿ ಭಂಗ್ರೆ (ಮಹಾರಾಷ್ಟ್ರ)
ರಾಘೋಜಿ ಭಂಗ್ರೆ (1805-1848) ಒಬ್ಬ ಭಾರತೀಯ ಕ್ರಾಂತಿಕಾರಿಯಾಗಿದ್ದು, ರಾಮ್‌ಜಿ ರಾವ್ ಭಂಗ್ರೆ ಎಂಬ ಕೂಲಿಯವರ ಪುತ್ರರಾಗಿದ್ದರು. ಅವರು ಮಹಾರಾಷ್ಟ್ರದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಶಾಹಿಗಳಿಗೆ ಸವಾಲೊಡ್ಡಿ ಅವರ ಅಧಿಕಾರವನ್ನು ಧಿಕ್ಕರಿಸಿದರು. ಭಂಗ್ರೆ 1844 ರಲ್ಲಿ ಹೊಂಚುದಾಳಿಯಲ್ಲಿ ಬ್ರಿಟಿಷ್ ಅಧಿಕಾರಿ ಮತ್ತು 10 ಕಾನ್‌ಸ್ಟೆಬಲ್‌ಗಳನ್ನು ಕೊಂದುಹಾಕಿದ್ದರು. ಅವರ ಹೋರಾಟಗಳಿಂದ ಕುಪಿತಗೊಂಡ ಬ್ರಿಟೀಷರು ಭಂಗ್ರೆಯನ್ನು ಸೆಲ್ಯುಲಾರ್ ಜೈಲಿನಲ್ಲಿ ಗಲ್ಲಿಗೇರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss