ದೇಶಭಕ್ತಿ ಬಗ್ಗೆ ರಾಮಲಿಂಗಂ ರಚಿಸಿದ್ದ ಕವಿತೆಗಳು ಸತ್ಯಾಗ್ರಹಿಗಳ ಮಂತ್ರವಾಗಿದ್ದವು…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ʼನಾಮಕ್ಕಲ್ ಕವಿಘರ್ನರ್ʼ ಎಂದೇ ಜನಪ್ರಿಯತೆ ಗಳಿಸಿರುವ ವೆಂಕಟರಾಮ ರಾಮಲಿಂಗಂ ಪಿಳ್ಳೆ ಅವರು 1888ರ ಅಕ್ಟೋಬರ್ 19  ರಂದು ತಮಿಳ್ನಾಡು ರಾಜ್ಯದ ಸೇಲಂ ಜಿಲ್ಲೆಯ ಮೋಹನೂರಿನಲ್ಲಿ ಜನಿಸಿದರು.
ಅವರ ತಂದೆ ಮೋಹನೂರಿನ ಹೆಡ್ ಕಾನ್‌ಸ್ಟೆಬಲ್ ಮತ್ತು ಅವರ ತಾಯಿ ಸೇಲಂನ ಧಾರ್ಮಿಕ ಮಹಿಳೆಯಾಗಿದ್ದರು. 1909 ರಲ್ಲಿ ತಿರುಚಿರಾಪಳ್ಳಿಯ ಬಿಷಪ್ ಹೆಬರ್ ಕಾಲೇಜಿನಲ್ಲಿ ಲಲಿತಕಲೆಗಳನ್ನು ಅಭ್ಯಾಸಿಸಿದರು. ರಾಮಲಿಂಗಂ ಅವರ ತಂದೆ ಮಗ ಸಬ್ ಇನ್ಸ್‌ಪೆಕ್ಟರ್ ಆಗಬೇಕೆಂದು ಬಯಸಿದ್ದರು ಆದರೆ ರಾಮಾಲಿಂಗಮ್‌ ಚಿತ್ರಕಾರ ಮತ್ತು ಛಾಯಾಗ್ರಾಹಕ ವೃತ್ತಿಯನ್ನು ಆರಿಸಿಕೊಂಡರು. ಯೌವ್ವನದಲ್ಲಿ ಕವನ ಮತ್ತು ಹಾಡುಗಳನ್ನು ಬರೆಯುವ ಹವ್ಯಾಸವನ್ನು ಹೊಂದಿದ್ದರು. ಬಾಲಗಂಗಾಧರ ತಿಲಕ್ ಮತ್ತು ಅರಬಿಂದೋ ಘಫಷ್‌ ರಿಂದ ಪ್ರೇರಿತರಾದ ರಾಮಲಿಂಗಂ ತೀಗ್ರಗಾಮಿಯಾಗಿ ರಾಜಕೀಯ ಪ್ರವೇಶಿಸಿದರು ಆದರೆ ಆ ಬಳಿಕ ಮಹಾತ್ಮ ಗಾಂಧಿಯವರ ಪ್ರಭಾವಕ್ಕೊಳಗಾಗಿ ಅವರ ಅನುಯಾಯಿಯಾದರು. 1920 ರ ದಶಕದಲ್ಲಿ ನಾಮಕ್ಕಲ್ ಮತ್ತು ತಿರುಚ್ಚಿಯ ಹಿರಿಯ ಕಾಂಗ್ರೆಸ್ ನಾಯಕರಾದರು. ಅವರು ‘ನಾಥುಕುಮ್ಮಿ’ ಎಂದು ಕರೆಯಲ್ಪಡುವ ದೇಶಭಕ್ತಿ ಕುರಿತಾದ ನೂರು ಕವನಗಳನ್ನು ಬರೆದು ಪ್ರಖ್ಯಾತಿ ಗಳಿಸಿದರು.
1930 ರ ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ, ಸತ್ಯಾಗ್ರಹಿಗಳು ರಾಮಲಿಂಗಂ ರಚಿಸಿದ ಹಾಡುಗಳನ್ನು ಹಾಡುವ ಮೂಲಕ ತಿರುಚ್ಚಿಯಿಂದ ವೇದಾರಣ್ಯಂಗೆ ಮೆರವಣಿಗೆ ನಡೆಸಿದರು. 1932ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ ರಾಮಲಿಂಗಂ ಒಂದು ವರ್ಷ ಜೈಲು ವಾಸ ಅನುಭವಿಸಿದರು. ಅವರು 500 ಕ್ಕೂ ಹೆಚ್ಚು ಕವನಗಳನ್ನು ರಚಿಸಿದ್ದಾರೆ, ಅವುಗಳಲ್ಲಿ ಹೆಚ್ಚಿನವು ಅಹಿಂಸೆ, ಸತ್ಯ, ಸತ್ಯಾಗ್ರಹ, ಗಾಂಧೀಜಿಯವರ ವಿಚಾರಗಳನ್ನು ಪ್ರತಿಬಿಂಬಿಸುತ್ತವೆ. ಅವರ ಸಾಹಿತ್ಯಿಕ ಕೊಡುಗೆಗಳನ್ನು ಗೌರವಿಸಿ ಮದ್ರಾಸ್ ಸರ್ಕಾರ ಅವರನ್ನು 1949 ರಲ್ಲಿ ಕವಿ ಪ್ರಶಸ್ತಿ ಪುರಸ್ಕೃತ ಅಥವಾ ‘ಆಸ್ಥಾನ ಕವಿಘನರ್’ ಎಂದು ನಾಮನಿರ್ದೇಶನ ಮಾಡಿತು.
1956 ಮತ್ತು 1962 ರಲ್ಲಿ, ರಾಮಲಿಂಗಂ ಅವರನ್ನು ಮದ್ರಾಸ್ ಸರ್ಕಾರವು ಎಂಎಲ್‌ಸಿ ಯನ್ನಾಗಿ ನಾಮನಿರ್ದೇಶನ ಮಾಡಿತು. ಭಾರತ ಸರ್ಕಾರವು 1971 ರಲ್ಲಿ ಅವರಿಗೆ ‘ಪದ್ಮಭೂಷಣ’ ನೀಡಿ ಗೌರವಿಸಿತು. ಅವರು 24 ಆಗಸ್ಟ್ 1972 ರಂದು ಹೃದಯಾಘಾತದಿಂದ ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!