ದಿನಭವಿಷ್ಯ | ಅನಿರೀಕ್ಷಿತವಾಗಿ ಈ ರಾಶಿಯವರಿಗೆ ಕಷ್ಟದ ಹೊರೆ ಬೀಳಲಿದೆ

ಮೇಷ
ನಿಮ್ಮ ಚಿಂತನೆ, ಕಾರ್ಯಶೈಲಿಗೆ ಇತರರಿಂದ ಮೆಚ್ಚುಗೆ ಸಿಗಲಾರದು.  ಇದರಿಂದ ಎದೆಗುಂದಬೇಡಿ. ನಿಮ್ಮ ಕಾರ್ಯ ಅದೇರೀತಿ ಮುಂದುವರಿಸಿ.

ವೃಷಭ
ದಿನವಿಡೀ ಯಾವುದೋ ವಿಚಾರದಲ್ಲಿ ವ್ಯಸ್ತ ರಾಗುವಿರಿ. ಯಾವುದೇ ವಿಷಯಕ್ಕೆ ಗಟ್ಟಿಯಾಗಿ   ಅಂಟಿಕೊಳ್ಳಬೇಡಿ. ಬದಲಾವಣೆಗೆ ಸದಾ ಸಿದ್ಧರಾಗಿರಿ.

ಮಿಥುನ
ಅನಿರೀಕ್ಷಿತವಾದ,  ಕಷ್ಟಕರವಾದ ಕೆಲಸದ ಹೊಣೆ ನಿಮ್ಮ ಮೇಲೆ ಬೀಳಲಿದೆ. ಅದನ್ನು ಸರಿಯಾಗಿಯೇ ನಿಭಾಯಿಸಿ ಮೆಚ್ಚುಗೆ ಗಳಿಸುವಿರಿ.

ಕಟಕ
ಆತ್ಮೀಯ ಸಂಬಂಧಕ್ಕೆ ಹುಳಿ ಹಿಂಡಲು ಕೆಲವರ ಯತ್ನ. ಅದಕ್ಕೆ ಅವಕಾಶ ನೀಡದಿರಿ. ಆರೋಗ್ಯಕ್ಕೆ ಸಂಬಂಧಿಸಿ ನಿಮ್ಮದೇ ಪರಿಹಾರಕ್ಕೆ ಹೋಗದಿರಿ. ವೈದ್ಯರನ್ನು ಕಾಣಿ.

ಸಿಂಹ
ಕೆಲವು ವ್ಯಕ್ತಿಗಳ ನಿರ್ಲಕ್ಷ್ಯಕ್ಕೆ ತಲೆ ಕೆಡಿಸಿಕೊಳ್ಳದಿರಿ. ನಿಮ್ಮ ಕೆಲಸದತ್ತ ಗಮನಹರಿಸಿ. ಸಮಸ್ಯೆಗಳಿಗೆ ತಕ್ಷಣವೆ ಪರಿಹಾರ ಹುಡುಕಿಕೊಳ್ಳಿ. ಬೆಳೆಯಲು ಬಿಡದಿರಿ.

ಕನ್ಯಾ
ಧನಲಾಭ. ಆರ್ಥಿಕ ಕೊರತೆ ನೀಗುವುದು. ಆಸಿಡಿಟಿ, ಅಜೀರ್ಣದಂತಹ ಸಮಸ್ಯೆ ಕಾಡ ಬಹುದು. ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.

ತುಲಾ
ಪ್ರೀತಿಯ ವಿಷಯದಲ್ಲಿ ಸಂತೋಷದ ಬೆಳವಣಿಗೆ. ಉಲ್ಲಸಿತ. ಇದರಿಂದ ಕೆಲಸದ ಒತ್ತಡ, ಉದ್ವಿಗ್ನತೆ ಮಾಯವಾಗಲಿದೆ. ಆರ್ಥಿಕ ಉನ್ನತಿ.

ವೃಶ್ಚಿಕ
ಅದೃಷ್ಟದ ದಿನ. ಸವಾಲಿನ ಕೆಲಸಗಳು ಸುಗಮವಾಗಿ ನಡೆಯುತ್ತವೆ. ಕಷ್ಟಪಟ್ಟರೆ ಫಲ ನಿಶ್ಚಿತ ಎಂಬ ಅರಿವು ನಿಮಗಾಗಲಿದೆ. ಇತರರಿಗೆ ನೆರವು ನೀಡುವಲ್ಲಿ ಹಿಂಜರಿಕೆ ಬೇಡ.

ಧನು
ನೀವು ಇಂದು ವಿಭಿನ್ನ , ವೈರುಧ್ಯ ಭಾವಗಳನ್ನು ಅನುಭವಿಸುತ್ತೀರಿ. ಕೆಲಸದಲ್ಲಿ ಅಧಿಕ ಒತ್ತಡ. ಇನ್ನೊಂದೆಡೆಯಿಂದ ಪ್ರೀತಿಪಾತ್ರರ ಕಾಳಜಿ. ಮಿಶ್ರ ಫಲ.

ಮಕರ
ನಿಮ್ಮ ಕೆಲಸದಲ್ಲಿ ಭಾರೀ ಯಶಸ್ಸು ಸಾಧಿಸುವಿರಿ. ಇದರಿಂದ ಉದ್ಯೋಗದ ಒತ್ತಡ ನಿವಾರಣೆ. ಸಂಜೆ ವೇಳೆಗೆ ಪ್ರೀತಿಪಾತ್ರ ರಿಂದ ಕೊಡುಗೆ. ಮಾನಸಿಕ ನೆಮ್ಮದಿ.

ಕುಂಭ
ಕಾರ್ಯಕ್ಷೇತ್ರದಲ್ಲಿ ವಿರೋಧಿಗಳ ಕಡೆಗೊಂದು ಕಣ್ಣಿಡಿ. ಕೆಲಸದಲ್ಲಿ ಜಾಗ್ರತೆ ವಹಿಸಿ. ಕೌಟುಂಬಿಕವಾಗಿ ಸಹಕಾರ ವೃದ್ಧಿ. ಕಾರ್ಯ ಸಂಪೂರ್ಣ.

ಮೀನ
ನೀವಿಂದು ಆರಂಭಿಸುವ ಕಾರ್ಯವು ದೀರ್ಘಾ ವಧಿಯಲ್ಲಿ ಉತ್ತಮ ಫಲ ನೀಡಲಿದೆ.  ಆಪ್ತರ ಸಂಗದಲ್ಲಿ ಒತ್ತಡ ನಿವಾರಣೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!