ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಮ್ಯಾಜಿಸ್ಟ್ರೇಟನನ್ನು ಗುಂಡಿಕ್ಕಿ ಕೊಂದಿದ್ದರು ಜ್ಯೋತಿಜಿಬಾನ್ ಘೋಷ್ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ (ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಶೇಷ)

ಜ್ಯೋತಿಜಿಬಾನ್ ಘೋಷ್ ಅವರು ವಕೀಲರಾದ ಜಮಿನಿಜಿಬಾನ್ ಘೋಷ್ ಅವರ ಮಗ, ಮಿಡ್ನಾಪುರ ಜಿಲ್ಲೆಯ ಮಿಡ್ನಾಪುರ ಪಟ್ಟಣದಲ್ಲಿ ಜನಿಸಿದರು. ಆ ಕಾಲದಲ್ಲಿ ಕ್ರಾಂತಿಕಾರಿಗಳ ಕೇಂದ್ರವೆಂದೇ ಚಿರಪರಿಚಿತವಾಗಿದ್ದ ಮಿಡ್ನಾಪುರದ ಕಾಲೇಜಿಯೇಟ್ ಶಾಲೆಯಲ್ಲಿ ಅವರು ಅಧ್ಯಯನ ಮಾಡಿದರು.

ಶಾಲಾ ವಿದ್ಯಾರ್ಥಿಗಳಾಗಿದ್ದಾಗ, ಘೋಷ್ ಅವರು ಕ್ರಾಂತಿಕಾರಿ ದಿನೇಶ್ಚಂದ್ರ ಮಜುಂದಾರ್ ಅವರಿಂದ ಪ್ರೇರಣೆ ಪಡೆದರು, ಅವರ ಮಾರ್ಗದರ್ಶನದಲ್ಲಿ 1930 ರ ದಶಕದಲ್ಲಿ ಬಂಗಾಳದ ಪ್ರಮುಖ ಕ್ರಾಂತಿಕಾರಿ ಸಂಘಟನೆಯಾದ ಬಂಗಾಳ ಸ್ವಯಂಸೇವಕರನ್ನು ಸೇರಿಕೊಂಡರು. 1930 ರಲ್ಲಿ, ಮಿಡ್ನಾಪುರವು ಅಸಹಕಾರ ಚಳವಳಿಯ ಉತ್ತುಂಗದಲ್ಲಿತ್ತು. ಆಂದೋಲನವನ್ನು ನಿಗ್ರಹಿಸಲು ಜಿಲ್ಲಾ ಶ್ರೀ ಜೇಮ್ಸ್ ಪೆಡ್ಡಿ ಅವರು ನಿರಾಯುಧ ಚಳವಳಿಗಾರರ ಮೇಲೆ ಪೊಲೀಸ್‌ ಬಲವನ್ನು ಪ್ರಯೋಗಿಸಿ ಭಯ ಹುಟ್ಟಿಸಿದರು, ಮಹಿಳೆಯರನ್ನೂ ಸಹ ಬಿಡಲಿಲ್ಲ.

ಇದರಿಂದ ಕುಪಿತಗೊಂಡ ಕ್ರಾಂತಿಕಾರಿ ಬಂಗಾಳ ಸ್ವಯಂಸೇವಕರು ಜೇಮ್ಸ್ ಪೆಡ್ಡಿ ಯನ್ನು ತೊಡೆದುಹಾಕಲು ನಿರ್ಧರಿಸಿದರು. ಈ ಕೆಲಸಕ್ಕೆ ಜ್ಯೋತಿಜೀವನ್ ಮತ್ತು ಬಿಮಲ್ ದಾಸ್‌ ಗುಪ್ತರನ್ನು ಆಯ್ಕೆ ಮಾಡಲಾಯಿತು. ಇನ್ನೊಬ್ಬಕ್ರಾಂತಿಕಾರಿ ಮನೋರಂಜನ್ ಸೇನ್ ಕಲ್ಕತ್ತಾದಿಂದ ಖರಗ್‌ಪುರ ರೈಲು ನಿಲ್ದಾಣದವರೆಗೆ ರಿವಾಲ್ವರ್‌ಗಳನ್ನು ಸಾಗಿಸಿಕೊಟ್ಟರು. ನಂತರ 7 ಏಪ್ರಿಲ್ 1931 ರಂದು ಮಿಡ್ನಾಪುರ್ ಕಾಲೇಜಿಯೇಟ್ ಶಾಲೆಯಲ್ಲಿ ಚಿತ್ರಕಲಾ ಪ್ರದರ್ಶನಕ್ಕೆ ಭೇಟಿನೀಡಿದ ಜೇಮ್ಸ್‌ ಪೆಡ್ಡಿಯನ್ನು ಜ್ಯೋತಿಜೀವನ್ ಮತ್ತು ಬಿಮಲ್ ಘೋಷ್‌ ಅವರು ಗುಂಡಿಕ್ಕಿ ಕೊಂದರು.

ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿ ಬಂಕೂರ್ ಮೂಲಕ ಕಲ್ಕತ್ತಾವನ್ನು ತಲುಪಿದರು. ನಂತರ ತಿಂಗಳುಗಟ್ಟಲೆ ತಮ್ಮ ಅಡಗುತಾಣಗಳನ್ನು ಬದಲಾಯಿಸುತ್ತ ಅಂತಿಮವಾಗಿ ಸುರಕ್ಷಿತವಾಗಿ ಮಿಡ್ನಾಪುರದ ಮನೆಗೆ ಮರಳಿದರು. ಆ ಸಮಯದಲ್ಲಿ ಪೊಲೀಸರಿಗೆ ಆತನ ಬಗ್ಗೆ ಕಿಂಚಿತ್ತೂ ಅನುಮಾನವೂ ಮೂಡಿರಲಿಲ್ಲ. ನಂತರ 2 ಸೆಪ್ಟೆಂಬರ್ 1932 ರಂದು, ಅವರ ಕಿರಿಯ ಸಹೋದರ ನಿರ್ಮಲಜೀವನ್ ಅವರು ಕುಖ್ಯಾತ ಜಿಲ್ಲಾ ಮ್ಯಾಜಿಸ್ಟ್ರೇಟ್ ಬರ್ನಾರ್ಡ್ ಇ ಜೆ ಬರ್ಗ್ ಅವರನ್ನು ಕೊಂದರು. ಆಗ ಜ್ಯೋತಿಜೀವನ್ ಘೋಷ್ ಅವರನ್ನು 1938 ರವರೆಗೆ ಬಂಧಿಸಿ ಜೈಲಿನಲ್ಲಿರಿಸಲಾಯಿತು.

ಅವರ ಮರಣದ ಕುರಿತು ಹಲವು ಊಹಾಪೋಹಗಳಿರುವುದರಿಂದ ಅವರ ಮರಣದ ಕುರಿತಾಗಿ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!