ಉತ್ತರಕನ್ನಡದ ಈ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕೇಳಿದ್ದೀರಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್: (ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಶೇಷ)

ಕಣಿ ಬೊಮ್ಮಕ್ಕ:
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ವಿಶಿಷ್ಟ ಸಾಹಸವನ್ನು ಪ್ರದರ್ಶಿಸಿದ ಭಾರತದ ದಿಟ್ಟ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಕಣಿ ಬೊಮ್ಮಕ್ಕ. ಪೋಲೀಸರ ಬಿಗಿ ಬಂದೋ ಬಸ್ತಿನ ನಡುವೆಯೂ ಗವರ್ನರ್‌ ಗೆ ಚಳುವಳಿಯ ಸಂದೇಶಸಾರಿದ ಧೀರೆ ಈ ಬೊಮ್ಮಕ್ಕ.

ಆ ದಿವಸ, 22 ಸೆಪ್ಟೆಂಬರ್ 1932 ರ ಮುಂಜಾನೆ, ಪೊಲೀಸರ ದೊಡ್ಡ ಗುಂಪು ಮುಂಬೈನ ಗವರ್ನರ್‌ಶಿಪ್ ತೀರಕ್ಕೆ ಬಂದಿಳಿದಿತ್ತು. ಆದರೆ ಸುತ್ತಲೂ ದಾರಿಹೋಕರ ದೊಡ್ಡ ಗುಂಪೇ ನೆರೆದಿತ್ತು. ಅವರಿಂದ ರಾಜ್ಯ ಪಾಲರಿಗೆ ರಕ್ಷಣೆ ಒದಗಿಸಲು ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಆದರೆ ಗವರ್ನರ್‌ ಗೆ ಅಚ್ಚರಿ ಕಾದಿತ್ತು. ಪೊಲೀಸರ ಬಿಗಿ ಬಂದೋಬಸ್ತಿಯನ್ನು ಧೈರ್ಯವಾಗಿ, ಜಾಣ್ಮೆಯಿಂದ ಭೇದಿಸಿ ಒಳಹೊಕ್ಕ ಕಣಿ ಬೊಮ್ಮಕ್ಕ ಚಳುವಳಿಯ ಸಂದೇಶ ಸಾರಿದ್ದಳು.

ಗವರ್ನರ್‌ ಸಿಟ್ಟಿಗೆದ್ದಿದ್ದರು. ಪಕ್ಕದಲ್ಲಿದ್ದ ಗನ್‌ ತೆಗೆದುಕೊಂಡು ಗುಂಡು ಹಾರಿಸಿದರು, ಅದೃಷ್ಟವಶಾತ್‌ ಬೊಮ್ಮಕ್ಕ ಗುಂಡಿನಿಂದ ಪಾರಾಗಿದ್ದಳು. ಕೂಡಲೇ ಆಕೆಯನ್ನು ಪೋಲೀಸರು ಬಂಧಿಸಿದರು.

ಘಟನೆಯ ಹಿನ್ನೆಲೆ:
ಗವರ್ನರ್‌ ಹಡಗನ್ನು ಏರುವಾಗ ʼಗೋ-ಬ್ಯಾಕ್ ಗವರ್ನರ್’ ಎಂಬ ಕಪ್ಪು ಬಾವುಟದ ಘೋಷಣೆಯನ್ನು ಪ್ರದರ್ಶಿಸಲು ಹೋರಾಟಗಾರರು ಯೋಜನೆ ಸಿದ್ಧಪಡಿಸಿದ್ದರು. ರಾಜ್ಯಪಾಲರ ವಿರುದ್ಧ ಹೋರಾಟ ಮಾಡಲು ಅಂಕೋಲಾದ ನೂರಾರು ಜನರು ಜಿಲ್ಲೆಯಿಂದ ಹೋಗಿದ್ದರು. ಅದರಲ್ಲಿ ಬೊಮ್ಮಕ್ಕನೂ ಒಬ್ಬಳು. ಪೋಲೀಸರ ಬಿಗಿ ಬಂದೋಬಸ್ತ್‌ ನಡುವೆಯೂ ತನಗೆ ವಹಿಸಿದ್ದ ಕರ್ತವ್ಯವನ್ನು ಬೊಮ್ಮಕ್ಕ ನಿಭಾಯಿಸಿದ್ದಳು. ಹದಿಹರೆಯದ ಹುಡುಗಿಯಾಗಿದ್ದರೂ ಅಜ್ಜಿಯಂತೆ ನಟಿಸುತ್ತ ರಾಜ್ಯಪಾಲರ ಬಳಿಗೆ ಬಂದು ಕಪ್ಪು ಬಾವುಟವನ್ನು ಹಿಡಿದು “ಗೋ ಬ್ಯಾಕ್ ಗವರ್ನರ್” ಎಂದು ಘೋಷಿಸಿದ್ದಳು ಮತ್ತು ತನ್ನ ಕರ್ತವ್ಯವನ್ನು ನಿರ್ವಹಿಸಿದ್ದಳು ʼಕಣಿ ಬೊಮ್ಮಕ್ಕʼ.


 

ದೊಡ್ಮನೆ ನಾಗೇಶ ಹೆಗಡೆ:
ದೊಡ್ಮನೆ ಹೆಗಡೆ ಮನೆತನದ ಏಳು ವಿವಿಧ ಶಾಖೆಗಳು 1930 ರ ಭಾರತೀಯ ಸ್ವಾತಂತ್ರ್ಯ ಹೋರಾಟದ ಚಳುವಳಿಯಲ್ಲಿ ಭಾಗವಹಿಸಿದ್ದವು. 1917 ರಲ್ಲಿ ಮೊದಲು ಭಾಗವಹಿಸಲು ಪ್ರಾರಂಭಿಸಿದ ವ್ಯಕ್ತಿ ನಾರಾಯಣ ಗಣೇಶ ಹೆಗಡೆ ದೊಡ್ಮನೆ. ಅಂದಿನಿಂದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಿಂದ ಸುಮಾರು 16 ಮೈಲಿ ದೂರದಲ್ಲಿರುವ ದೊಡ್ಮನೆ ಎಂಬ ಗ್ರಾಮದಲ್ಲಿ ಸ್ವಾತಂತ್ರ್ಯದ ಪ್ರತಿಜ್ಞೆ ಮುಂದುವರೆಯಿತು.

ಸಿದ್ದಾಪುರದಲ್ಲಿ ʼಕರಬಂಡಿ ಚಳವಳಿʼ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಈ ಚಳವಳಿಯ ಸಂದರ್ಭದಲ್ಲಿ ದೊಡ್ಮನೆ ನಾಗೇಶ ಹೆಗಡೆ ಅಧ್ಯಕ್ಷರಾಗಿದ್ದರು ಮತ್ತು ಸುಬ್ರಾಯ ಭಟ್ ಕಾರ್ಯದರ್ಶಿಯಾಗಿದ್ದರು.

ಆಂದೋಲನದ ಕೇಂದ್ರದಿಂದ ತಾಲ್ಲೂಕಿನ ಎಲ್ಲ ಭಾಗಗಳಿಗೂ ಸಂದೇಶ ರವಾನೆಯಾಯಿತು. ಕರಬಂಡಿ ಚಳವಳಿಯಿಂದಾಗಿ ಸುಮಾರು 120 ಜನರನ್ನು ಸಿದ್ದಾಪುರದಲ್ಲಿ ಗೃಹಬಂಧನದಲ್ಲಿ ಇರಿಸಲಾಗಿತ್ತು. 23 ಕುಟುಂಬಗಳನ್ನು ತಾಲೂಕಿನಲ್ಲಿ ಶಾಶ್ವತವಾಗಿ ನಿರ್ಗತಿಕರನ್ನಾಗಿಸಲು ಒತ್ತಾಯಿಸಲಾಯಿತು. ಆ ಕುಟುಂಬಗಳಲ್ಲಿ ನಾಗೇಶ ಹೆಗಡೆ ದೊಡ್ಮನೆ ಅವರ ಕುಟುಂಬವೂ ಒಂದು. ಅರಣ್ಯ ಸತ್ಯಾಗ್ರಹವು ಪ್ರದೇಶದಲ್ಲಿ ಗಲಭೆಯೊಂದಿಗೆ ಪ್ರಾರಂಭವಾಯಿತು. ಅದರಲ್ಲೂ ದೊಡ್ಮನೆ ಕುಟುಂಬದ ಪಾತ್ರ ಪ್ರಮುಖವಾದದ್ದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!