ಬಿಗಿ ಭದ್ರತೆಯಲ್ಲಿ ಭಾಗ್ಯಲಕ್ಷ್ಮಿ ದೇವಿಯ ದರ್ಶನ ಪಡೆದ ಸಿಎಂ ಯೋಗಿ ಆದಿತ್ಯಾನಾಥ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭಾನುವಾರ ಬೆಳಗ್ಗೆ ಚಾರ್ಮಿನಾರ್ ಪ್ರದೇಶದಲ್ಲಿರುವ ಭಾಗ್ಯಲಕ್ಷ್ಮಿ ದೇವಿಯ ದರ್ಶನ ಪಡೆದರು. ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್, ಶಾಸಕ ರಾಜಾಸಿಂಗ್, ರಾಜ್ಯಸಭಾ ಸದಸ್ಯ ಲಕ್ಷ್ಮಣ್ ಯುಪಿ ಸಿಎಂಗೆ ಸಾಥ್‌ ನೀಡಿದ್ರು. ಯೋಗಿ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ದೇವಸ್ಥಾನವನ್ನು ಮದುವಣಗಿತ್ತಿಯಂತೆ ಸಿಂಗರಿಸಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಹಾಗೂ ರಾಜ್ಯಸಭಾ ಸಂಸದ ಡಾ.ಲಕ್ಷ್ಮಣ್ ದೇವಿಯ ದೇವಸ್ಥಾನದ ವಿಶಿಷ್ಟತೆಯನ್ನು ಯೋಗಿಗೆ ವಿವರಿಸಿದರು. ಭಾಗ್ಯಲಕ್ಷ್ಮಿ ದೇಗುಲಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ಹಿನ್ನೆಲೆಯಲ್ಲಿ ಚಾರ್ಮಿನಾರ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳದಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ. ದೇವಾಲಯಕ್ಕೆ ಭೇಟಿ ನೀಡುವ ಎಲ್ಲರನ್ನೂ ಕೂಲಂಕುಷವಾಗಿ ತಪಾಸಣೆ ಮಾಡಿ ಕಳುಹಿಸಲಾಯಿತು. ದೇವಸ್ಥಾನದ ಸುತ್ತ 500 ಮೀಟರ್ ಅಂತರದಲ್ಲಿ ಮೂರು ಭದ್ರತಾ ರಿಂಗ್‌ಗಳನ್ನು ಹಾಕಲಾಗಿದೆ.

ಒಟ್ಟು 350 ಪೊಲೀಸರು ಚಾರ್ಮಿನಾರ್, ಭಾಗ್ಯಲಕ್ಷ್ಮಿ ದೇವಸ್ಥಾನ, ಲಾಡ್ ಬಜಾರ್ ಮತ್ತು ಸರ್ದಾರ್ ಮಹಲ್ ಅನ್ನು ಸುತ್ತುವರಿದಿದ್ದಾರೆ. ವೇಳಾಪಟ್ಟಿಯ ಪ್ರಕಾರ, ಯೋಗಿ ಆದಿತ್ಯನಾಥ್ ಶನಿವಾರವೇ ದೇವಿಯ ದರ್ಶನ ಮಾಡಬೇಕಿತ್ತು, ಆದರೆ ಸಮಯ ಹೊಂದಾಣಿಕೆ ಆಗದ ಕಾರಣ ಮುಂದೂಡಲಾಗಿತ್ತು.

Yogi

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!