ಮೊಬೈಲ್ ಕದ್ದ ಯುವಕನಿಗೆ ನಿರ್ದಯವಾಗಿ ಥಳಿಸಿ, ಚಲಿಸುತ್ತಿದ್ದ ರೈಲಿಂದ ತಳ್ಳಿ ಕೊಂದ ಜನಸಮೂಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಯೋಧ್ಯೆ-ದೆಹಲಿ ಎಕ್ಸ್‌ಪ್ರೆಸ್‌ನಲ್ಲಿ ಮೊಬೈಲ್ ಫೋನ್ ಕದ್ದ ಆರೋಪದ ಮೇಲೆ 20 ರ ಹರೆಯದ ಯುವಕನನ್ನು ಜನರ ಗುಂಪೊಂದು ನಿರ್ದಯವಾಗಿ ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ಅವರನ್ನು ನಿರ್ದಯವಾಗಿ ಥಳಿಸಿ ಚಲಿಸುತ್ತಿದ್ದ ರೈಲಿನಿಂದ ಎಸೆದಿದ್ದಾರೆ.
ಶಹಜಹಾನ್‌ಪುರ ರೈಲ್ವೆ ನಿಲ್ದಾಣದ ಬಳಿ ಮಹಿಳಾ ಪ್ರಯಾಣಿಕರೊಬ್ಬರು ತನ್ನ ಮೊಬೈಲ್ ಫೋನ್ ಕಾಣೆಯಾದ ಬಗ್ಗೆ ಹೇಳಿಕೊಂಡಿದ್ದಾರೆ. ಎಲ್ಲೆಡೆ ಹುಡುಕಿದಾಗ ಲಕ್ನೋದಿಂದ ರೈಲು ಹತ್ತಿದ ವ್ಯಕ್ತಿಯಲ್ಲಿ ಫೋನ್ ಪತ್ತೆಯಾಗಿದೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರ ಗುಂಪು ಸುಮಾರು ಅರ್ಧ ಗಂಟೆಗಳ ಕಾಲ ವ್ಯಕ್ತಿ ಮೇಲೆ ಹಲ್ಲೆ ಮಾಡಿ ರೈಲಿನಿಂದ ಹೊರಕ್ಕೆ ಎಸೆದಿದೆ.  ಶಹಜಹಾನ್‌ಪುರದ ತಿಲ್ಹಾರ್ ರೈಲು ನಿಲ್ದಾಣದ ಬಳಿ ಸಿಗುವ ಲೈನ್ ಕಂಬಕ್ಕೆ ತಲೆ ಡಿಕ್ಕಿ ಹೊಡೆದ ಪರಿಣಾಮ ಅಪರಿಚಿತ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಆತನ ಛಿದ್ರಗೊಂಡ ದೇಹ ಟ್ರ್ಯಾಕ್ ಮೇಲೆ ಪತ್ತೆಯಾಗಿದೆ.
ಘಟನೆಯ ವಿಡಿಯೋ ಹೊರಬಿದ್ದಿದ್ದು, ಅದರಲ್ಲಿ ಕೆಲವು ಪ್ರಯಾಣಿಕರು ಆ ವ್ಯಕ್ತಿಯನ್ನು ನಿರ್ದಯವಾಗಿ ಥಳಿಸುವತ್ತಿರುವುದನ್ನು ಕಾಣಬಹುದು. ಇತರ ಪ್ರಯಾಣಿಕರು ನಗುವುದು ಮತ್ತು ವ್ಯಕ್ತಿಯ ಮೇಲೆ ಹಲ್ಲೆ ಮಾಡುವುದನ್ನು ಕಾಣಬಹುದು.
ಪ್ರಕರಣದಲ್ಲಿ ಪ್ರಮುಖ ಆರೋಪಿ ನರೇಂದ್ರ ದುಬೆ (40) ಎಂಬಾತನನ್ನು ಬಂಧಿಸಲಾಗಿದೆ. ವೀಡಿಯೊದಲ್ಲಿ, ಆತ ಕ್ಷಮಿಸುವಂತೆ ಅಳುತ್ತಿದ್ದಾಗ, ಆತನನ್ನು ನಿಂದಿಸಿ ಜನರಲ್ ಕಂಪಾರ್ಟ್‌ಮೆಂಟ್‌ನಿಂದ ಹೊರಗೆ ತಳ್ಳುತ್ತಿರುವುದು ಕಂಡುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!