Sunday, December 3, 2023

Latest Posts

ಜೀನ್ಸ್, ಟೀ ಶರ್ಟ್ ಹಾಕುವಂತೆ ಅತ್ತೆ ಕಿರುಕುಳ, ದೂರು ದಾಖಲಿಸಿದ ಸೊಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಮ್ಮ ಅತ್ತೆ ಜೀನ್ಸ್, ಟೀ ಶರ್ಟ್ ಹಾಕುವಂತೆ ಪ್ರತಿದಿನ ಕಿರುಕುಳ ನೀಡುತ್ತಾರೆಂದು ಆರೋಪಿಸಿ ಸೊಸೆಯೊಬ್ಬರು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಅತ್ತೆ, ಪತಿ ಎಲ್ಲರೂ ನನ್ನನ್ನು ಮಾಡ್ರೆನ್‌ ಡ್ರೆಸ್‌ ಹಾಕುವಂತೆ ಕಾಟ ಕೊಡುತ್ತಿದ್ದು, ಈಗ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದಾರೆ ಎಂದು ಸೊಸೆ ದೂರು ದಾಖಲಿಸಿರುವ ವಿಚಿತ್ರ ಘಟನೆ ಎಲ್ಲರನ್ನು ನಿಬ್ಬೆರಗಾಗಿಸಿದೆ.

ಯುಪಿಯ ಹರಿಪರ್ವತ್‌ನ ಯುವಕನಿಗೆ ಕೆಲವು ತಿಂಗಳ ಹಿಂದೆ ಎತ್ಮಾದ್‌ಪುರದ ಯುವತಿಯೊಂದಿಗೆ ವಿವಾಹವಾಗಿತ್ತು.  ಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅತ್ತೆ-ಮಾವ ಸಖತ್‌ ಮಾಡ್ರನ್‌ ಜೀವ ಶೈಲಿಯನ್ನು ಅನುಸರಿಸುತ್ತಿದ್ದಾರೆ. ಆದರೆ ಸೊಸೆ ಮಾತ್ರ ಸಾಂಪ್ರದಾಯಿಕ ರೀತಿಯಲ್ಲಿ ಸೀರೆ ಉಟ್ಟು ಭಾರತೀಯ ನಾರಿಯಂತಿರಲು ಇಷ್ಟಪಡುತ್ತಾರೆ. ಇದಕ್ಕೆ ಅಡ್ಡಪಡಿಸಿದ ಅತ್ತೆ-ಮಾವ, ಪತಿ ಜೀನ್ಸ್, ಟೀ ಶರ್ಟ್ ಧರಿಸುವಂತೆ ಒತ್ತಾಯಿಸುತ್ತಿದ್ದರಂತೆ. ಅಷ್ಟೇ ಅಲ್ಲದೆ ಈಕೆಯನ್ನು ಅಣಕಿಸುವುದು, ವ್ಯಂಗ್ಯ ಮಾಡಿ ಮಾತನಾಡುವುದು ಕೊನೆಗೆ ಹೊಡದಾಟದವರೆಗೂ ಗಲಾಟೆ ಹೋಗಿದ್ದು, ಇದೀಗ ಸೊಸೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾಳೆ.

ನನಗೆ  ಜೀನ್ಸ್ ಪ್ಯಾಂಟ್ ಹಾಕುವುದು ಇಷ್ಟವಿಲ್ಲ, ಸೀರೆ ಉಡುವುದೇ ಇಷ್ಟ. ಇದಕ್ಕೆ ತನ್ನ ಪತಿ ಹಾಗೂ ಮನೆಯವರಿಂದ ಕಿರುಕುಳ ಹೆಚ್ಚಾಗಿದೆ ಎಂದು ಆಗ್ರಾ ಪೊಲೀಸರಿಗೆ ದೂರು ನೀಡಿದ್ದಾರೆ. ಆಕೆಯ ದೂರು ಕೇಳಿ ಪೊಲೀಸರೇ ಆಶ್ಚರ್ಯಪಟ್ಟಿದ್ದಾರೆ. ಈಗಿನ ಕಾಲದ ಹೆಣ್ಣು ಮಕ್ಕಳಲ್ಲಿ ಇಂತಹವರೂ ಇರುತ್ತಾರಾ ಎಂದು ಯೋಚಿಸಿ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇದರಿಂದಾಗಿ ಕುಟುಂಬ ಕೌನ್ಸೆಲಿಂಗ್‌ ಸೆಂಟರ್‌ಗೆ ಹೋದರೂ..ಸೀರೆ ಬಿಟ್ಟು ಜೀನ್ಸ್ ಧರಿಸುವುದಿಲ್ಲ ಎಂದು ಸೊಸೆ ಹಠ ಹಿಡಿದಿದ್ದಾಳೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!