Saturday, December 9, 2023

Latest Posts

ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಅಮೆರಿಕ ನೌಕಾಪಡೆ ವಿಮಾನ, ಪ್ರಯಾಣಿಕರು ಸುರಕ್ಷಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರನ್‌ವೇಯಲ್ಲಿ ನಿಯಂತ್ರಣ ಕಳೆದುಕೊಂಡ ಹಿನ್ನೆಲೆಯಲ್ಲಿ ಅಮೆರಿಕ ನೌಕಾಪಡೆಯ ಬೃಹತ್‌ ಕಣ್ಗಾವಲು ವಿಮಾನ ಸಮುದ್ರಕ್ಕೆ ಬಿದ್ದ ಘಟನೆ ಹವಾಯಿಯಲ್ಲಿ ನಡೆದಿದೆ. ವಿಮಾನದಲ್ಲಿದ್ದ ಒಂಬತ್ತು ಮಂದಿ ಸೇಫ್‌ ಆಗಿದ್ದಾರೆ ಎಂದು ವರದಿಯಾಗಿದೆ.

ಹವಾಯಿ ಮೆರೈನ್ ಕಾರ್ಪ್ಸ್ ಬೇಸ್‌ನಲ್ಲಿ ಸೋಮವಾರ ಮಧ್ಯಾಹ್ನದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಯ ಬಗ್ಗೆ ತಿಳಿದ ಕೂಡಲೇ ಸ್ಥಳಕ್ಕೆ ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ಧಾವಿಸಿ ರಕ್ಷಣೆಗೆ ಮುಂದಾಗಿದ್ದಾರೆ. ಅದಾಗಲೇ ಪ್ರಯಾಣಿಕರು ಈಜಿ ದಡ ಸೇರಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಜಲಾಂತರ್ಗಾಮಿ ನೌಕೆಗಳ ಮೇಲ್ವಿಚಾರಣೆ ಮತ್ತು ದಾಳಿಗೆ P-8A ಪೋಸಿಡಾನ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದಲ್ಲದೆ, ವಿಚಕ್ಷಣ ಮತ್ತು ಗುಪ್ತಚರ ಮಾಹಿತಿ ಸಂಗ್ರಹಣೆಗೆ ಹೆಚ್ಚು ಅನುಕೂಲವಾಗಲಿದೆ.
ಈ ವಿಮಾನವನ್ನು ಬೋಯಿಂಗ್ ಕಂಪನಿ ಅಭಿವೃದ್ಧಿಪಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!