ಮಾರ್ಚ್‌ ತಿಂಗಳಲ್ಲಿ 8.7 ಬಿಲಿಯನ್‌ ವಹಿವಾಟು ಪೂರ್ಣಗೊಳಿಸಿ ದಾಖಲೆ ಬರೆದ ಯುಪಿಐ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ವ್ಯವಸ್ಥೆಯು ಮಾರ್ಚ್‌ ತಿಂಗಳಲ್ಲಿ 8.7 ಬಿಲಿಯನ್‌ ವಹಿವಾಟುಗಳನ್ನು ಪೂರ್ಣಗೊಳಿಸುವ ಮೂಲಕ ಹೊಸ ದಾಖಲೆ ಬರೆದಿದೆ ಎಂದು ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (NPCI) ಹೇಳಿದೆ. ಯುಪಿಐ ಹಣ ವರ್ಗಾವಣೆ ಪ್ಲಾಟ್‌ಫಾರ್ಮ್‌ನಲ್ಲಿ ನೈಜ-ಸಮಯದ ಪಾವತಿಗಳು ವರ್ಷದಿಂದ ವರ್ಷಕ್ಕೆ (y-o-y) 60 ಪ್ರತಿಶತದಷ್ಟು ಏರಿಕೆ ಕಂಡು ಬಂದಿದೆ.

ಈ ವರ್ಷದ ಜನವರಿಯಲ್ಲಿ UPI ಮೊದಲ ಬಾರಿಗೆ 8 ಬಿಲಿಯನ್ ವಹಿವಾಟುಗಳನ್ನು ತಲುಪಿತ್ತು. ಫೆಬ್ರವರಿಯಲ್ಲಿ ಕಡಿಮೆ ದಿನಗಳಿಂದಾಗಿ ವಹಿವಾಟುಗಳ ಸಂಖ್ಯೆ 7.5 ಬಿಲಿಯನ್‌ ಗೆ ಕುಸಿದಿತ್ತು. ಆದರೆ ಮಾರ್ಚ್‌ ತಿಂಗಳ ವಹಿವಾಟುಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು ಸಾರ್ವಕಾಲಿಕ ಗರಿಷ್ಟಮಟ್ಟ ದಾಖಲಾಗಿದೆ.

ಮಾರ್ಚ್‌ ಅಂತ್ಯದ ವೇಳೆಗೆ ಇಡೀ ಆರ್ಥಿಕ ವರ್ಷದಲ್ಲಿ ಒಟ್ಟಾರೆಯಾಗಿ 14.05 ಟ್ರಿಲಿಯನ್‌ ರೂ.ಗಳಷ್ಟು ಮೌಲ್ಯದ ವಹಿವಾಟುಗಳು ನಡೆದಿದ್ದು ವಹಿವಾಟಿನ ಮೌಲ್ಯದಲ್ಲಿ 46 ಶೇಕಡಾದಷ್ಟು ವರ್ಷದಿಂದ ವರ್ಷಕ್ಕೆ ಏರಿಕೆ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!