ಮತ್ತೆ ಸುದ್ದಿಯಲ್ಲಿ ಉರ್ಫಿ ಜಾವೇದ್: ಆದ್ರೆ ಈ ಬಾರಿ ಅವರ ಹೆಸರೇ ಇದಕ್ಕೆ ಕಾರಣವಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಿಂದಿ ಕಿರುತೆರೆ ನಟಿ ಉರ್ಫಿ ಜಾವೇದ್​ ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಹೆಚ್ಚಾಗಿ ತಮ್ಮ ವಿಚಿತ್ರ ಉಡುಗೆಗಳಿಂದಲೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಅನೇಕ ಬಾರಿ ತಮ್ಮ ಉಡುಗೆಗಳಿಂದ ನೆಟ್ಟಿಗರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಅವರು ಧರಿಸುವ ಉಡುಗೆಯಿಂದಲ್ಲ, ಬದಲಾಗಿ ಅರಬ್​ ರಾಷ್ಟ್ರದ ಹೊಸ ನಿಯಮದಿಂದ.

ಅರಬ್​ ರಾಷ್ಟ್ರ ಪಾಸ್‌ಪೋರ್ಟ್ ವಿಚಾರವಾಗಿ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದೆ. ನವೆಂಬರ್ 21 ರಂದು, ಏರ್ ಇಂಡಿಯಾ ಮತ್ತು AI ಎಕ್ಸ್‌ಪ್ರೆಸ್ ಒಂದೇ ಹೆಸರಿನ ಯಾವುದೇ ಪಾಸ್‌ಪೋರ್ಟ್​​ ಹೊಂದಿರುವವರನ್ನು ಯುಎಇ ಸ್ವೀಕರಿಸುವುದಿಲ್ಲ ಎಂದು ತಿಳಿಸಿದೆ. ಇಲ್ಲಿ ಸರ್ ನೇಮ್ ಅಥವಾ ಒಂದೇ ಪದದ ಹೆಸರನ್ನು ಹೊಂದಿರುವ ಯಾವುದೇ ಪಾಸ್‌ಪೋರ್ಟ್ ಹೊಂದಿರುವವರನ್ನು ಯುಎಇ ಸ್ವೀಕರಿಸುವುದಿಲ್ಲ .

ಇದೀಗ ಇದು ಉರ್ಫಿ ಜಾವೇದ್ ಗೆ ಸಂಕಷ್ಟ ತಂದಿಟ್ಟಿದೆ. ಈ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಅವರು, ‘ನನ್ನ ಮೂಲ ಹೆಸರು ಉರ್ಫಿ. ಯಾವುದೇ ಸರ್ ನೇಮ್ ಇಲ್ಲ. ಹಾಗಾದ್ರೆ ನಾನು ಅರಬ್​ ರಾಷ್ಟ್ರಗಳಿಗೆ ಹೋಗಲು ಆಗುವುದಿಲ್ವಾ’? ಎಂಬ ಆತಂಕವನ್ನು ಹೊರಹಾಕಿದ್ದಾರೆ. ಅಲ್ಲಿಗೆ ಉರ್ಫಿ ಜಾವೇದ್​​​ ಅವರು ಈ ಹೊಸ ನಿಮಯದಿಂದ ತೊಂದರೆ ಎದುರಿಸಲಿದ್ದಾರೆ ಎನ್ನಲಾಗುತ್ತಿದೆ.
ಒಂದೇ ಹೆಸರಿನ ಪ್ರಯಾಣಿಕರಿಗೆ ವೀಸಾ ನೀಡಲಾಗುವುದಿಲ್ಲ. ವೀಸಾವನ್ನು ನೀಡಿದ್ದರೆ ಅವರು ವಲಸೆಯ ಮೂಲಕ ಅನಧಿಕೃತ ಪ್ರಯಾಣಿಕರಾಗುತ್ತಾರೆ. ವಿಸಿಟಿಂಗ್ ವೀಸಾ, ಆಗಮನದ ವೀಸಾ ಮತ್ತು ತಾತ್ಕಾಲಿಕ ವೀಸಾಗಳನ್ನು ಹೊಂದಿರುವ ಜನರಿಗೆ ಮಾತ್ರ ನಿಯಮ ಅನ್ವಯಿಸುತ್ತದೆ ಎಂದು ಹೊಸ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!