ವೋಟರ್ ಐಡಿ ಅಕ್ರಮ: 3 ಕ್ಷೇತ್ರ ಉಸ್ತುವಾರಿಗಳ ಅಮಾನತುಗೊಳಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಮಹತ್ವದ ನಿರ್ದೇಶನಗಳನ್ನು ನೀಡಿದೆ. ರಾಜ್ಯ ಚುನಾವಣಾ ಆಯೋಗ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೆಲವು ಸೂಚನೆಗಳನ್ನು ರವಾನಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲು ನಿರ್ದೇಶಿಸಿದೆ.

ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹಾದೇವಪುರದಲ್ಲಿ ಮತದಾರರ ಪಟ್ಟಿ ಬಗ್ಗೆ ಪರಿಶೀಲನೆ ನಡೆಸಬೇಕು, ಮತದಾರರ ಸೇರ್ಪಡೆ ಮತ್ತು ಕೈ ಬಿಟ್ಟಿರುವ ಬಗ್ಗೆ 100% ಪರಿಶೀಲನೆಗೆ ಒಳಪಡಿಸಬೇಕು, ಈ ಕ್ಷೇತ್ರಗಳಲ್ಲಿ ಡಿಸೆಂಬರ್24 ರವರೆಗೂ ಮತದಾರರ ಪರಿಷ್ಕರಣೆಗೆ ಅವಧಿ ವಿಸ್ತರಿಸಬೇಕು ಎಂದು ಆಯೋಗ ಹೇಳಿದೆ.

ಇನ್ನು ಅಕ್ರಮದಲ್ಲಿ ಭಾಗಿಯಾದ ಆರೋಪದಲ್ಲಿ ಬಿಬಿಎಂಪಿ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಎಸ್.ರಂಗಪ್ಪ, ಶಿವಾಜಿನಗರ ಚಿಕ್ಕಪೇಟೆ ಕ್ಷೇತ್ರಗಳ ಉಸ್ತುವಾರಿ ಕೆ. ಶ್ರೀನಿವಾಸ್, ಮಹದೇವಪುರ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೆಂಗಳೂರು ನಗರ ಉಪ ಆಯುಕ್ತರ ಅಮಾನತಿಗೆ ನಿರ್ದೇಶನ ನೀಡಿದ್ದು ಇಲಾಖೆ ತನಿಖೆಗೆ ನಿರ್ದೇಶಿಸಿದೆ.

ಇನ್ನು ಪಟ್ಟಿ ಪರಿಷ್ಕರಣೆಗೆ ಬಿಬಿಎಂಪಿ ಹೊರಗಿನ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಶಿವಾಜಿನಗರ ಕ್ಷೇತ್ರಕ್ಕೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಚಿಕ್ಕಪೇಟೆ ಕ್ಷೇತ್ರಕ್ಕೆ ಡಾ. ಆರ್.ವಿಶಾಲ್, ಮಹದೇವಪುರ ಕ್ಷೇತ್ರಕ್ಕೆ ಅಜಯ್ ನಾಗಭೂಷಣಗೆ ಜವಾಬ್ದಾರಿ ‌ನೀಡಿದೆ. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಮೇಲ್ವಿಚಾರಣೆಗಾಗಿ, ಬಿಬಿಎಂಪಿ ಕೇಂದ್ರ ಭಾಗಕ್ಕೆ ಉಜ್ವಲ್ ಘೋಷ್, ಬಿಬಿಎಂಪಿ ಉತ್ತರಕ್ಕೆ ರಾಮಚಂದ್ರನ್ ಆರ್, ಬಿಬಿಎಂಪಿ ದಕ್ಷಿಣಕ್ಕೆ ಪಿ. ರಾಜೇಂದ್ರ ಚೋಳನ್, ಬೆಂಗಳೂರು ನಗರ ಭಾಗದ ಉಸ್ತುವಾರಿಯಾಗಿ ಡಾ.ಎನ್.ಮಂಜುಳಾಗೆ ಜವಾಬ್ದಾರಿ ನೀಡಿದೆ.ಈ ಎಲ್ಲ ಚಟುವಟಿಕೆಗಳ ಸಮನ್ವಯ ಮತ್ತು ಮೇಲುಸ್ತುವಾರಿಗಾಗಿ ಬೆಂಗಳೂರು ಪ್ರಾದೇಶಿಕ ಆಯುಕ್ತ ಆಮ್ಲನ್ ಬಿಸ್ವಾಸ್ ಅವರನ್ನು ಕೇಂದ್ರ ಚುನಾವಣಾ ಆಯೋಗ ನಿಯೋಜಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!