CINE NEWS | ಕಾಂತಾರ-2 ನಲ್ಲಿ ಊರ್ವಶಿ ಇದ್ದಾರಾ? ರಿಷಬ್ ಕೊಟ್ರು ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ-2 ಬಗ್ಗೆ ಕಥೆ ಮಾಡುತ್ತಿದ್ದೇನೆ ಎಂದು ರಿಷಬ್ ಹೇಳಿದ್ದಾರೆ. ಈ ಮಧ್ಯೆ ಬಾಲಿವುಡ್ ನಟಿ ಊರ್ವಶಿ ರೌಟೆಲಾ ರಿಷಬ್ ಜತೆಗಿನ ಫೋಟೊ ಹಂಚಿಕೊಂಡಿದ್ದು, ಕಾಂತಾರ-2 ಲೋಡಿಂಗ್ ಎಂದು ಬರೆದುಕೊಂಡಿದ್ದಾರೆ.

ಇದನ್ನು ನೋಡಿದ ಅಭಿಮಾನಿಗಳು ಸಪ್ತಮಿ ಗೌಡ ಔಟ್ ಹಾಗೂ ಊರ್ವಶಿ ಇನ್ ಎಂದು ತಿಳಿದುಕೊಂಡಿದ್ದರು. ಆದರೆ ಇದೀಗ ರಿಷಬ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕಾಂತಾರ-2ನಲ್ಲಿ ಊರ್ವಶಿ ನಟಿಸ್ತಿದ್ದಾರಾ ಎಂದು ಕೇಳಿದ್ದು, ರಿಷಬ್ ಇನ್ನೂ ಕಥೆಯೇ ಆಗಿಲ್ಲ, ಕಥೆಯ ಹುಡುಕಾಟದಲ್ಲಿ ಇದ್ದೇನೆ ಎಂದು ಹೇಳಿದ್ದಾರೆ. ಕಾಂತಾರ ಯಶಸ್ಸಿನ ನಂತರ ರಿಷಬ್ ಜೊತೆಗಿನ ಫೋಟೊ ಹಂಚಿಕೊಂಡು ಕಾಂತಾರ-2 ಲೋಡಿಂಗ್ ಎಂದು ಊರ್ವಶಿ ಹೇಳಿದ್ದು ಕೇವಲ ಪ್ರಚಾರಕ್ಕಾಗಿ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!