ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪತಿ ಡಾ ದೇವಿಸಿಂಗ್ ಆರ್. ಶೇಖಾವತ್ ನಿಧನ !

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪತಿ ಡಾ ದೇವಿಸಿಂಗ್ ಆರ್. ಶೇಖಾವತ್ ಶುಕ್ರವಾರ ಬೆಳಿಗ್ಗೆ ಪುಣೆಯಲ್ಲಿ ನಿಧನರಾಗಿದ್ದಾರೆ.

ಶೈಕ್ಷಣಿಕ ತಜ್ಞರಾಗಿದ್ದ 88 ವರ್ಷ ವಯಸ್ಸಿನ ಶೇಖಾವತ್ ಅವರು ಕೆಇಎಂ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.

ಡಾ ದೇವಿಸಿಂಗ್ ಆರ್. ಶೇಖಾವತ್ ಪತ್ನಿ ಮತ್ತು ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಪುತ್ರ ರಾಜೇಂದ್ರ ಸಿಂಗ್ ಶೇಖಾವತ್ ಮತ್ತು ಪುತ್ರಿ ಜ್ಯೋತಿ ರಾಥೋಡ್ ಅವರನ್ನು ಅಗಲಿದ್ದಾರೆ.

ಫೆಬ್ರುವರಿ 12 ರಂದು ಪುಣೆಯಲ್ಲಿ ತಮ್ಮ ಮನೆಯ ಮುಂದೆ ಶೇಖಾವತ್ ಕುಸಿದು ಬಿದ್ದಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಅವರು ಅಧಿಕ ರಕ್ತದೊತ್ತಡ, ಮೂತ್ರಪಿಂಡ ವೈಫಲ್ಯ ಸೇರಿದಂತೆ ಇತರೆ ಸಮಸ್ಯೆಗಳನ್ನು ಎದುರಿಸಿದರು. ಇದುವೇ ಅವರ ಮರಣಕ್ಕೆ ಕಾರಣವಾಯಿತು.

ಲಭ್ಯವಿರುವ ಮಾಹಿತಿಯ ಪ್ರಕಾರ ಶೇಖಾವತ್ ಅವರ ಅಂತ್ಯಕ್ರಿಯೆಯನ್ನು ಇಂದು ಸಂಜೆ 7 ಗಂಟೆಗೆ ವೈಕುಂಠಧಾಮ್ ಸ್ಮಶಾನದಲ್ಲಿ ನೆರವೇರಿಸಲಾಗುವುದು ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!