ತಾನು ಗರ್ಭವತಿ ಎಂದು ಗೊತ್ತಾದ ಎರಡೇ ದಿನಕ್ಕೆ ಗಂಡು ಮಗುವಿಗೆ ಜನ್ಮವಿತ್ತ ಮಹಿಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಿಳೆಯೊಬ್ಬಳು ತಾನು ಗರ್ಭಿಣಿ ಎಂದು ತಿಳಿದ ಎರಡು ದಿನಗಳಿಗೇ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿರುವ ಆಶ್ಚರ್ಯಕಾರಿ ಘಟನೆ ನಡೆದಿದೆ. ಇತ್ತೀಚಿಗೆ ಬಿಪಿ ಜಾಸ್ತಿಯಾಗಿದೆ, ತೂಕ ಕೂಡ ಜಾಸ್ತಿಯಾಗುತ್ತಿದ್ದೇನೆ ಎಂದು ಗಮನಿಸಿದ ಮಹಿಳೆ ವೈದ್ಯಕೀಯ ಪರೀಕ್ಷಗೆ ಒಳಗಾಗಿದ್ದಾಳೆ. ಆಕೆಯ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿರುವುದಾಗಿ ಹೇಳಿದ ಕೂಡಲೇ ದಂಪತಿಗೆ ಆಘಾತ ಮತ್ತು ಸಂತೋಷ ಎರಡೂ ಆಗಿದೆ.

ಪೇಟನ್ ಸ್ಟೋವರ್ ಎಂಬ 23 ವರ್ಷದ ಮಹಿಳಾ ಶಿಕ್ಷಕಿಯೊಬ್ಬರು ತನ್ನ ಪತಿಯೊಂದಿಗೆ ಒಮಾಹಾದಲ್ಲಿ ವಾಸಿಸುತ್ತಿದ್ದಾರೆ. ಸ್ಟೋವರ್‌ಗೆ  ಇತ್ತೀಚೆಗೆ ತಲೆ ಸುತ್ತು, ವಾಂತಿ, ತೂಕವೂ ಹೆಚ್ಚಿದಂತಾಗಿದೆ. ಕೆಲಸದ ಒತ್ತಡದಿಂದ ಹೀಗಾಗಿರಬಹುದು ಎಂದುಕೊಂಡು ಸಮಯ ತಳ್ಳಿದ್ದಾರೆ. ಕಾಲುಗಳಲ್ಲಿ ಊತ ಬಂದ ಕೂಡಲೇ ಭಯಗೊಂಡ ಸ್ಟೋವರ್ ಆಸ್ಪತ್ರೆಗೆ ತೆರಳಿ ವೈದ್ಯರಿಗೆ ವಿಷಯ ತಿಳಿಸಿದ್ದಾರೆ.

ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ಗರ್ಭಿಣಿ ಎಂದು ಹೇಳಿದ್ದಾರೆ. ಈ ಸುದ್ದಿ ಕೇಳುತ್ತಿದ್ದಂತೆ ಸ್ಟೋವರ್ ಆಘಾತಕ್ಕೊಳಗಾಗಿ ಈ ವಿಚಾರವನ್ನು ನಂಬದೇ ಮತ್ತೊಮ್ಮೆ ಪರೀಕ್ಷಿಸಿದ್ದಾರೆ. ಅಲ್ಲೂ ಹಾಗೆಯೇ ರಿಪೋರ್ಟ್‌ ಬಂದಿದೆ. ಇದಕ್ಕೂ ಕಿವಿಗೊಡದೆ ಆಕೆ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸಿದ್ದಾರೆ. ಆಗ ಹೊಟ್ಟೆಯಲ್ಲಿ ಮಗು ಇರುವುದು ಸ್ಪಷ್ಟವಾದದ್ದನ್ನು ಕಂಡು ಆಘಾತಗೊಂಡಿದ್ದಾರೆ. ಅಷ್ಟರಲ್ಲಾಗಲೇ ಆಕೆ ಆರು ತಿಂಗಳ ಗರ್ಭವತಿ ಎಂದು ತಿಳಿದಿದೆ.

ಗರ್ಭಾವಸ್ಥೆಯಲ್ಲಿ ಸಂಭವಿಸುವ ಅತ್ಯಂತ ಅಪರೂಪದ ಕಾಯಿಲೆ ʻಪ್ರಿಕ್ಲಾಂಪ್ಸಿಯಾʼ. ಇದು ಅಧಿಕ ರಕ್ತದೊತ್ತಡವನ್ನು ಉಂಟುಮಾಡುತ್ತದೆ ಮತ್ತು ಮೂತ್ರಪಿಂಡ ಮತ್ತು ಯಕೃತ್ತಿನ ಕಾರ್ಯವನ್ನು ನಿಧಾನಗೊಳಿಸುತ್ತದೆ ಎಂದು ವೈದ್ಯರು ತಿಳಿಸಿದ್ದರಿಂದ ಸ್ಟೋವರ್ ದಂಪತಿ ಚಿಂತಿತರಾದರು. ಈ ಕಾಯಿಲೆಯ ಕಾರಣದಿಂದ ಆಕೆ ಗರ್ಭವತಿಯಾದ ವಿಚಾರವೂ ಗೊತ್ತಾಗಿಲ್ಲ. ವೈದ್ಯರ ಸೂಚನೆ ಮೇರೆಗೆ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿ 48 ಗಂಟೆಯೊಳಗೆ ಶಸ್ತ್ರ ಚಿಕಿತ್ಸೆ ನಡೆಸಿ ತಾಯಿ ಮತ್ತು ಮಗು ಇಬ್ಬರನ್ನೂ ರಕ್ಷಿಸಿದ್ದಾರೆ. ಆಕೆಗೆ 800 ಗ್ರಾಂ ತೂಕದ ಗಂಡು ಮಗು ಜನಿಸಿದೆ. ಮಗು ಜನನದಿಂದ ದಂಪತಿ ಹರ್ಷ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!