ಉಕ್ರೇನ್‌ಗೆ 150 ಮಿಲಿಯನ್ ಡಾಲರ್ ಮಿಲಿಟರಿ ನೆರವು ಘೋಷಿಸಿದ ಅಮೆರಿಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ಗೆ ಅನ್ನು ಬಲಪಡಿಸಲು ಅಮೆರಿಕ 150 ಮಿಲಿಯನ್ ಡಾಲರ್ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳ ಮಿಲಿಟರಿ ನೆರವು ಘೋಷಿಸಿತು.

ಯುಎಸ್ ಸರ್ಕಾರವು ಈ ನೆರವಿನಲ್ಲಿ ವಾಯು ರಕ್ಷಣಾ, ಫಿರಂಗಿ, ಟ್ಯಾಂಕ್ ವಿರೋಧಿ ಮತ್ತು ಇತರ ಸಾಮರ್ಥ್ಯಗಳನ್ನು ಒಳಗೊಂಡಿರುವ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳನ್ನು ಪ್ರಕಟಿಸಿದೆ.

ಯುಎಸ್ ಸೆಕ್ರೆಟರಿ ಆಫ್ ಸ್ಟೇಟ್, ಆಂಟೋನಿ ಬ್ಲಿಂಕೆನ್ ಈ ಕುರಿತು ಮಾಹಿತಿ ನೀಡಿದ್ದು, “ಈ ಹೊಸ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳ ಪ್ಯಾಕೇಜ್ ವಾಯು ರಕ್ಷಣಾ, ಫಿರಂಗಿ, ಟ್ಯಾಂಕ್ ವಿರೋಧಿ ಮತ್ತು ಇತರ ಸಾಮರ್ಥ್ಯಗಳನ್ನು ಒಳಗೊಂಡಿದೆ, ಇದು ರಷ್ಯಾದ ಆಕ್ರಮಣಗಳ ವಿರುದ್ಧ ತನ್ನ ಪ್ರದೇಶವನ್ನು ರಕ್ಷಿಸುವ ಉಕ್ರೇನ್ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ” ಎಂದರು.

ರಷ್ಯಾದ ಪಡೆ ವಶಪಡಿಸಿಕೊಂಡ ಉಕ್ರೇನ್‌ ಭೂಭಾಗವನ್ನು ಮರಳಿ ಪಡೆಯಲು ಧೈರ್ಯದಿಂದ ಹೋರಾಡುತ್ತಿವೆ. ಈ ಹೆಚ್ಚುವರಿ ಬೆಂಬಲವು ಅವರಿಗೆ ಹೋರಾಟ ಮುಂದುವರಿಸಲು ಸಹಾಯ ಮಾಡುತ್ತದೆ ಎಂದರು.

ಯುದ್ಧ ಪೀಡಿತ ಉಕ್ರೇನ್‌ಗೆ ತನ್ನ ಬೆಂಬಲವನ್ನು ಪುನರುಚ್ಚರಿಸುತ್ತಿರುವ ಯುಎಸ್, ರಷ್ಯಾ ತನ್ನ ಪಡೆಗಳನ್ನು ದೇಶದಿಂದ ಹಿಂತೆಗೆದುಕೊಳ್ಳುವವರೆಗೆ ಯುಎಸ್ ಮತ್ತು ಅದರ ಮಿತ್ರ ಪಾಲುದಾರರು ಉಕ್ರೇನ್‌ಗೆ ಬೆಂಬಲವನ್ನು ಮುಂದುವರೆಸುವುದಾಗಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!