ಅಮೆರಿಕ-ಚೀನಾ ಶೀತಲ ಸಮರ: ಸರ್ಕಾರಿ ಡಿವೈಸ್‌ಗಳಿಂದ ಟಿಕ್‌ಟಾಕ್ ಡಿಲೀಟ್ ಮಾಡಲು 30 ದಿನಗಳ ಗಡುವು ನೀಡಿದ ವೈಟ್‌ಹೌಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಅಮೆರಿಕದ (USA) ಚೀನಾ (China) ನಡುವೆ ಶೀತಲ ಸಮರ ಶುರುವಾಗಿದ್ದು, ಎಲ್ಲಾ ಸರ್ಕಾರಿ ಡಿವೈಸ್‌ಗಳಿಂದ ಟಿಕ್‌ಟಾಕ್ (TikTok) ಅನ್ನು ಡಿಲೀಟ್ ಮಾಡುವಂತೆ ಅಮೆರಿಕ ವೈಟ್‌ಹೌಸ್ 30 ದಿನಗಳ ಗಡುವು ನೀಡಿದೆ.

ಅಮೆರಿಕದ ರಕ್ಷಣಾ ಇಲಾಖೆಗಳು ಈಗಾಗಲೇ ಟಿಕ್‌ಟಾಕ್ ನಿರ್ಬಂಧಿಸಿವೆ. ಇದೀಗ ರಾಷ್ಟ್ರವ್ಯಾಪಿ ನಿಷೇಧಕ್ಕೆ ಮುಂದಾಗಿದ್ದು, ಸರ್ಕಾರಿ ದತ್ತಾಂಶಗಳನ್ನು ರಕ್ಷಿಸುವಲ್ಲಿ ಮತ್ವದ ಹೆಜ್ಜೆ ಇಟ್ಟಿದೆ.

ಜೋ ಬೈಡನ್ (Joe Biden) ಹಾಗೂ ಕಮಲಾ ಹ್ಯಾರಿಸ್ (Kamala Harris) ನೇತೃತ್ವದ ಆಡಳಿತವು ಡಿಜಿಟಲ್ ಮೂಲ ಸೌಕರ್ಯಗಳ ರಕ್ಷಣೆಗೆ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು,ಅಮೆರಿಕದ ಜನರ ಸುರಕ್ಷತೆ ಹಾಗೂ ಗೌಪ್ಯತೆ ರಕ್ಷಿಸಲು ವಿದೇಶಿ ಆಪ್‌ಗಳ ಪ್ರವೇಶ ತಡೆಯಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಫೆಡರಲ್ ಏಜೆನ್ಸಿಯ (Federal Agencies) ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ ಕ್ರಿಸ್ ಡೆರುಶಾ ಹೇಳಿದ್ದಾರೆ.

ಈಗಾಗಲೇ ಈ ಕುರಿತು ಮಸೂದೆ ಮಂಡಿಸಿದ್ದು, ಈ ಮಸೂದೆ ಅಂಗೀಕಾರವಾದರೆ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಹಾಕುವ ಯಾವುದೇ ಸಾಫ್ಟ್‌ವೇರ್‌ ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ಆಡಳಿತಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂದು ವಿದೇಶಾಂಗ ಸಮಿತಿ ಅಧ್ಯಕ್ಷ ಮೆಕ್‌ಕಾಲ್ ಹೇಳಿದ್ದಾರೆ.

10 ಕೋಟಿ ಜನರು ಬೈಟ್‌ಡ್ಯಾನ್ಸ್ ಲಿ. (Byte Dance LT.) ಒಡೆತನದ ಟಿಕ್‌ಟಾಕ್ ಬಳಕೆದಾರರಿದ್ದಾರೆ. ಜೊತೆಗೆ ಹದಿಹರೆಯದ ವಯಸ್ಸಿನ 3ನೇ ಎರಡು ಭಾಗದಷ್ಟು ಮಂದಿ ಟಿಕ್‌ಟಾಕ್ ಬಳಸುತ್ತಿದ್ದು, ಇದರಿಂದ ಡೇಟಾ ಬಳಕೆಯ ಮೇಲೆ ನಿಯಂತ್ರಣ ಪಡೆಯಬಹುದಾಗಿದೆ. ಟಿಕ್‌ಟಾಕ್ ಡೌನ್‌ಲೋಡ್ ಮಾಡಿದರೆ, ಚೀನಾವು ವೈಯಕ್ತಿಕ ಮಾಹಿತಿಗಳನ್ನು ಕದಿಯಲು ಹಿಂಬಾಗಿಲು ತೆರೆದಂತಾಗುತ್ತದೆ. ಆದ್ದರಿಂದ ರಾಷ್ಟ್ರೀಯ ಭದ್ರತಾ ಪರಿಶೀಲನೆಯ ಭಾಗವಾಗಿ ಡೇಟಾ ಗೌಪ್ಯತಾ ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವೈಟ್‌ಹೌಸ್ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!