ಇಂದು ಭಾರತಕ್ಕೆ ಬರಲಿದ್ದಾರೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ ಆಸ್ಟಿನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ ಆಸ್ಟಿನ್ ನಾಲ್ಕು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಭಾನುವಾರ ಭಾರತಕ್ಕೆ ಆಗಮಿಸಲಿದ್ದಾರೆ.
ರಕ್ಷಣಾ-ಕೈಗಾರಿಕಾ ಸಹಭಾಗಿತ್ವವನ್ನು ವಿಸ್ತರಿಸುವ ಉದ್ದೇಶದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲು ನವದೆಹಲಿ ತಲುಪಲಿದ್ದಾರೆ.

ಸಿಂಗಾಪುರದ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ (ಐಐಎಸ್‌ಎಸ್) 20 ನೇ ಶಾಂಗ್ರಿ-ಲಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇಲ್ಲಿ US ಪಾಲುದಾರಿಕೆಯನ್ನು ಮುನ್ನಡೆಸಲು ಪ್ರಮುಖ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.

ಆಸ್ಟಿನ್ ನವದೆಹಲಿ ಭೇಟಿಯು ಭಾರತ-ಯುಎಸ್ ಹೊಸ ರಕ್ಷಣಾ ಆವಿಷ್ಕಾರಗಳು ಮತ್ತು ಕೈಗಾರಿಕಾ ಸಹಕಾರ ಉಪಕ್ರಮಗಳನ್ನು ಮುಂದುವರೆಸುವುದರ ಮೇಲೆ ಪ್ರಮುಖವಾಗಿ ಕೇಂದ್ರೀಕರಿಸುತ್ತದೆ ಮತ್ತು ಯುಎಸ್ ಮತ್ತು ಭಾರತೀಯ ಮಿಲಿಟರಿಗಳ ನಡುವಿನ ಕಾರ್ಯಾಚರಣೆಯ ಸಹಕಾರವನ್ನು ವಿಸ್ತರಿಸುವ ಪ್ರಯತ್ನಗಳು ನಡೆಯಲಿವೆ.

ತಮ್ಮ ನಾಲ್ಕು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಮಾತನಾಡುತ್ತಾ, “ಮುಂದಿನ ವಾರ ಜಪಾನ್, ಸಿಂಗಾಪುರ, ಭಾರತ ಮತ್ತು ಫ್ರಾನ್ಸ್‌ಗೆ ಪ್ರಯಾಣಿಸಲು ನಾನು ಎದುರು ನೋಡುತ್ತಿದ್ದೇನೆ. ಕಳೆದ ವರ್ಷದಲ್ಲಿ ನಾವು ನಮ್ಮ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರೊಂದಿಗೆ ಉತ್ತಮ ಪ್ರಗತಿಯನ್ನು ಸಾಧಿಸಿದ್ದೇವೆ” ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!