Sunday, December 3, 2023

Latest Posts

ಇಂದು ಜಗತ್ತಿಗೆ ‘ಸ್ಟ್ರಾಬೆರಿ ಮೂನ್’ ದರ್ಶನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದು ಪಂಚಾಂಗದ ಪ್ರಕಾರ ಜ್ಯೇಷ್ಠ ಮಾಸದ ಹುಣ್ಣಿಮೆಯ ದಿನಾಂಕವಾಗಿದೆ. ಇಂದು ಆಕಾಶದಲ್ಲಿ ಅದ್ಭುತವಾದ ಖಗೋಳ ಘಟನೆಯೂ ಸಂಭವಿಸಲಿದೆ. ಅದೇನೆಂದರೆ ಇಂದು ಚಂದ್ರನು ಭೂಮಿಗೆ ಸಮೀಪಿಸುತ್ತಾನೆ. ಇಂದು ನೀವು ಚಂದ್ರನನ್ನು ಕೆಂಪು, ದೊಡ್ಡ ಮತ್ತು ಹೊಳೆಯುವ ರೂಪದಲ್ಲಿ ನೋಡಬಹುದು.

ಚಂದ್ರನು ಭೂಮಿಯಿಂದ 3,60,000 ಕಿ.ಮೀ ಅಥವಾ ಅದಕ್ಕಿಂತ ಕಡಿಮೆ ದೂರದಲ್ಲಿರುತ್ತಾನೆ. ಚಂದ್ರನು ಭೂಮಿಗೆ ಹತ್ತಿರವಾಗಿರುವುದರಿಂದ ಇತರ ದಿನಗಳಿಗಿಂತ ಚಂದ್ರನು ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತಾನೆ.

ಸ್ಟ್ರಾಬೆರಿ ಮೂನ್ ಎಂದು ಏಕೆ ಕರೆಯಲಾಗುತ್ತದೆ?

ಹಿಂದೂ ಧರ್ಮದಲ್ಲಿ, ಪ್ರತಿ ತಿಂಗಳ ಹುಣ್ಣಿಮೆಯ ದಿನಾಂಕವನ್ನ ಪಂಚಾಂಗದ ಪ್ರಕಾರ ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಅದೇ ರೀತಿ ಉತ್ತರ ಅಮೆರಿಕಾ ಮತ್ತು ವಿವಿಧ ದೇಶಗಳಲ್ಲಿ ಹುಣ್ಣಿಮೆಯ ದಿನಾಂಕವನ್ನ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.

ಉತ್ತರ ಅಮೆರಿಕಾದಲ್ಲಿ ಜೂನ್ ಹುಣ್ಣಿಮೆಯ ದಿನದಂದು ಸ್ಟ್ರಾಬೆರಿ ಬೆಳೆ ಹಣ್ಣಾಗಲು ಪ್ರಾರಂಭವಾಗುತ್ತದೆ. ಆದ್ದರಿಂದ ಇದನ್ನ ಸ್ಟ್ರಾಬೆರಿ ಮೂನ್ (Strawberry Moon 2023) ಎಂದು ಕರೆಯಲಾಗುತ್ತದೆ.

ಸ್ಟ್ರಾಬೆರಿ ಮೂನ್ ವರ್ಷದ ಎಲ್ಲಾ ಹುಣ್ಣಿಮೆಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಯುರೋಪಿನಲ್ಲಿ ಇದನ್ನು ರೋಸ್ ಮೂನ್ ಎಂದು ಕರೆಯಲಾಗುತ್ತದೆ ಮತ್ತು ಅದೇ ರೀತಿ ಸ್ಟ್ರಾಬೆರಿ ಮೂನ್‌ ಅನ್ನು ಹನಿ ಮೂನ್ ಮತ್ತು ಹಾಟ್ ಮೂನ್ ಅಂತಲೂ ಕರೆಯಲಾಗುತ್ತದೆ.

ನೀವು ಇಂದು ಸ್ಟ್ರಾಬೆರಿ ಚಂದ್ರನನ್ನು ಯಾವಾಗ ನೋಡಬಹುದು ?

ಈ ವರ್ಷ ಜೂನ್ 3, 2023ರ ರಾತ್ರಿ 11.42ರಿಂದಲೂ ಸ್ಟ್ರಾಬೆರಿ ಚಂದ್ರನ ಅದ್ಭುತ ದೃಶ್ಯವನ್ನ ನೀವು ನೋಡಲು ಸಾಧ್ಯವಾಗುತ್ತದೆ. ಚಂದ್ರನು ಭೂಮಿಗೆ ಸಮೀಪದಲ್ಲಿದ್ದಾಗ, ಚಂದ್ರನ ಗಾತ್ರವು ಇತರ ದಿನಗಳಿಗಿಂತ 14 ಪ್ರತಿಶತದಷ್ಟು ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿರುತ್ತದೆ. ಖಗೋಳ ಘಟನೆಯ ಪ್ರಕಾರ ಇಂದು ನೀವು ಮಂಗಳ ಮತ್ತು ಶುಕ್ರ ಗ್ರಹಗಳನ್ನು ಸಹ ನೋಡಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!