Tuesday, March 28, 2023

Latest Posts

ಕೆನಡಾದ ವಾಯುನೆಲೆಯಲ್ಲಿ ಅಪರಿಚಿತ ವಸ್ತು ವನ್ನು ಹೊಡೆದುರುಳಿಸಿದ ಅಮೆರಿಕ ಯುದ್ಧವಿಮಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಅಮೆರಿಕದ ಎಫ್ -22 ಫೈಟರ್ ಜೆಟ್ “ಅಪರಿಚಿತ ವಸ್ತು” ವನ್ನು ಹೊಡೆದುರುಳಿಸಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಭಾನುವಾರ ಹೇಳಿದ್ದಾರೆ.

ಅಪರಿಚಿತ ವಸ್ತುವೊಂದು ಯುಕಾನ್ ಮೇಲೆ ಹಾರುತ್ತಿದೆ ಎಂದು ಟ್ರೂಡೊ ದೃಢಪಡಿಸಿದರು ಮತ್ತು ಅವರ ಆದೇಶದ ಮೇರೆಗೆ ಅದನ್ನು ಹೊಡೆದುರುಳಿಸಲಾಗಿದೆ. ಇದು ಕೆನಡಾ ಮತ್ತು ಅಮೆರಿಕದಲ್ಲಿ ನಡೆದಿರುವ 3ನೇ ಘಟನೆಯಾಗಿದೆ.

“ಕೆನಡಾದ ವಾಯುಪ್ರದೇಶ ನಿಯಮ ಉಲ್ಲಂಘಿಸಿದ ಅಪರಿಚಿತ ವಸ್ತುವನ್ನು ಹೊಡೆದುರುಳಿಸಲು ನಾನು ಆದೇಶಿಸಿದೆ. ಯುಕಾನ್ ಮೇಲೆ ವಸ್ತುವನ್ನು ಹೊಡೆದುರುಳಿಸಲಾಗಿದೆ. ಕೆನಡಿಯನ್ ಮತ್ತು ಯುಎಸ್ ವಿಮಾನಗಳನ್ನು ಸ್ಕ್ರಾಂಬಲ್ ಮಾಡಲಾಯಿತು, ಯುಎಸ್ ಎಫ್ -22 ವಸ್ತುವಿನ ಮೇಲೆ ಯಶಸ್ವಿಯಾಗಿ ಗುಂಡು ಹಾರಿಸಿತು ”ಎಂದು ಟ್ರೂಡೊ ಟ್ವೀಟ್ ಮಾಡಿದ್ದಾರೆ.

“ನಾನು ಇಂದು ಮಧ್ಯಾಹ್ನ ಅಧ್ಯಕ್ಷ ಬಿಡೆನ್ ಅವರೊಂದಿಗೆ ಮಾತನಾಡಿದೆ. ಕೆನಡಾದ ಪಡೆಗಳು ಈಗ ವಸ್ತುವಿನ ಅವಶೇಷಗಳನ್ನು ಕಲೆಹಾಕಿಕೊಳ್ಳುತ್ತವೆ ಮತ್ತು ವಿಶ್ಲೇಷಿಸುತ್ತವೆ. ಉತ್ತರ ಅಮೆರಿಕದ ಮೇಲೆ ನಿಗಾ ಇರಿಸಿದ್ದಕ್ಕಾಗಿ NORADಗೆ ಧನ್ಯವಾದಗಳು” ಎಂದು ಟ್ರೂಡೊ ಮತ್ತೊಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಅಧ್ಯಕ್ಷ ಜೋ ಬಿಡೆನ್ ಅವರ ಆದೇಶದ ಮೇರೆಗೆ ಯುಎಸ್ ಮಿಲಿಟರಿ ಫೈಟರ್ ಜೆಟ್ ಅಲಾಸ್ಕಾದ ದೂರದ ಉತ್ತರ ಕರಾವಳಿಯಿಂದ ಹಾರುತ್ತಿದ್ದ ಅಪರಿಚಿತ ವಸ್ತುವನ್ನು ಹೊಡೆದುರುಳಿಸಿದ ಒಂದು ವಾರದ ನಂತರ ಮತ್ತೆ ಈ ಘಟನೆ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!