ರಷ್ಯಾ ಸೇನಾ ಸಮರಾಭ್ಯಾಸ: ಭಾರತ ಸೇರಿದಂತೆ ಹಲವು ದೇಶಗಳು ಭಾಗಿ, ಅಮೆರಿಕಾ ಕಳವಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಳೆಯಿಂದ ರಷ್ಯಾ ಸೇನಾ ಸಮರಾಭ್ಯಾಸದಲ್ಲಿ ನಡೆಸಲಿದ್ದು, ಇದರಲ್ಲಿ ಭಾರತ ಕೂಡಾ ಭಾಗವಹಿಸಲಿದೆ. ಭಾರತ ಮಾತ್ರವಲ್ಲದೆ ಅನೇಕ ದೇಶಗಳು ಇದರಲ್ಲಿ ಭಾಗವಹಿಸುತ್ತವೆ. ಈ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ ಎಂದು ಶ್ವೇತಭವನ ಪ್ರಕಟಿಸಿದೆ. ಉಕ್ರೇನ್‌ನೊಂದಿಗೆ ರಷ್ಯಾದ ಯುದ್ಧದ ಪ್ರಾರಂಭದ ನಂತರ ನಡೆಸಲಾಗುತ್ತಿರುವ ಅತಿದೊಡ್ಡ ಮಿಲಿಟರಿ ಸಮರಾಭ್ಯಾಸ ಇವು. ರಷ್ಯಾ ಜೊತೆಗೂಡಿ ಇತರೆ ದೇಶಗಳು ಈ ಕಸರತ್ತು ನಡೆಸುತ್ತಿವೆ ಎಂದು ಅಮೆರಿಕ ಆತಂಕ ವ್ಯಕ್ತಪಡಿಸುತ್ತಿದೆ. ರಷ್ಯಾ ಪ್ರಸ್ತುತ ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವಾಗ ಈ ಕ್ರಮಗಳು ಸೂಕ್ತವಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೆನ್ ಜೀನ್-ಪಿಯರ್ ಹೇಳಿದ್ದಾರೆ.

ಈ ವಿಚಾರದಲ್ಲಿ ಭಾರತದ ಮೇಲೆ ಏಕೆ ಒತ್ತಡ ಹೇರಬಾರದು? ಎಂಬ ಪ್ರಶ್ನೆಗೂ ಅವರು ಉತ್ತರಿಸಿದ್ದು, ಕೇವಲ ಭಾರತ ಮಾತ್ರವಲ್ಲ ಎಲ್ಲ ದೇಶಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದೇನೆ ಎಂದರು. ರಷ್ಯಾದ ಈ ಕಾರ್ಯದ ಬಗ್ಗೆ ಯುಎಸ್ ಕ್ರಮ ತೆಗೆದುಕೊಳ್ಳುತ್ತದೆಯೇ? ಎಂಬ ಪ್ರಶ್ನೆಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ನಾನೇನೂ ಹೇಳುವುದಿಲ್ಲ ಎಂದಿದ್ದಾರೆ. ಈ ನಡುವೆ ವೋಸ್ಟಾಕ್-2022 ಹೆಸರಿನಲ್ಲಿ ರಷ್ಯಾ ನಾಳೆಯಿಂದ ಸೆಪ್ಟೆಂಬರ್ 7 ರವರೆಗೆ ಹಲವು ದೇಶಗಳೊಂದಿಗೆ ಮಿಲಿಟರಿ ಅಭ್ಯಾಸ ನಡೆಸಲಿದೆ. ಭಾರತ, ಚೀನಾ ಸೇರಿದಂತೆ ಹಲವು ದೇಶಗಳ ಸುಮಾರು 50 ಸಾವಿರ ಸೈನಿಕರು ಇದರಲ್ಲಿ ಭಾಗವಹಿಸಲಿದ್ದಾರೆ.

ತನ್ನ ಮಿತ್ರರಾಷ್ಟ್ರಗಳ ಸೇನಾ ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕಸರತ್ತುಗಳನ್ನು ನಡೆಸಲಾಗುತ್ತಿದೆ ಎಂದು ರಷ್ಯಾ ತಿಳಿಸಿದೆ. 140 ಯುದ್ಧವಿಮಾನಗಳು ಮತ್ತು 60 ಯುದ್ಧನೌಕೆಗಳು ಈ ಕವಾಯತುಗಳಲ್ಲಿ ಭಾಗವಹಿಸುತ್ತಿವೆ. ಭಾರತದೊಂದಿಗೆ ಬೆಲಾರಸ್, ತಜಕಿಸ್ತಾನ್ ಮತ್ತು ಮಂಗೋಲಿಯಾ ದೇಶಗಳು ಭಾಗವಹಿಸಲಿವೆ. ಕಳೆದ ವರ್ಷವೂ ರಷ್ಯಾದಲ್ಲಿ ಮಿಲಿಟರಿ ಕಸರತ್ತು ನಡೆಸಲಾಗಿತ್ತು. ಇದರಲ್ಲಿ 17 ದೇಶಗಳು ಭಾಗವಹಿಸಿದ್ದವು. ಅವುಗಳಲ್ಲಿ ಭಾರತ, ಚೀನಾ ಮತ್ತು ಪಾಕಿಸ್ತಾನಗಳೂ ಇದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!