Monday, September 26, 2022

Latest Posts

ವಿವಾದಾತ್ಮಕ ಟ್ವೀಟ್: ನಟ ಕಮಲ್ ಖಾನ್ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2020ರ ವಿವಾದಾತ್ಮಕ ಟ್ವೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಕಮಲ್.ಆರ್.ಖಾನ್ ಅವರನ್ನು ಮಂಗಳವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕಮಲ್ ಭಾರತದಲ್ಲಿ ಅವರು ನೆಲೆಸಿರಲಿಲ್ಲ, ಮಂಗಳವಾರ ಭಾರತಕ್ಕೆ ಬರುತ್ತಿದ್ದಂತೆ ಅವರನ್ನು ಬಂಧಿಸಲಾಗಿದ್ದು, ಮುಂಬೈನ ಬೊರಿವಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಮಾಲ್ ಖಾನ್ ಹಲವು ಸಲ ವಿವಾದಿತ ಟ್ವೀಟ್ ಮಾಡುವ ಮೂಲಕ ಸುದ್ದಿಯಾಗಿದ್ದರು. ಕೆ.ಜಿ.ಎಫ್-2, ಆರ್‌ಆರ್‌ಆರ್ ಸಿನಿಮಾಗಳನ್ನು ಟೀಕೆ ಮಾಡಿ ಟ್ವೀಟ್ ಮಾಡಿದ್ದರು. ಅಲ್ಲದೇ, ದಿವಂಗತ ನಟರಾದ ರಿಷಿ ಕಪೂರ್ ಹಾಗೂ ಇರ್ಫಾನ್ ಖಾನ್ ಅವರನ್ನು ಟೀಕಿಸಿ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆ ಎರಡು ಸಲ ಕಮಲ್ ಖಾನ್ ಅವರನ್ನು ಟ್ವಿಟರ್ ಬ್ಯಾನ್ ಮಾಡಿತ್ತು. ಶಿವಸೇನೆ ಪಕ್ಷದ ಕಾರ್ಯಕರ್ತ ರಾಹುಲ್ ಕನ್ವಾಲ್ ಎಂಬುವರು ಇಲ್ಲಿನ ಮಲಾಡ್ ಪೊಲೀಸರಿಗೆ ದೂರು ನೀಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!