Thursday, March 30, 2023

Latest Posts

ಪಾಕಿಸ್ತಾನ, ಚೀನಾ ಜೊತೆ ಭಾರತದ ಸಂಘರ್ಷ ಆಗುತ್ತಾ.. ಅಮೆರಿಕದ ವರದಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನ ಮತ್ತು ಚೀನಾ ನಡುವೆ ಹೆಚ್ಚಿದ ಉದ್ವಿಗ್ನತೆಯಿಂದಾಗಿ ಈ ಎರಡೂ ದೇಶಗಳೊಂದಿಗೆ ಭಾರತ ಸಂಘರ್ಷಕ್ಕಿಳಿಯುವ ಸಾಧ್ಯತೆಯಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ತನ್ನ ಸಂಸದರಿಗೆ ವರದಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಪಾಕಿಸ್ತಾನ, ಚೀನಾ ಪ್ರಚೋದನೆಗಳಿಗೆ ಮಿಲಿಟರಿ ಬಲದೊಂದಿಗೆ ಪ್ರತ್ಯುತ್ತರ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಭವಿಷ್ಯ ನುಡಿದಿದೆ.

ಭಾರತ ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಅಮೆರಿಕ ಕೂಡ ಕಳವಳ ವ್ಯಕ್ತಪಡಿಸಿದ್ದು, ಅಮೆರಿಕದ ಗುಪ್ತಚರ ಇಲಾಖೆ ಸಲ್ಲಿಸಿದ ವಾರ್ಷಿಕ ವರದಿಯಲ್ಲಿ ಈ ವಿಷಯಗಳನ್ನು ಉಲ್ಲೇಖಿಸಲಾಗಿದೆ. ವರದಿಯನ್ನು ಯುಎಸ್ ಸಂಸತ್ತಿಗೆ ಸಲ್ಲಿಸಲಾಗಿದೆ. ಈ ವರದಿಯ ಪ್ರಕಾರ, ಮುಖ್ಯವಾಗಿ ಪಾಕಿಸ್ತಾನ ಪ್ರಚೋದನಕಾರಿ ಕ್ರಮಗಳನ್ನು ಕೈಗೊಂಡರೆ ಭಾರತ ಸೇನಾ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ನರೇಂದ್ರ ಮೋದಿ ಸರ್ಕಾರ ಪಾಕಿಸ್ತಾನಕ್ಕೆ ಮೊದಲಿಗಿಂತ ವಿಭಿನ್ನವಾಗಿ ಮತ್ತು ಉಗ್ರವಾಗಿ ಪ್ರತಿಕ್ರಿಯಿಸಲಿದೆ. ಗಡಿ ವಿವಾದದಿಂದಾಗಿ ಚೀನಾ-ಭಾರತ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ. ಈ ವಿಚಾರವಾಗಿ ಉಭಯ ದೇಶಗಳು ಮಾತುಕತೆ ನಡೆಸುತ್ತಿದ್ದರೂ ಗಡಿಯಲ್ಲಿ ಸೇನಾ ಪಡೆಗಳ ನಿಯೋಜನೆ, ಶಸ್ತ್ರಾಸ್ತ್ರಗಳ ಹೆಚ್ಚಳ, ಅಭಿವೃದ್ಧಿ, ಗ್ರಾಮ, ಡ್ಯಾಮ್‌ ನಿರ್ಮಾಣದಂತಹ ವಿಷಯಗಳು ಆತಂಕಕಾರಿಯಾಗಿವೆ ಎಂದಿದೆ.

ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಎರಡು ದೇಶಗಳ ನಡುವಿನ ಮುಖಾಮುಖಿಯು ಅಂತಿಮವಾಗಿ ಅಮೆರಿಕಕ್ಕೂ ಸವಾಲಾಗಲಿದೆ ಎಂದು ವರದಿ ಬಹಿರಂಗಪಡಿಸಿದೆ. ಉಭಯ ದೇಶಗಳ ನಡುವೆ ಸಂಘರ್ಷವುಂಟಾದರೆ ಅಮೆರಿಕದ ಮಧ್ಯಸ್ಥಿಕೆ ಅಗತ್ಯ. ಮತ್ತೊಂದೆಡೆ ಭಾರತ-ಪಾಕ್ ಕದನ ವಿರಾಮವನ್ನು ಪಾಲಿಸುತ್ತಿದ್ದು, ಸಂಯಮದಿಂದ ಉಳಿದಿವೆ. ಆದರೆ, ಪಾಕಿಸ್ತಾನವು ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದು, ಹೀಗೆ ಮುಂದುವರಿದರೆ ಇಂತಹ ಪ್ರಚೋದನೆಗಳಿಗೆ ಮೋದಿ ಸರ್ಕಾರ ತೀವ್ರ ಪ್ರತ್ಯುತ್ತರ ನೀಡಲಿದೆ ಎಂದು ವರದಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!